ನಮ್ಮ ಯೋಧರಿಗೆ ಬುಲೆಟ್ ಪ್ರೂಫ್ ರಹಿತ ಟ್ರಕ್, ಪ್ರಧಾನಿಗೆ ರೂ.8,400 ಕೋಟಿ ವಿಮಾನ, ಇದು ನ್ಯಾಯವೇ: ರಾಹುಲ್ ಪ್ರಶ್ನೆ

ಕೇಂದ್ರ ಸರ್ಕಾರ ವಿವಿಐಪಿಗಳಿಗಾಗಿ ಖರೀದಿಸಿರುವ ವಿಶೇಷ ವಿಮಾನದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದ್ದು, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿ ಸೈನಿಕರ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರ ವಿವಿಐಪಿಗಳಿಗಾಗಿ ಖರೀದಿಸಿರುವ ವಿಶೇಷ ವಿಮಾನದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದ್ದು, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿ ಸೈನಿಕರ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನ ಲ್ಲಿ ಟ್ವೀಟ್ ಮಾಡಿರುವ ವಿಡಿಯೋವೊಂದನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿಯವರು, ಬುಲೆಟ್ ಪ್ರೂಫ್ ರಹಿತ ಟ್ರಕ್‍ಗಳಲ್ಲಿ ಸೈನಿಕರನ್ನು ಹುತಾತ್ಮರಾಗಲು ಕಳುಹಿಸಲಾಗುತ್ತಿದೆ. ಆದರೆ ಸರ್ಕಾರ ಪ್ರಧಾನಮಂತ್ರಿಗಳಿಗೆ ರೂ.8,400 ಕೋಟಿಗಳ ವಿಮಾನ ಮೀಸಲಿಟ್ಟಿದೆ. ಇದು ನ್ಯಾಯವೇ ಎಂದು ಅವರು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಹಂಚಿಕೊಂಡಿರುವ ವೀಡಿಯೋದಲ್ಲಿ ಟ್ರಕ್ ಒಳಗೆ ಕುಳಿತಿದ್ದ ಕೆಲ ಸೈನಿಕರು, ತಮ್ಮ ಅಧಿಕಾರಿ ಬುಲೆಟ್ ಪ್ರೂಫ್ ಟ್ರಕ್‍ನಲ್ಲಿ ಕಳುಹಿಸುವ ಮೂಲಕ ನಮ್ಮ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿರುವುದು ಕಂಡು ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com