ಈಗೆಷ್ಟಿದೆ ಮೋದಿ ಸರ್ಕಾರದ ಮೇಲೆ ಜನರ ಭರವಸೆ?: ಹೀಗಿದೆ ವಿವರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಶೇ.69.3 ರಷ್ಟು ಮಂದಿ ಭರವಸೆ ಇಟ್ಟಿರುವುದು ಐಎಎನ್ಎಸ್ ವರದಿ ಮೂಲಕ ತಿಳಿದುಬಂದಿದೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಶೇ.69.3 ರಷ್ಟು ಮಂದಿ ಭರವಸೆ ಇಟ್ಟಿರುವುದು ಐಎಎನ್ಎಸ್ ವರದಿ ಮೂಲಕ ತಿಳಿದುಬಂದಿದೆ 

ವಿವಿಧ ಸಂಸ್ಥೆಗಳ ಮೇಲಿನ ವಿಶ್ವಾಸಾರ್ಥತೆಯ ಬಗ್ಗೆ ಐಎಎನ್ಎಸ್ ಸಿ-ವೋಟರ್ಸ್ ಮಾಧ್ಯಮ ಟ್ರ್ಯಾಕರ್ ಸಮೀಕ್ಷೆ ನಡೆಸಿದ್ದು, ಶೇ.69.3 ರಷ್ಟು ಮಂದಿ ಭಾರತದಾದ್ಯಂತ ಮೋದಿ ಸರ್ಕಾರದ ಬಗ್ಗೆ ವಿಶ್ವಾಸ ಹೊಂದಿದ್ದಾರೆ, ಶೇ.16.2 ರಷ್ಟು ಮಂದಿ ತಾವು ಮೋದಿ ಸರ್ಕಾರದ ಮೇಲೆ ವಿಶ್ವಾಸ ಹೊಂದಿಲ್ಲ ಎಂದು ಹೇಳಿದ್ದರೆ, ಶೇ.14.1 ರಷ್ಟು ಮಂದಿ ಸ್ಪಷ್ಟತೆ ಇಲ್ಲ ಅಥವಾ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. 

ಇನ್ನು ರಾಜ್ಯ ಸರ್ಕಾರಗಳ ಮೇಲೆ ಶೇ.67.7 ರಷ್ಟು ಮಂದಿ ವಿಶ್ವಾಸ ಹೊಂದಿದ್ದೆ, ಶೇ.16.7 ರಷ್ಟು ಮಂದಿ ಅವಿಶ್ವಾಸ ಹೊಂದಿದ್ದಾರೆ. ಇನ್ನು ಬ್ಯಾಂಕ್ ಗಳ ಮೇಲೆ ಶೇ.76.5 ರಷ್ಟು ಮಂದಿ ವಿಶ್ವಾಸ ಹೊಂದಿದ್ದರೆ, ಶೇ.6.2 ರಷ್ಟು ಮಂದಿ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಮಾಧ್ಯಮಗಳ ಬಗ್ಗೆಯೂ ಕುತೂಹಲಕಾರಿ ಅಂಶ ಹೊರಬಿದ್ದಿದ್ದು, ಶೇ.82 ರಷ್ಟು ಮಂದಿ ಇಂದಿಗೂ ಸಹ ಪತ್ರಿಕೆಗಳೆಡೆಗೆ ಹೆಚ್ಚು ವಿಶ್ವಾಸಾರ್ಹತೆ ಹೊಂದಿದ್ದರೆ, ಸುದ್ದಿ ವೆಬ್ ಸೈಟ್ ಗಳ ಬಗ್ಗೆ ಶೇ.70.6 ರಷ್ಟು ವಿಶ್ವಾಸ ಹೊಂದಿದ್ದಾರೆ.  ಶೇ.73.5 ರಷ್ಟು ವಿಶ್ವಾಸಾರ್ಹತೆಯನ್ನು ಟಿವಿ ಮಾಧ್ಯಮಗಳು ಹೊಂದಿವೆ ಎಂದು ತಿಳಿದುಬಂದಿದೆ. ಭಾರತದ ವಿವಿಧ ಭಾಗಗಳಲ್ಲಿ 5,000 ಕ್ಕಿಂತ ಹೆಚ್ಚು ಮಂದಿಯನ್ನು ಮಾತನಾಡಿಸಿ ಸ್ಯಾಂಪಲ್ ಸಂಗ್ರಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com