ಪಿಒಕೆಯಲ್ಲಿ ಕ್ಷಿಪಣಿ ಸ್ಥಾಪನೆಗೆ ಚೀನಾ ನೆರವಿನ ಬಗ್ಗೆ ಮಾಹಿತಿ ಇಲ್ಲ: ವರದಿಗಳ ಬಗ್ಗೆ ಉನ್ನತ ಸೇನಾ ಕಮಾಂಡರ್ ಪ್ರತಿಕ್ರಿಯೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ)  ಕಡೆಯಿಂದ ಕ್ಷಿಪಣಿಗಳ ಸ್ಥಾಪನೆಗೆ ಚೀನಾ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದೆ ಎಂಬ ವರದಿಗಳ ಮಧ್ಯೆ, ಸೇನೆಯ ಉನ್ನತ ಮೂಲಗಳು ಚೀನಾ ಪಾಕಿಸ್ತಾನಕ್ಕೆ ಯಾವುದೇ ರೀತಿಯ ಯುದ್ಧತಂತ್ರದ ಸಹಾಯವನ್ನು ನೀಡುವ ಬಗ್ಗೆ ಯಾವುದೇ ಸೂಚನೆಯಿಲ್ಲ ಎಂದು ಹೇಳಿದೆ.
ಪಿಒಕೆಯಲ್ಲಿ ಕ್ಷಿಪಣಿ ಸ್ಥಾಪನೆಗೆ ಚೀನಾ ನೆರವಿನ ಬಗ್ಗೆ ಮಾಹಿತಿ ಇಲ್ಲ: ವರದಿಗಳ ಬಗ್ಗೆ ಉನ್ನತ ಸೇನಾ ಕಮಾಂಡರ್ ಪ್ರತಿಕ್ರಿಯೆ

ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ)  ಕಡೆಯಿಂದ ಕ್ಷಿಪಣಿಗಳ ಸ್ಥಾಪನೆಗೆ ಚೀನಾ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದೆ ಎಂಬ ವರದಿಗಳ ಮಧ್ಯೆ, ಸೇನೆಯ ಉನ್ನತ ಮೂಲಗಳು ಚೀನಾ ಪಾಕಿಸ್ತಾನಕ್ಕೆ ಯಾವುದೇ ರೀತಿಯ ಯುದ್ಧತಂತ್ರದ ಸಹಾಯವನ್ನು ನೀಡುವ ಬಗ್ಗೆ ಯಾವುದೇ ಸೂಚನೆಯಿಲ್ಲ ಎಂದು ಹೇಳಿದೆ.

ಸೇನೆಯ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು, ಯುದ್ಧೋಪಕರಣದ ವಿಷಯದಲ್ಲಿ ಪಾಕಿಸ್ತಾನ ಮತ್ತು ಚೀನಾ ನಡುವೆ ಮಿಲಿಟರಿ ಸಹಕಾರವಿದೆ ಎಂದು ಹೇಳಿದರು.

ಲಡಾಖ್‌ನಲ್ಲಿ ಭಾರತೀಯ ಮತ್ತು ಚೀನಾದ ಸೈನ್ಯದ ನಡುವೆ ನಿರಂತರ ಸಂಘರ್ಷದ ಮಧ್ಯೆ  ಗುಪ್ತಚರ ವರದಿಯನ್ನು  ಉಲ್ಲೇಖಿಸಿ ಮಾಧ್ಯಮ ವರದಿಗಳು ತಮ್ಮ ಸೈನ್ಯದ ಸೈನಿಕರು ಈ ಪ್ರದೇಶದಲ್ಲಿ ಜಂಟಿ ಗಸ್ತು ನಡೆಸುತ್ತಿರುವುದರಿಂದ ಪಿಒಕೆ ಯ ಕಡೆಯಿಂದ ಕ್ಶಿಪಣಿಯನ್ನು  ಸ್ಥಾಪಿಸಲು ಚೀನಾ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದೆ ಎಂದು ಹೇಳಿದ್ದವು. ಆದರೆ ಅಂತಹ ಯಾವುದೇ ಸೂಚನೆ ಬಂದಿಲ್ಲ ಎಂದು ಜನರಲ್ ರಾಜು ಹೇಳಿದ್ದಾರೆ. 

"ನಾನು ಮಾಧ್ಯಮ ವರದಿಗಳನ್ನು ನೋಡಿದ್ದೇನೆ. ಪಾಕಿಸ್ತಾನವು ಚೀನಾಕ್ಕೆ ಸಹಾಯ ಮಾಡುತ್ತಿದೆಯೆ ಅಥವಾ ಚೀನಾ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದೆ ಎನ್ನುವ ಬಗ್ಗೆ ನನಗೆ ಅಂತಹ ಯಾವುದೇ ಸೂಚನೆಯಿಲ್ಲ" ಎಂದು ಅವರು ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟಲ್ ಸೆಂಟರ್ ನಲ್ಲಿ ಹೇಳಿದ್ದಾರೆ.

"ಆದರೆ ಸಿಪಿಇಸಿ (ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್) ಕಾರಣ, ಪಾಕಿಸ್ತಾನದಲ್ಲಿ ಚೀನಾ ಸಹಭಗಿತ್ವವಿದೆ. ಯುದ್ಧ ಸಲಕರಣೆಯ ವಿಚಾರದಲ್ಲಿ ಮಿಲಿಟರಿ ಸಹಕಾರವಿದೆ, ಆದರೆ ನಾವು ಯಾವುದೇ ಯುದ್ಧತಂತ್ರದ ಸಹಾಯ ಪಡೆಯುವ ಯೋಜನೆಯ ಸುಳಿವನ್ನು ಹೊಂದಿಲ್ಲ "ಎಂದು ಅವರು ಹೇಳಿದರು.

ವರದಿಗಳ ಪ್ರಕಾರ,  ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸುವ ನಿರ್ಮಾಣ ಕಾರ್ಯದಲ್ಲಿ ಪಾಕಿಸ್ತಾನದ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಪಿಒಕೆ ಯಲಾಸದಣ್ಣ ಧೋಕ್ ಬಳಿಯ ಪೌಲಿ ಪಿರ್ ನಲ್ಲಿ ನಡೆಸುತ್ತಿವೆ. ನಿರ್ಮಾಣ ಸ್ಥಳದಲ್ಲಿ ಪಾಕಿಸ್ತಾನ ಸೇನಾ ಸಿಬ್ಬಂದಿ ಮತ್ತು ಡಜನ್ನುಗಟ್ಟಲೆ ನಾಗರಿಕರು ಕೆಲಸ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com