ಎಲ್ಎಸಿ ಬಿಕ್ಕಟ್ಟು: ಸೇನಾ ಸಿಬ್ಬಂದಿಗಳ ರಕ್ಷಣೆಗೆ ಸ್ಥಳೀಯ ಉಪಕರಣಗಳ ಕೊರತೆ!

ಮರಗಟ್ಟುವ ಚಳಿಯಿಂದ ಸೇನಾ ಸಿಬ್ಬಂದಿಗಳನ್ನು ರಕ್ಷಿಸುವುದಕ್ಕೆ ಸ್ಥಳೀಯ ಉಪಕರಣಗಳ ಕೊರತೆ ಇರುವುದನ್ನು ಸೇನಾ ಸಿಬ್ಬಂದಿಗಳ ಉಪಮುಖ್ಯಸ್ಥರು ಒತ್ತಿ ಹೇಳಿದ್ದಾರೆ. 
ಎಲ್ಎಸಿ ಬಿಕ್ಕಟ್ಟು: ಸೇನಾ ಸಿಬ್ಬಂದಿಗಳ ರಕ್ಷಣೆಗೆ ಸ್ಥಳೀಯ ಉಪಕರಣಗಳ ಕೊರತೆ!
ಎಲ್ಎಸಿ ಬಿಕ್ಕಟ್ಟು: ಸೇನಾ ಸಿಬ್ಬಂದಿಗಳ ರಕ್ಷಣೆಗೆ ಸ್ಥಳೀಯ ಉಪಕರಣಗಳ ಕೊರತೆ!

ನವದೆಹಲಿ: ಮರಗಟ್ಟುವ ಚಳಿಯಿಂದ ಸೇನಾ ಸಿಬ್ಬಂದಿಗಳನ್ನು ರಕ್ಷಿಸುವುದಕ್ಕೆ ಸ್ಥಳೀಯ ಉಪಕರಣಗಳ ಕೊರತೆ ಇರುವುದನ್ನು ಸೇನಾ ಸಿಬ್ಬಂದಿಗಳ ಉಪಮುಖ್ಯಸ್ಥರು ಒತ್ತಿ ಹೇಳಿದ್ದಾರೆ. 

ಫೋರ್ಸ್ ಪ್ರೊಟೆಕ್ಷನ್ ಇಂಡಿಯಾ-2020ಯ ವಿಷಯವಾಗಿ ಆಯೋಜಿಸಲಾಗಿದ್ದ ವೆಬಿನಾರ್ ನಲ್ಲಿ ಮಾತನಾಡಿರುವ ಲೆಫ್ಟಿನೆಂಟ್ ಗೌರ್ನರ್ ಎಸ್ ಕೆ ಸೈನಿ, ವಿಶೇಷ ಉಡುಪು ಮತ್ತು ಪರ್ವತಾರೋಹಣ ಸಾಧನಗಳು ಪ್ರಮುಖವಾಗಿರುವ ಮತ್ತೊಂದು ಅಂಶಗಳಾಗಿವೆ.

ಅತಿ ಎತ್ತರದ ಪ್ರದೇಶಗಳು ಅಂದರೆ -50 ಡಿಗ್ರಿ ಸೆಲ್ಶಿಯಸ್ ನಲ್ಲಿ ಸೇನಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಾವು ಇನ್ನೂ ಸಹ ಶೀತ-ಹವಾಮಾನಕ್ಕೆ ಅಗತ್ಯವಿರುವ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ, ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿ ದೇಶೀಯಾಗಿ ಉಪಕರಣಗಳ ಕೊರತೆ ಇರುವುದಾಗಿದ್ದು, ಈ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತದ ನಮ್ಮ ಗುರಿಯನ್ನು ಸಾಧಿಸಿಕೊಳ್ಳುವುದಕ್ಕೆ ಸಹಯೋಗದ ಪ್ರಯತ್ನದ ಅಗತ್ಯವಿದೆ ಎಂದು ಹೇಳಿದ್ದಾರೆ.

ಸಿಬ್ಬಂದಿಗಳ ರಕ್ಷಣೆಗಾಗಿ ರಕ್ಷಣಾ ಪಡೆಗಳ ಅಗತ್ಯವನ್ನು ಅರಿಯುವುದಕ್ಕೆ ರಕ್ಷಣಾ ಪಡೆಗಳು, ಭಾರತೀಯ ಕೈಗಾರಿಕೆ, ವಿಜ್ಞಾನಿಗಳು ಮತ್ತು ಉದ್ಯಮಿಗಳನ್ನು ಒಟ್ಟಿಗೆ ಸೇರಿಸುವ ಉದ್ದೇಶ ಈ ವೆಬಿನಾರ್ ದಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com