ಅತ್ಯಾಚಾರದ ಆರೋಪಿಗೆ ಕಾಂಗ್ರೆಸ್ ಟಿಕೆಟ್: ವಿರೋಧಿಸಿದ ಮಹಿಳಾ ಕಾರ್ಯಕರ್ತೆಗೆ ಸ್ವಪಕ್ಷೀಯರಿಂದಲೇ ಥಳಿತ

ಅತ್ಯಾಚಾರದ ಆರೋಪಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದನ್ನು ವಿರೋಧಿಸಿದ ಮಹಿಳಾ ಕಾರ್ಯಕರ್ತೆಗೆ ಸ್ವಪಕ್ಷೀಯರೇ ಥಳಿಸಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. 

Published: 11th October 2020 01:34 PM  |   Last Updated: 11th October 2020 01:34 PM   |  A+A-


Congress woman leader beaten by party leaders in Uttar Pradesh's Deoria

ಅತ್ಯಾಚಾರದ ಆರೋಪಿಗೆ ಕಾಂಗ್ರೆಸ್ ಟಿಕೆಟ್: ವಿರೋಧಿಸಿದ ಮಹಿಳಾ ಕಾರ್ಯಕರ್ತೆಗೆ ಸ್ವಪಕ್ಷೀಯರಿಂದಲೇ ಥಳಿತ

Posted By : Srinivas Rao BV
Source : Online Desk

ಡಿಯೋರಿಯಾ​: ಅತ್ಯಾಚಾರದ ಆರೋಪಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದನ್ನು ವಿರೋಧಿಸಿದ ಮಹಿಳಾ ಕಾರ್ಯಕರ್ತೆಗೆ ಸ್ವಪಕ್ಷೀಯರೇ ಥಳಿಸಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. 

ಉತ್ತರ ಪ್ರದೇಶದ ಉಪಚುನಾವಣೆಗೆ ಸ್ಪರ್ಧಿಸಲು ಮುಕುಂದ್ ಭಾಸ್ಕರ್ ಎಂಬಾತನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಆದರೆ ಆತನ ವಿರುದ್ಧ ಅತ್ಯಾಚಾರದ ಆರೋಪವಿದ್ದು, ಟಿಕೆಟ್ ನೀಡಿದ್ದನ್ನು ಕಾಂಗ್ರೆಸ್ ಕಾರ್ಯಕರ್ತೆ ತಾರಾ ಯಾದವ್ ಪ್ರತಿಭಟಿಸಿದ್ದರು. ಈ ಹಂತದಲ್ಲಿ ಅವರ ಮೇಲೆ ಸ್ವಪಕ್ಷೀಯರೇ ಥಳಿಸಿ ಹಲ್ಲೆ ನಡೆಸಿದ್ದಾರೆ. 

ಅತ್ಯಾಚಾರದ ಆರೋಪಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿದ್ದಕ್ಕಾಗಿ ನನ್ನ ಮೇಲೆ ಹಲ್ಲೆ ನಡೆದಿದೆ. ಈಗ ನಾನು ಪ್ರಿಯಾಂಕಾ ಗಾಂಧಿ ಕ್ರಮ ಕೈಗೊಳ್ಳುವುದಕ್ಕಾಗಿ ಕಾಯುತ್ತಿದ್ದೇನೆ ಎಂದು ತಾರಾ ಯಾದವ್ ಎಎನ್ಐ ಗೆ ಹೇಳಿದ್ದಾರೆ. 

ತಾರಾ ಯಾದವ್ ಮೇಲೆ ನಡೆದಿರುವ ಹಲ್ಲೆಗೆ ಪಕ್ಷಾತೀತವಾಗಿ ಖಂಡನೆ ವ್ಯಕ್ತವಾಗಿದೆ. ತಾರಾ ಯಾದವ್ ಮೇಲೆ ನಡೆದ ಹಲ್ಲೆ ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಗೌರವ ಎಷ್ಟಿದೆ ಎಂಬುದನ್ನು ತೋರಿಸುತ್ತದೆ ಎಂದು ಬಿಜೆಪಿ ಪ್ರತಿಕ್ರಿಯೆ ನೀಡಿದ್ದರೆ, ಘಟನೆಯನ್ನು ಖಂಡಿಸಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ರಾಷ್ಟ್ರೀಯ ಮಹಿಳಾ ಆಯೋಗ ಈ ಘಟನೆಯನ್ನು ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp