ರಿಷಿಕೇಶ: ಯೋಗ ನಿರತ ಅಮೆರಿಕದ ಮಹಿಳೆ ಮೇಲೆ ಅತ್ಯಾಚಾರ

ಯೋಗ ನಿರತ 37 ವರ್ಷದ ವಿದೇಶಿ ಮಹಿಳೆ ಮೇಲೆ ಸ್ಥಳೀಯ ವ್ಯಕ್ತಿ ಅತ್ಯಾಚಾರ ಎಸಗಿರುವ ಘಟನೆ ರಿಷಿಕೇಶದಲ್ಲಿ ನಡೆದಿರುವ ಸುದ್ದಿ ಶುಕ್ರವಾರ ಬೆಳಕಿಗೆ ಬಂದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಿಷಿಕೇಶ್: ಯೋಗ ನಿರತ 37 ವರ್ಷದ ವಿದೇಶಿ ಮಹಿಳೆ ಮೇಲೆ ಸ್ಥಳೀಯ ವ್ಯಕ್ತಿ ಅತ್ಯಾಚಾರ ಎಸಗಿರುವ ಘಟನೆ ರಿಷಿಕೇಶದಲ್ಲಿ ನಡೆದಿರುವ ಸುದ್ದಿ ಶುಕ್ರವಾರ ಬೆಳಕಿಗೆ ಬಂದಿದೆ. 

ರಿಷಿಕೇಶದಲ್ಲಿ ತಂಗಿದ್ದ ವಿದೇಶಿ ಮಹಿಳೆ ಮೇಲೆ ಸ್ಥಳೀಯ ವ್ಯಕ್ತಿಯೋರ್ವ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ. ಯುವತಿ ನೀಡಿರುವ ಪೊಲೀಸ್ ದೂರಿನಂತೆ, ಯೋಗ ಅಭ್ಯಾಸಕ್ಕಾಗಿ ರಿಷಿಕೇಶಕ್ಕೆ ಬಂದಿದ್ದ ಮಹಿಳೆ ಜೊತೆ ಸ್ನೇಹ ಬೆಳೆಸಿದ್ದ ವ್ಯಕ್ತಿ ಆಕೆ ಯೋಗ ಮಾಡುತ್ತಿದ್ದಾಗ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ  ಎಂದು ಹೇಳಲಾಗಿದೆ.

ಯೋಗಾಭ್ಯಾಸ ಮಾಡುತ್ತಿದ್ದ ಮಹಿಳೆ ಬಳಿ ಬಂದಿದ್ದ ಸ್ಥಳೀಯ ವ್ಯಕ್ತಿ, ಯೋಗ ಬಗ್ಗೆ ತುಂಬಾ ಒಲವು ಇದೆ, ತಾನು ಕಲಿಯಬೇಕೆಂಬ ನೆಪದಲ್ಲಿ ತನ್ನ ಸ್ನೇಹ ಬೆಳೆಸಲು ಬಯಸಿದ್ದ. ಈ ವ್ಯಕ್ತಿ ಹಲವಾರು ಬಾರಿ ಯುವತಿಯನ್ನು ಮನೆಗೆ ಬರುವಂತೆ ಕರೆದಿದ್ದ. ತನಗೆ ಯೋಗದ ಬಗ್ಗೆ ತಿಳಿಸಿಕೊಡಬೇಕು ಎಂದು ದುಂಬಾಲು  ಬಿದ್ದಿದ್ದ. ಹೀಗೆ ಅಕ್ಟೋಬರ್ 5ರಂದು ನಾನು ಯೋಗಾಭ್ಯಾಸ ಮಾಡುತ್ತಿದ್ದ ವೇಳೆ ಬಾಲ್ಕನಿಯಿಂದ ನನ್ನ ಕೋಣೆಯೊಳಗೆ ಬಂದು ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

ಅಮೆರಿಕದ ಯುವತಿಗೆ ಯೋಗ ಮತ್ತು ಮಾದಕ ವಸ್ತುವಿನ ಮೇಲೆ ಅಪಾರ ಪ್ರೀತಿ ಇದ್ದು, ಇದರಿಂದಾಗಿ ಆರೋಪಿ ಈಕೆಗೆ  ನಿಕಟವಾಗಲು ಪ್ರಯತ್ನಿಸಿರುವುದಾಗಿ ವರದಿ ಹೇಳಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅರೋಪಿ ವ್ಯಕ್ತಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com