ಹತ್ರಾಸ್ ಪ್ರಕರಣ: ಸಂತ್ರಸ್ತೆಯ ಸಹೋದರ, ತಾಯಿಯಿಂದಲೇ ಕೊಲೆ; ಪ್ರಮುಖ ಆರೋಪಿಯಿಂದ ಎಸ್ ಪಿಗೆ ಪತ್ರ!

ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣದ :ಪ್ರಮುಖ ಆರೋಪಿ ಉತ್ತರ ಪ್ರದೇಶ ಪೊಲೀಸರಿಗೆ ಪತ್ರ ಬರೆದಿದ್ದು, ಸಹೋದರ ಮತ್ತು ತಾಯಿಯೇ 19 ವರ್ಷದ ತಮ್ಮ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ. 

Published: 08th October 2020 10:45 AM  |   Last Updated: 08th October 2020 12:25 PM   |  A+A-


file pic

ಹತ್ರಾಸ್ ರೇಪ್ ಪ್ರಕರಣದ ಸಂತ್ರಸ್ತೆಯ ಅಂತ್ಯ ಸಂಸ್ಕಾರ ನೆರವೇರಿಸುತ್ತಿರುವ ಪೊಲೀಸರು (ಸಂಗ್ರಹ ಚಿತ್ರ)

Posted By : Srinivas Rao BV
Source : Online Desk

ನವದೆಹಲಿ: ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ ಆರೋಪಿ ಉತ್ತರ ಪ್ರದೇಶ ಪೊಲೀಸರಿಗೆ ಪತ್ರ ಬರೆದಿದ್ದು, ಸಹೋದರ ಮತ್ತು ತಾಯಿಯೇ 19 ವರ್ಷದ ತಮ್ಮ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ. 

ನಾಲ್ವರೂ ಆರೋಪಿಗಳೂ ಈ ಪತ್ರಕ್ಕೆ ಸಹಿ ಹಾಕಿದ್ದು, ಈ ಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರ ಏನೂ ಇಲ್ಲ, ಆದರೂ ಸಹ ನಮ್ಮನ್ನು ವಿನಾ ಕಾರಣ ಈ ಪ್ರಕರಣದಲ್ಲಿ ಸುಳ್ಳು ಆರೋಪಗಳೊಂದಿಗೆ ಸಿಲುಕಿಸಲಾಗುತ್ತಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ. 

ಸಂದೀಪ್, ರಾಮು, ಲವಕುಶ್ ಹಾಗೂ ರವಿ ಅವರುಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪತ್ರ ಬರೆದಿದ್ದು, ಹೆಬ್ಬೆಟ್ಟು ಹಾಕಿದ್ದಾರೆ. 

ಸಂತ್ರಸ್ತೆಯ ಪರಿಚಯ ನನಗೆ ಇತ್ತು. ಆಕೆಯೊಂದಿಗೆ ದೀರ್ಘಕಾಲದಿಂದಲೂ ಸಂಪರ್ಕದಲ್ಲಿದ್ದೆ. ಆದರೆ ಈ ಕೊಲೆ ಅಥವಾ ಅತ್ಯಾಚಾರವನ್ನು ನಾನು ಮಾಡಿಲ್ಲ. ನಾನು ಸಂತ್ರಸ್ತ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಆಕೆಯ ಸಾವಿಗೆ ಆಕೆಯ ಸಹೋದರ ಹಾಗೂ ತಾಯಿಯೇ ಕಾರಣ, ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ದಾಖಲಿಸಲಾಗಿದೆ ಎಂದು ಆರೋಪಿ ಸಂದೀಪ್ ಪತ್ರದಲ್ಲಿ ತಿಳಿಸಿದ್ದಾನೆ.

Stay up to date on all the latest ರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp