ನನ್ನ ತಂದೆಗೆ ನಿತೀಶ್ ಅಪಮಾನ ಮಾಡಿದ್ದಾರೆ: ಚಿರಾಗ್ ಪಾಸ್ವಾನ್

ತಮ್ಮ ತಂದೆ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತೀವ್ರ ಅಪಮಾನ ಮಾಡಿದ್ದಾರೆ ಎಂದು ಲೋಕಜನಶಕ್ತಿ ಪಕ್ಷ(ಎಲ್ ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.
ಚಿರಾಗ್ ಪಾಸ್ವಾನ್
ಚಿರಾಗ್ ಪಾಸ್ವಾನ್

ಪಾಟ್ನಾ:  ತಮ್ಮ ತಂದೆ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತೀವ್ರ ಅಪಮಾನ ಮಾಡಿದ್ದಾರೆ ಎಂದು ಲೋಕ ಜನಶಕ್ತಿ ಪಕ್ಷ(ಎಲ್ ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ತಂದೆಯನ್ನು ತೀವ್ರವಾಗಿ ಅಪಮಾನಿಸಿದ್ದರು ಎಂದು ಪತ್ರದಲ್ಲಿ ಚಿರಾಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವತ್ರಿಕ ಚುನಾವಣೆಯ ಮಾತುಕತೆಯ ವೇಳೆ ರಾಜ್ಯಸಭೆಯ ಒಂದು ಸ್ಥಾನವನ್ನು ರಾಂ ವಿಲಾಸ್ ಪಾಸ್ವಾನ್ ಅವರಿಗೆ ಬಿಟ್ಟುಕೊಡಬೇಕೆಂಬ ಒಪ್ಪಂದ ನೆಡೆದಿತ್ತು. ಈ ಒಪ್ಪಂದ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ನಡೆದಿತ್ತು ಎಂದು ಚಿರಾಗ್ ಹೇಳಿಕೊಂಡಿದ್ದಾರೆ.

ಆದರೂ, ಸಾರ್ವತ್ರಿಕ ಚುನಾವಣೆಯ ಸೀಟು ಹಂಚಿಕೆಯ ವೇಳೆ ನಿತೀಶ್ ಕುಮಾರ್, ರಾಂ ವಿಲಾಸ್ ಪಾಸ್ವಾನ್ ಅವರಿಗೆ ಘೋರ ಅಪಮಾನ ಮಾಡಿದ್ದರು ಎಂದು ಚಿರಾಗ್ ಹೇಳಿದ್ದಾರೆ. 

ರಾಜ್ಯ ಸರ್ಕಾರದ ಬಗ್ಗೆ ರಾಜ್ಯದ ಜನರು ತೀವ್ರ ಅಸಮಧಾನ ಹೊಂದಿದ್ದಾರೆ. ಆದರೆ ಬಿಜೆಪಿ ಬಗ್ಗೆ ಜನರಲ್ಲಿರುವ ಪ್ರೀತಿ ಕಡಿಮೆಯಾಗಿಲ್ಲ.ಬಿಜೆಪಿ ಕೈಗೊಂಡಿರುವ ತೀರ್ಮಾನವನ್ನು ತಾವು ವಿರೋಧಿಸುವುದಿಲ್ಲ, ಬಿಜೆಪಿ ನಿಲುವುಗಳಿಗೆ ವಿರುದ್ದ ಒಂದು ಹೆಜ್ಜೆಯನ್ನೂ ಇರಿಸುವುದಿಲ್ಲ ಎಂದು ಆ ಪತ್ರದಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com