ದಲಿತ ಮುಖಂಡ ಪಾಸ್ವನ್ ಸಾವು ಬಿಹಾರ ಚುನಾವಣೆ ಅನಿಶ್ಚಿತತೆಯ ಮತ್ತೊಂದು ಅಂಶ!

ಲೋಕ ಜನಶಕ್ತಿ ಪಾರ್ಟಿ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿ ಈಗಾಗಲೇ ತಯಾರಿ ನಡೆಸುತ್ತಿರುವಂತೆಯೇ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವನ್ ಅವರ ಸಾವು ಬಿಹಾರ ವಿಧಾನಸಭಾ ಚುನಾವಣೆಯ ಅನಿಶ್ಚಿತತೆಯ ಮತ್ತೊಂದು ಅಂಶವಾಗಿ ಕಾಣಿಸುತ್ತಿದೆ.
ರಾಮ್ ವಿಲಾಸ್ ಪಾಸ್ವನ್
ರಾಮ್ ವಿಲಾಸ್ ಪಾಸ್ವನ್

ನವದೆಹಲಿ: ಲೋಕ ಜನಶಕ್ತಿ ಪಾರ್ಟಿ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿ ಈಗಾಗಲೇ ತಯಾರಿ ನಡೆಸುತ್ತಿರುವಂತೆಯೇ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವನ್ ಅವರ ಸಾವು ಬಿಹಾರ ವಿಧಾನಸಭಾ ಚುನಾವಣೆಯ ಅನಿಶ್ಚಿತತೆಯ ಮತ್ತೊಂದು ಅಂಶವಾಗಿ ಕಾಣಿಸುತ್ತಿದೆ.

ಎಲ್ ಜೆಪಿಯ ಕೋಟ್ಯಾಂತರ ದಲಿತ ಮತದಾರರು  ರಾಜಕೀಯ ಉತ್ತರಾಧಿಕಾರಿ ಚಿರಾಗ್ ಪಾಸ್ವಾನ್ ಜೊತೆ ಹೇಗೆ ಸಂಬಂಧ ಹೊಂದಿದ್ದಾರೆ ಮತ್ತು ರಾಮ್ ವಿಲಾಸ್ ಪಾಸ್ವನ್ ಅವರ ನಿಧನವು ಯಾವ ರೀತಿಯಲ್ಲಿ ಸಹಾನೂಭೂತಿಯ ಅಲೆಯನ್ನು ಎಬ್ಬಿಸಲಿದೆ ಎಂಬುದನ್ನು ಅವಲಂಬಿಸಿದೆ ಎಂದು ರಾಜಕೀಯ ತಜ್ಞರು ನಂಬಿದ್ದಾರೆ.

ರಾಜ್ಯದಲ್ಲಿ  ದಲಿತ ಯುವ ನಾಯಕರು ಯಾರು ಇಲ್ಲದಿರುವುದು 37 ವರ್ಷದ ಎಲ್ ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಗೆ ಅನುಕೂಲವಾಗುವ ಸಾಧ್ಯತೆಯಿದೆ.ಚಿರಾಗ್ ಪಾಸ್ವನ್ ಹೇಗೆ ತಮ್ಮ ಸ್ಥಾನವನ್ನು ಇಟ್ಟುಕೊಳ್ಳಲಿದ್ದಾರೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಅವರ ತಂದೆ ತಳಮಟ್ಟದ ಜನರೊಂದಿಗೆ ಸಂಪರ್ಕ ಹೊಂದಿದ್ದರು. ಈಗ ಚಿರಾಗ್ ಪಾಸ್ವಾನ್ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಬಿಹಾರದ ಮುಖಂಡರೊಬ್ಬರು ತಿಳಿಸಿದ್ದಾರೆ.

ಎಲ್ ಜೆಪಿಯೊಂದಿಗೆ ನಾನಾ ಕಾರಣಗಳಿಂದ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್  ನೇತೃತ್ವದ ಜೆಡಿಯು ದಲಿತ ನಾಯಕನ ಸಾವು ಯಾವುದೇ ರೀತಿಯ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಿದೆ.

ಐದು ದಶಕಗಳ ಕಾಲ ದಲಿತ ನಾಯಕನಾಗಿ ರಾಜ್ಯದಲ್ಲಿ ಗುರುತಿಸಿಕೊಂಡಿದ್ದ 74 ವರ್ಷದ ರಾಮ್ ವಿಲಾಸ್ ಪಾಸ್ವನ್ ಚುನಾವಣೆ ಹತ್ತಿರದಲ್ಲಿಯೇ ಸಾವನ್ನಪ್ಪಿರುವುದರಿಂದ ಚಿರಾಗ್ ಪಾಸ್ವನ್ ವಿರುದ್ಧ ಯಾವುದೇ ಪ್ರತಿಸ್ಪರ್ಧಿಗಳು ಆಕ್ರಮಣ ಮಾಡುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.

ಅಕ್ಟೋಬರ್ 28 ರಿಂದ ಪ್ರಾರಂಭವಾಗುವ ಮೂರು ಹಂತದ ಚುನಾವಣೆಗಳಲ್ಲಿ ಕೇಸರಿ ಪಕ್ಷದ ಮಿತ್ರ ಪಕ್ಷ  ಜೆಡಿಯು ಮೇಲೆ  ತನ್ನ ವರಸೆ ತೋರಿಸಲು ಮತದಾನದ ನಂತರ ಬಿಜೆಪಿ ಮಿತ್ರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬಲವಾದ ಬೆಂಬಲಿಗ ಎಂದು ಎಲ್ ಜೆಪಿ  ಬಿಂಬಿಸಿಕೊಳ್ಳಬಹುದು.ಆ ಆದಾಗ್ಯೂ, ಬಿಜೆಪಿ ನಿತೀಶ್ ಕುಮಾರ್ ನಾಯಕತ್ವದ ಮೇಲೆ ನಂಬಿಕೆ ಹೊಂದಿದೆ.

ಜೆಡಿಯು ಪ್ರತಿಸ್ಪರ್ಧಿಯಾಗಿ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಚಿರಾಗ್ ಪಾಸ್ವನ್ ಈಗಾಗಲೇ ಹೇಳಿದ್ದಾರೆ. 243 ವಿಧಾನಸಭಾ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಜೆಡಿಯು 122 ಹಾಗೂ ಬಿಜೆಪಿ 121 ಸ್ಥಾನಗಳಲ್ಲಿ ಸ್ಪರ್ಧಿಸಲು ಈಗಾಗಲೇ ಸೀಟು ಹೊಂದಾಣಿಕೆ ಮಾಡಿಕೊಂಡಿವೆ.

ಅಕ್ಟೋಬರ್ 28 ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 10 ರಂದು ಮತ ಎಣಿಕೆ ನಡೆಯಲಿದೆ. ರಾಮ್ ವಿಲಾಸ್ ಪಾಸ್ವನ್  ಪ್ರಮುಖ ದಲಿತ ನಾಯಕರಾಗಿದ್ದು, ಅನೇಕ ಸರ್ಕಾರಗಳ ಅವಧಿಯಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ನಾಳೆ ಪಾಟ್ನಾದಲ್ಲಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com