ಹತ್ರಾಸ್ 'ಹತ್ಯಾಚಾರ' ಪ್ರಕರಣ: ಸಂತ್ರಸ್ತೆ ಕುಟುಂಬದ ಭದ್ರತೆಗಾಗಿ ಸಿಸಿಟಿವಿ, 60 ಪೊಲೀಸರ ನಿಯೋಜನೆ
ಹತ್ರಾಸ್ ದಲಿತ ಯುವತಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂತ್ರಸ್ತೆ ಕುಟುಂಬದ ಭದ್ರತೆಗಾಗಿ ಅವರ ಮನೆ ಬಳಿ ಸಿಸಿಟಿವಿ ಮತ್ತು 60 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಶುಕ್ರವಾರ ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
Published: 09th October 2020 03:54 PM | Last Updated: 09th October 2020 03:54 PM | A+A A-

ಪೊಲೀಸ್ ಭದ್ರತೆ
ಹತ್ರಾಸ್: ಹತ್ರಾಸ್ ದಲಿತ ಯುವತಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂತ್ರಸ್ತೆ ಕುಟುಂಬದ ಭದ್ರತೆಗಾಗಿ ಅವರ ಮನೆ ಬಳಿ ಸಿಸಿಟಿವಿ ಮತ್ತು 60 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಶುಕ್ರವಾರ ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ಕುಟುಂಬ ಸದಸ್ಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಲ್ಲಿನ ಬಲ್ಗರಿ ಪ್ರದೇಶಲ್ಲಿ ಮಹಿಳಾ ಪೊಲೀಸರು ಸೇರಿದಂತೆ 60 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 12 ಗಂಟೆಗಳ ಪಾಳಿಯಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ನೋಡಲ್ ಅಧಿಕಾರಿಯಾಗಿ ಲಖನೌದಿಂದ ಹತ್ರಾಸ್‌ಗೆ ಬಂದಿರುವ ಡಿಐಜಿ ಶಲಾಭ್ ಮಾಥುರ್ ಅವರು ಹೇಳಿದ್ದಾರೆ.
ಈ ಪೊಲೀಸ್ ಸಿಬ್ಬಂದಿಯ ಮೇಲ್ವಿಚಾರಣೆಗಾಗಿ ಗೆಜೆಟೆಡ್ ಅಧಿಕಾರಿಯನ್ನು ಸಹ ನಿಯೋಜಿಸಲಾಗಿದ್ದು, ಅಗತ್ಯವಿದ್ದರೆ ಅಲ್ಲಿ ಕಂಟ್ರೋಲ್ ರೂಮ್ ಕೂಡ ಸ್ಥಾಪಿಸಲಾಗುವುದು ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ಸಂತ್ರಸ್ತೆಯ ಮನೆಯ ಸುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, 24 ಗಂಟೆಗಳ ನಿಗಾ ವಹಿಸಲಾಗುತ್ತಿದೆ ಎಂದು ಮಾಥುರ್ ಹೇಳಿದ್ದಾರೆ.