ಹಾಲು ಕುಡಿಯುವ ನೆಪದಲ್ಲಿ ಒಂಟಿಯಾಗಿದ್ದ ಕೆಲಸದಾಳಿನ ಮೇಲೆ ಕೃಷಿ ಮಾಲೀಕನಿಂದ ಅತ್ಯಾಚಾರ!

ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಮಹಿಳೆಯ ಮೇಲೆ ಕೃಷಿ ಮಾಲೀಕನೇ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗಾಂಧಿನಗರ: ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಮಹಿಳೆಯ ಮೇಲೆ ಕೃಷಿ ಮಾಲೀಕನೇ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. 

ಗುಜರಾತ್ ನ ಕಚ್ ಜಿಲ್ಲೆಯಲ್ಲಿ ಈ ಘಟನೆ ನಡೆಸಿದೆ. ಆರೋಪಿಯನ್ನು ರಾಂಚೋಡ್ ಅಹೀರ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಅಹಮದಾಬಾದ್ ನ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್ಐಆರ್ ದಾಖಲಿಸಲಾಗಿದೆ. 

ಸೆಪ್ಟೆಂಬರ್ 16ರಂದು ಅಹೀರ್ ತನ್ನ ಜಮೀನಿನಲ್ಲಿ ಕೃಷಿ ಕಾರ್ಮಿಕ ಕೆಲಸ ಮಾಡಿಕೊಂಡಿದ್ದ ಮಹಿಳೆ ಗುಡಿಸಿಲಿನಲ್ಲಿ ಒಬ್ಬಳೆ ಇರುವುದನ್ನು ನೋಡಿಕೊಂಡು ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಲಾಕ್ ಡೌನ್ ನಂತರ ದಂಪತಿ ಮತ್ತು ಇತರ ಇಬ್ಬರು ಸಂಬಂಧಿಕರು ಮೇ 25ರಂದು ಆರೋಪಿ ಅಹೀರ್ ಜಮೀನಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಸೆಪ್ಟೆಂಬರ್ 16ರಂದು ಸಂಜೆ ಸಂತ್ರಸ್ತೆ ಪತಿ ಹಳ್ಳಿಗೆ ಹೋಗಿದ್ದರು. ಈ ವೇಳೆ ಪತಿ ಫೋನ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು. 

ಈ ವೇಳೆ ಸಂತ್ರಸ್ತೆಯ ಪತಿ ಫೋನ್ ಗೆ ಅಹೀರ್ ಕರೆ ಮಾಡಿದ್ದಾನೆ. ಫೋನ್ ಕರೆ ಸ್ವೀಕರಿಸಿದ ಸಂತ್ರಸ್ತೆ ತನ್ನ ಗಂಡ ಊರಿಗೆ ಹೋಗಿದ್ದು ಬಂದ ನಂತರ ಕೆಲಸ ಮಾಡಿಕೊಡುವುದಾಗಿ ಹೇಳುತ್ತೇನೆ ಎಂದು ತಿಳಿಸಿದ್ದಾಳೆ. ಮನೆಯಲ್ಲಿ ಒಬ್ಬರೆ ಇರುವುದನ್ನು ಗಮನಿಸಿದ ಅಹೀರ್ ಹಾಲು ತಂದು ಬಿಸಿ ಮಾಡಿಕೊಡುವಂತೆ ಹೇಳಿದ್ದಾನೆ. ನಂತರ ಮನೆಯೊಳಗೆ ನುಗ್ಗಿ ಎರಡು ಬಾರಿ ಅತ್ಯಾಚಾರ ನಡೆಸಿರುವುದಾಗಿ ಸಂತ್ರಸ್ತೆ ದೂರಿ ನಲ್ಲಿ ತಿಳಿಸಿದ್ದಾಳೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com