ಕೇರಳದಲ್ಲಿ ದಾಖಲೆ ಬರೆದ ಕೊರೋನಾ: ಒಂದೇ ದಿನ 11,755 ಮಂದಿಗೆ ಸೋಂಕು, 23 ಸಾವು

ದೇಶದಲ್ಲಿ ಮೊಟ್ಟ ಮೊದಲ ಕೊರೋನಾ ಸೋಂಕು ಪತ್ತೆಯಾಗಿದ್ದ ಕೇರಳದಲ್ಲಿ ಸೋಂಕು ಹತೋಟಿಗೆ ಬಂದಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮಾರಕ ಕೊರೋನಾ ವೈರಸ್ ತನ್ನ ಆರ್ಭಟ ತೋರಿದ್ದು, ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ ದಾಖಲೆಯ ಬರೊಬ್ಬರಿ 11,755 ಮಂದಿಗೆ ಸೋಂಕು  ಒಕ್ಕರಿಸಿದೆ.
ಕೇರಳ-ಕೋವಿಡ್-19
ಕೇರಳ-ಕೋವಿಡ್-19

ಕೊಚ್ಚಿ: ದೇಶದಲ್ಲಿ ಮೊಟ್ಟ ಮೊದಲ ಕೊರೋನಾ ಸೋಂಕು ಪತ್ತೆಯಾಗಿದ್ದ ಕೇರಳದಲ್ಲಿ ಸೋಂಕು ಹತೋಟಿಗೆ ಬಂದಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮಾರಕ ಕೊರೋನಾ ವೈರಸ್ ತನ್ನ ಆರ್ಭಟ ತೋರಿದ್ದು, ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ ದಾಖಲೆಯ ಬರೊಬ್ಬರಿ 11,755 ಮಂದಿಗೆ ಸೋಂಕು  ಒಕ್ಕರಿಸಿದೆ.

ಈ ಬಗ್ಗೆ ಕೇರಳ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಕೇರಳದಲ್ಲಿ 11,755 ಹೊಸ ಸೋಂಕು ಪ್ರಕರಣಗಳು ದಾಖಲಾಗಿದೆ. ಆ ಮೂಲಕ ಕೇರಳದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2,79,855ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 7,570 ಮಂದಿ ಸೋಂಕಿತರು  ಗುಣಮುಖರಾಗಿದ್ದಾರೆ. ಒಟ್ಟಾರೆ ಸೋಂಕಿತರ ಪೈಕಿ 95,918 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 1,82,874 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನು ಇಂದು ಒಂದೇ ದಿನ 23 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಕೇರಳದಲ್ಲಿ ಈ ವರೆಗೂ ಕೊರೋನಾ  ಸೋಂಕಿಗೆ ಬಲಿಯಾದವರ ಸಂಖ್ಯೆ 978ಕ್ಕೆ ಏರಿಕೆಯಾಗಿದೆ.

ಇನ್ನು ಇಂದು ಪತ್ತೆಯಾದ 11,755 ಸೋಂಕಿತರ ಪೈಕಿ 10,471ಮಂದಿಯ ಸೋಂಕಿನ ಹಿನ್ನಲೆ ಪತ್ತೆಯಾಗಿದ್ದು, ಬಾಕಿ 952 ಮಂದಿಗೆ ಸೋಂಕು ತಗುಲಿತು ಎಂಬುದು ಪತ್ತೆಯಾಗಿಲ್ಲ. ಅಂತೆಯೇ ಇಂದು 116 ಮಂದಿ ಆರೋಗ್ಯ ಸಿಬ್ಬಂದಿಗೆ ಸೋಂಕು ಒಕ್ಕರಿಸಿದೆ. ಕೇರಳದಲ್ಲಿ ಇಂದು ಒಟ್ಟು 66,228 ಕೋವಿಡ್ ಪರೀಕ್ಷೆ  ಮಾಡಲಾಗಿದ್ದು, ಸೋಂಕು ಪಾಸಿಟಿವ್ ಪ್ರಮಾಣ 17.74ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com