ಆ್ಯಂಟಿ ರೇಡಿಯೇಷನ್ ಮಿಸೈಲ್ ರುದ್ರಮ್-1​ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಡಿಆರ್ ಡಿಒದ ಬಹು ನಿರೀಕ್ಷಿತ ಆ್ಯಂಟಿ ರೇಡಿಯೇಷನ್ ಮಿಸೈಲ್ ರುದ್ರಮ್-1​ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.
ಸುಖೋಯ್-30 ಯುದ್ಧ ವಿಮಾನಕ್ಕೆ ರುದ್ರಮ್-1 ಆ್ಯಂಟಿ ರೇಡಿಯೇಷನ್ ಮಿಸೈಲ್​ ಅನ್ನು ಅಳವಡಿಸಿ ಪರೀಕ್ಷೆ
ಸುಖೋಯ್-30 ಯುದ್ಧ ವಿಮಾನಕ್ಕೆ ರುದ್ರಮ್-1 ಆ್ಯಂಟಿ ರೇಡಿಯೇಷನ್ ಮಿಸೈಲ್​ ಅನ್ನು ಅಳವಡಿಸಿ ಪರೀಕ್ಷೆ

ನವದೆಹಲಿ: ಡಿಆರ್ ಡಿಒದ ಬಹು ನಿರೀಕ್ಷಿತ ಆ್ಯಂಟಿ ರೇಡಿಯೇಷನ್ ಮಿಸೈಲ್ ರುದ್ರಮ್-1​ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

ಭಾರತೀಯ ವಾಯ ಪಡೆಗೆ ಆನೆ ಬಲ ನೀಡುವ ಗೇಮ್ ಚೇಂಜರ್ ಕ್ಷಿಪಣಿ ಎಂದೇ ಕರೆಯಲಾಗುತ್ತಿರುವ ಡಿಆರ್ ಡಿಒ ನಿರ್ಮಿತ ಬಹು ಕುತೂಹಲ ಕೆರಳಿಸಿದ್ದ ರುದ್ರಮ್-1​ ಸ್ವದೇಶಿ ನಿರ್ಮಿತ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಒಡಿಶಾ ಕರಾವಳಿ ತೀರದಲ್ಲಿ ಡಿಆರ್ ಡಿಒ ನಡೆಸಿದ ರುದ್ರಮ್-1 ಕ್ಷಿಪಣಿ  ಪರೀಕ್ಷೆ ಯಶಸ್ವಿಯಾಗಿದೆ. ಸುಖೋಯ್-30 ಯುದ್ಧ ವಿಮಾನಕ್ಕೆ ರುದ್ರಮ್-1 ಆ್ಯಂಟಿ ರೇಡಿಯೇಷನ್ ಮಿಸೈಲ್​ ಅನ್ನು ಅಳವಡಿಸಿ ಪರೀಕ್ಷೆ ನಡೆಸಲಾಯಿತು. ಕ್ಷಿಪಣಿ ನಿಖರವಾದ ಸಮಯಕ್ಕೆ ಕರಾರುವಕ್ಕಾಗಿ ಗುರಿಯನ್ನು ಭೇಧಿಸಿದೆ.  

ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (DRDO) ಅಭಿವೃದ್ಧಿ ಪಡಿಸಿದ ಈ ಕ್ಷಿಪಣಿ ಪ್ರಯೋಗ ಯಶಸ್ವಿಯಾದ ಬೆನ್ನಲ್ಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ತಿಳಿಸಿದ್ದಾರೆ. ರುದ್ರಂ-1 ಮಿಸೈಲ್ ಭಾರತದ ಏರ್‌ಫೋರ್ಸ್‌ ಯುದ್ಧ ವಿಮಾನಗಳಿಗೆ ಅತ್ಯಾಧುನಿಕ ಹಾಗೂ ವಿಕಿರಣ  ಭೇದಿಸುವ ಯುದ್ಧತಂತ್ರದ ಸಾಮರ್ಥ್ಯವನ್ನು ಒದಗಿಸಲಿದೆ. ಹಲವು ಹಂತ ಹಾಗೂ ಹಲವು ಭಾಗಗಳಲ್ಲಿ ರುದ್ರಂ-1 ಮಿಸೈಲ್ ಪರೀಕ್ಷೆ ನಡೆಸಲಾಗಿದ್ದು, ಯಶಸ್ವಿಯಾಗಿದೆ. 

ಪ್ರಾಯೋಗಿಕ ಹಂತದಲ್ಲಿ ಯುದ್ಧವಿಮಾನವಾದ ಸುಖೋಯ್-30MKI ಮೂಲಕ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ಯಶಸ್ವಿಯಾಗಿರುವ ಕಾರಣ ಇದೀಗ ಮಿರಾಜ್ 2000, ಜಾಗ್ವಾರ್, HAL ತೇಜಸ್ ಹಾಗೂ HAL ಮಾರ್ಕ್ ಯುದ್ಧ ವಿಮಾನದಲ್ಲೂ ಅಳವಡಿಸಲಾಗುತ್ತದೆ ಎಂದು ಡಿಆರ್ ಡಿಒ ಮೂಲಗಳು ತಿಳಿಸಿವೆ.

ರುದ್ರಂ-1 ಸಿಂಗಲ್ ಸ್ಟೇಜ್ ಮಿಸೈಲ್ ಆಗಿದ್ದು, 140 ಕೆಜಿ ತೂಕ ಹೊಂದಿದೆ. 100 ರಿಂದ 150 ಕಿಲೋಮೀಟರ್ ದೂರದ ಸಾಮರ್ಥ್ಯವನ್ನು ಹೊಂದಿರುವ ಈ ಕ್ಷಿಪಣಿ, ವಿಕಿರಣ ವಿರೋಧಿ ಕ್ಷಿಪಣಿಯಾಗಿದೆ. ಸೂಪರ್‌ಸಾನಿಕ್, ಬ್ರಹ್ಮೋಸ್ ಬಳಿಕ ರಷ್ಯಾ ಜೊತೆ ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ಈ ಕ್ಷಿಪಣಿ ಫೈಟರ್  ವಿಮಾನದ ಮೂಲಕ ಗಾಳಿಯಿಂದ ನೆಲಕ್ಕೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಇದು ಡ್ಯುಯಲ್-ಪಲ್ಸ್ ಘನ ರಾಕೆಟ್ ಮೋಟಾರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಗಡಿಯಲ್ಲಿ ಶತ್ರುಗಳ ಚಲನವಲನಗಳ ಮೇಲೆ ನಿಗಾ ಇಡಲಿದೆ. ಶತ್ರುಗಳ ರಾಡಾರ್ ಕಣ್ತಪ್ಪಿಸಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.

ರುದ್ರಮ್-1 ಕ್ಷಿಪಣಿಯ ವಿಶೇಷತೆಗಳು!
ಶತ್ರು ರಾಷ್ಟ್ರಗಳ ದಾಳಿಯನ್ನ ನಿಗ್ರಹ ಮಾಡುವ ಉದ್ದೇಶದಿಂದ ಈ ರುದ್ರಮ್-1 ಮಿಸೈಲ್​ ಅಭಿವೃದ್ಧಿ ಪಡಿಸಲಾಗಿದೆ. ಭಾರತೀಯ ವಾಯುಸೇನೆಯ ಶಸ್ತ್ರಾಗಾರದ ಮೊದಲ ಆರ್​ಎಆರ್​ಎಂ ಕ್ಷಿಪಣಿ ಇದಾಗಿದ್ದು, ಸಿಂಗಲ್​ ಸ್ಟೇಜ್​ ಮಿಸೈಲ್ ಆಗಿರುವ ರುದ್ರಮ್ 1 5.5 ಮೀಟರ್ ಉದ್ದವಿದೆ. 140 ಕೆಜಿ ಭಾರ ತೂಕ  ಹೊಂದಿರುವ ಈ ಕ್ಷಿಪಣಿ,  ಆ್ಯಂಟಿ ರೇಡಿಯೇಷನ್ ಮಿಸೈಲ್ ಆಗಿದೆ. ಈ ಕ್ಷಿಪಣಿಯನ್ನು ಡ್ಯುಯಲ್-ಪಲ್ಸ್ ರಾಕೆಟ್ ಮೋಟರ್‌ನಿಂದ ಉಡಾಯಿಸಲಾಗುತ್ತದೆ. ಶತ್ರುಗಳ ಮೇಲೆ ಕಣ್ಗಾವಲು, ಟ್ರ್ಯಾಕಿಂಗ್ ಮಾಡಲು ಈ ಕ್ಷಿಪಣಿ ಸಹಾಯ ಮಾಡಲಿದೆ. ಜೊತೆಗೆ ಶತ್ರುಗಳ ಸಂವಹನ ವ್ಯವಸ್ಥೆಯನ್ನೂ ನಾಶ ಮಾಡುವ ಶಕ್ತಿ  ಹೊಂದಿದೆ. ರುದ್ರಮ್-1 ಸ್ವದೇಶಿ ನಿರ್ಮಿತ ಕ್ಷಿಪಣಿಯಾಗಿದ್ದು, ದೇಶದಲ್ಲಿಯೇ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಹೈಸ್ಪೀಡ್ ಕ್ಷಿಪಣಿ ಇದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com