ಉತ್ತರ ಪ್ರದೇಶ: ತಂದೆ, ಸಹೋದರನಿಂದಲೇ 14 ವರ್ಷದ ಗರ್ಭಿಣಿ ಕೊಲೆ; ಮರ್ಯಾದಾ ಹತ್ಯೆ ಶಂಕೆ!

ಉತ್ತರ ಪ್ರದೇಶದದಲ್ಲಿ 14 ವರ್ಷದ ಗರ್ಭಿಣಿ ಬಾಲಕಿಯನ್ನು ಹತ್ಯೆ ಮಾಡಲಾಗಿದ್ದು, ಪೊಲೀಸರು ಇದನ್ನು ಮರ್ಯಾದಾ ಹತ್ಯೆ ಎಂದು ಶಂಕಿಸುತ್ತಿದ್ದು, ಬಾಲಕಿಯ ಸಹೋದರ ಮತ್ತು ತಂದೆಯೇ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Published: 07th October 2020 01:55 PM  |   Last Updated: 07th October 2020 02:05 PM   |  A+A-


murder

ಹತ್ಯೆ (ಸಂಗ್ರಹ ಚಿತ್ರ)

Posted By : Srinivasamurthy VN
Source : PTI

ಶಹಜಹಾನ್ ಪುರ: ಉತ್ತರ ಪ್ರದೇಶದದಲ್ಲಿ 14 ವರ್ಷದ ಗರ್ಭಿಣಿ ಬಾಲಕಿಯನ್ನು ಹತ್ಯೆ ಮಾಡಲಾಗಿದ್ದು, ಪೊಲೀಸರು ಇದನ್ನು ಮರ್ಯಾದಾ ಹತ್ಯೆ ಎಂದು ಶಂಕಿಸುತ್ತಿದ್ದು, ಬಾಲಕಿಯ ಸಹೋದರ ಮತ್ತು ತಂದೆಯೇ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಉತ್ತರ ಪ್ರದೇಶದ ಶಹಜಹಾನ್ ಪುರದ ಸಿದೌಲಿ ಪ್ರದೇಶದ ದುಲ್ಹಾಪುರ್ ಗ್ರಾಮದ ಹೊರ ವಲಯದಲ್ಲಿ 14 ವರ್ಷದ ಬಾಲಕಿ ದೇಹ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಬಾಲಕಿ ಗರ್ಭಿಣಿಯಾಗಿದ್ದು, ತನ್ನ ಈ ಸ್ಥಿತಿಗೆ ಕಾರಣ ಯಾರು ಎಂದು ಕೇಳಿದಾಗ ಆ ಬಗ್ಗೆ ಬಾಲಕಿ  ಉತ್ತರ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ತಂದೆ ತನ್ನ ಹಿರಿಯ ಮಗನೊಂದಿಗೆ ಸೇರಿ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ. ಅಲ್ಲದೆ ದೇಹವನ್ನು ಗ್ರಾಮದ ಹೊರಗೆ ಎಸೆದಿದ್ದಾರೆ. ದಾರಿಹೋಕರು ಇದನ್ನು ಗಮನಿಸಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಎಸ್ ಪಿ ಎಸ್ ಆನಂದ್ ಅವರು, ಬಾಲಕಿ ಆರು ತಿಂಗಳ ಗರ್ಭಿಣಿ ಎಂದು ವೈದ್ಯಕೀಯ ಪರೀಕ್ಷೆಗಳಿಂದ ತಿಳಿದುಬಂದಿದ್ದು, ಆಕೆ ತನಗೆ ಪರಿಚಿತ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಗರ್ಭವತಿಯಾಗಿದ್ದಳು. ಈ ವಿಚಾರ ಬಾಲಕಿಯ ಪೋಷಕರಿಗೆ ತಿಳಿದು, ಅವರು ಆಕೆಯನ್ನು  ಪ್ರಶ್ನಿಸಿದ್ದಾರೆ. ಆಕೆ ಉತ್ತರ ನೀಡದಿದ್ದಾಗ ಕ್ರೋಧಗೊಂಡು ಆಕೆಯನ್ನು ಕಳೆದ ಸೆಪ್ಟೆಂಬರ್ 24ರಂದು ಹತ್ಯೆಗೈದಿದ್ದಾರೆ. ಆದರೆ ಬಳಿಕ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ಐಪಿಸಿ ಸೆಕ್ಷನ್ 302, 201ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಾಲಕಿಯ ತಂದೆ ಮತ್ತು  ಸಹೋದರನನ್ನು ವಶಕ್ಕೆ ಪಡೆಯಲಾಗಿದೆ. ಅಂತೆಯೇ ಬಾಲಕಿಯ ಗರ್ಭಕ್ಕೆ ಕಾರಣವಾದ ವ್ಯಕ್ತಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll

ಎನ್‌ಡಿಎ ಆಡಳಿತದಲ್ಲಿ ಭಯೋತ್ಪಾದಕ ದಾಳಿಯಿಂದ ಭಾರತ ಸುರಕ್ಷಿತವಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp