ಹತ್ರಾಸ್ ಗ್ಯಾಂಗ್ ರೇಪ್ ಯುವತಿಗೆ ಆರೋಪಿಯೊಂದಿಗೆ ಸಂಬಂಧ ಇತ್ತು: ಬಿಜೆಪಿ ನಾಯಕ
ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆಯ ಚಾರಿತ್ರ್ಯ ಹರಣದ ಹೇಳಿಕೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ನಡುವೆ ಬಿಜೆಪಿ ನಾಯಕ ರಣ್ಜೀತ್ ಬಹದ್ದೂರ್ ಶ್ರೀವಾಸ್ತವ ಹೇಳಿಕೆ ನೀಡಿದ್ದು, ಸಂತ್ರಸ್ತ ಯುವತಿ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದಳು ಎಂದು ಹೇಳಿದ್ದಾರೆ.
Published: 07th October 2020 04:56 PM | Last Updated: 07th October 2020 05:58 PM | A+A A-

ರಣ್ ಜೀತ್ ಬಹದ್ದೂರ್ ಶ್ರೀವಾಸ್ತವ ಕ
ಬಾರಾಬಂಕಿ: ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆಯ ಚಾರಿತ್ರ್ಯ ಹರಣದ ಹೇಳಿಕೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ನಡುವೆ ಬಿಜೆಪಿ ನಾಯಕ ರಣ್ಜೀತ್ ಬಹದ್ದೂರ್ ಶ್ರೀವಾಸ್ತವ ಹೇಳಿಕೆ ನೀಡಿದ್ದು, ಸಂತ್ರಸ್ತ ಯುವತಿ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದಳು ಎಂದು ಹೇಳಿದ್ದಾರೆ.
ಬಾರಾಬಂಕಿಯ ನಾಯಕ ರಣ್ ಜೀತ್ ಬಹದ್ದೂರ್ ಶ್ರೀವಾಸ್ತವ ಅವರ ವಿರುದ್ಧ 44 ಕ್ರಿಮಿನಲ್ ಮೊಕದ್ದಮೆಗಳಿದ್ದು, ಇವರು ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆ ಕುರಿತು ಮಾತನಾಡಿದ್ದಾರೆ.
19 ವರ್ಷದ ದಲಿತ ಯುವತಿಯ ಮೇಲೆ ಭೀಕರ ದೌರ್ಜನ್ಯ ಎಸಗಿದ ಮೇಲ್ವರ್ಗದ ಯುವಕರು ಮುಗ್ಧರು, ಇದರಲ್ಲಿ ಯುವತಿಯೇ ದಾರಿತಪ್ಪಿದ್ದಳು ಎಂದು ಹೇಳಿದ್ದಾರೆ. ವಿವಾದಾತ್ಮಕವಾಗಿಯೇ ಸುದ್ದಿಯಲ್ಲಿರುವ ರಣ್ ಜೀತ್ ಬಹದ್ದೂರ್ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ.
ಯುವತಿಗೆ ಆರೋಪಿಯೊಂದಿಗೇ ಸಂಬಂಧವಿತ್ತು, ಅದಕ್ಕಾಗಿಯೇ ಆಕೆ ಕೃಷಿ ಜಮೀನಿಗೆ ಬರಲು ಆರೋಪಿಯನ್ನು ಬರಲು ಹೇಳಿದ್ದರು. ಇಂತಹ ಹೆಣ್ಣುಮಕ್ಕಳೇ ಕಬ್ಬಿನ ಗದ್ದೆ ಹಾಗೂ ಅರಣ್ಯಗಳಲ್ಲಿ ಸಾವನ್ನಪ್ಪುತ್ತಾರೆ ಎಂದು ಬಿಜೆಪಿ ನಾಯಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಆದರೆ ಈ ಯುವಕರು ಮುಗ್ಧರು ಎಂದು ಸ್ಪಷ್ಟವಾಗಿ ಹೇಳಬಲ್ಲೆ, ಸಿಬಿಐ ಚಾರ್ಜ್ ಶೀಟ್ ದಾಖಲಿಸುವವರೆಗೆ ಅವರನ್ನು ಬಿಡುಗಡೆ ಮಾಡಬೇಕು ಅಲ್ಲಿಯವರೆಗೆ ಅವರನ್ನು ಜೈಲಿನಲ್ಲಿರಿಸಿದರೆ ಅವರ ಕಳೆದುಹೋದ ಯೌವನವನ್ನು ಯಾರು ಹಿಂತಿರುಗಿಸುತ್ತಾರೆ? ಸರ್ಕಾರ ಪರಿಹಾರ ನೀಡಲಿದೆಯೇ? ಎಂದು ರಣ್ ಜೀತ್ ಬಹದ್ದೂರ್ ಪ್ರಶ್ನಿಸಿದ್ದಾರೆ.