ಕೇರಳ: ಪದ್ಮನಾಭಸ್ವಾಮಿಯ 10 ಅರ್ಚಕರಿಗೆ ಕೊರೋನಾ ಪಾಸಿಟಿವ್, ದೇವಸ್ಥಾನ ಬಂದ್

ಕೇರಳದ ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ 10 ಅರ್ಚಕರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಅಕ್ಟೋಬರ್ 15 ರವರೆಗೆ ದೇವಸ್ಥಾನ ಬಂದ್ ಮಾಡಲಾಗಿದೆ.

Published: 09th October 2020 04:56 PM  |   Last Updated: 09th October 2020 04:56 PM   |  A+A-


padmanabh

ಪದ್ಮನಾಭಸ್ವಾಮಿ ದೇವಸ್ಥಾನ

Posted By : Lingaraj Badiger
Source : The New Indian Express

ತಿರುವನಂತಪುರಂ: ಕೇರಳದ ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ 10 ಅರ್ಚಕರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಅಕ್ಟೋಬರ್ 15 ರವರೆಗೆ ದೇವಸ್ಥಾನ ಬಂದ್ ಮಾಡಲಾಗಿದೆ.

ದೇವಾಲಯದ ಅಧಿಕಾರಿಗಳ ಪ್ರಕಾರ, ದೈನಂದಿನ ಪೂಜೆಯನ್ನು ತಂತ್ರಿಗಳು ನಡೆಸುತ್ತಾರೆ. ಆದರೆ ಅಕ್ಟೋಬರ್ 15 ರವರೆಗೆ ದೇವಾಲಯ ಪ್ರವೇಶಿಸಲು ಭಕ್ತರಿಗೆ ಅನುಮತಿ ಇಲ್ಲ.

ಲಾಕ್ ಡೌನ್ ನಂತರ ಆಗಸ್ಟ್ 27ರಿಂದ ದೇವಾಲಯವನ್ನು ಮತ್ತೆ ತೆರೆಯಲಾಗಿದ್ದು, ಒಂದು ಬಾರಿಗೆ 35 ಭಕ್ತರು ದೇವಾಲಯ ಪ್ರವೇಶಿಸಲು ಅನುಮತಿ ನೀಡಲಾಗಿತ್ತು ಮತ್ತು ಒಂದು ದಿನದಲ್ಲಿ ಒಟ್ಟು 665 ಭಕ್ತರು ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿತ್ತು.

ದೇವಾಲಯ ಮತ್ತೆ ತೆರೆದ ನಂತರ ದೇವಸ್ಥಾನದ ಹಲವು ಸಿಬ್ಬಂದಿ ಮತ್ತು ಅರ್ಚಕರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಈಗ ದೇವಸ್ಥಾವನ್ನು ಮತ್ತೆ ಕೆಲವು ದಿನಗಳವರೆಗೆ ಬಂದ್ ಮಾಡಲು ನಿರ್ಧರಿಸಲಾಗಿದೆ.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp