ಪೂರ್ವ ಲಡಾಖ್ ನ ಕಾರ್ಗತ್ತಲಲ್ಲಿ ಆಗಸದಲ್ಲಿ ಆರ್ಭಟಿಸಿದ ಚಿನೂಕ್ ಹೆಲಿಕಾಪ್ಟರ್: ವಿಡಿಯೋ!

ಪೂರ್ವ ಲಡಾಖ್ ನಲ್ಲಿ ಚೀನಾ ಸೇನೆ ಉಪಟಳ ನೀಡುತ್ತಿರುವ ಹಿನ್ನೆಲೆಯಲ್ಲಿ ಸಮರ ಸಿದ್ಧತೆ ನಡೆಸುತ್ತಿರುವ ಭಾರತೀಯ ವಾಯುಸೇನೆಯೂ ರಾತ್ರಿಯ ಕಾರ್ಗತ್ತಲಲ್ಲಿ ಆಗಸದಲ್ಲಿ ಚಿನೂಕ್ ಹೆಲಿಕಾಪ್ಟರ್ ಅಬ್ಬರಿಸಿದೆ. 
ಚಿನೂಕ್ ಹೆಲಿಕಾಪ್ಟರ್
ಚಿನೂಕ್ ಹೆಲಿಕಾಪ್ಟರ್

ಲಡಾಖ್: ಪೂರ್ವ ಲಡಾಖ್ ನಲ್ಲಿ ಚೀನಾ ಸೇನೆ ಉಪಟಳ ನೀಡುತ್ತಿರುವ ಹಿನ್ನೆಲೆಯಲ್ಲಿ ಸಮರ ಸಿದ್ಧತೆ ನಡೆಸುತ್ತಿರುವ ಭಾರತೀಯ ವಾಯುಸೇನೆಯೂ ರಾತ್ರಿಯ ಕಾರ್ಗತ್ತಲಲ್ಲಿ ಆಗಸದಲ್ಲಿ ಚಿನೂಕ್ ಹೆಲಿಕಾಪ್ಟರ್ ಅಬ್ಬರಿಸಿದೆ. 

ಭಾರತೀಯ ವಾಯುಸೇನೆಯ ಅತ್ಯಾಧುನಿಕ ಚಿನೂಕ್ ಹೆಲಿಕಾರ್ಟರ್ ಗಳು ಲೇಹ್-ಲಡಾಖ್ ಗಡಿ ಸಮೀಪದ ವಾಯುನೆಲೆಯಲ್ಲಿ ರಾತ್ರಿ ಕಾರ್ಯಾಚರಣೆಯ ತಾಲೀಮು ನಡೆಸಿವೆ. 

ಲೇಹ್-ಲಡಾಖ್ ನ ವಾಸ್ತವ ನಿಯಂತ್ರಣ ರೇಖೆ ಎಲ್ಎಸಿ ಬಳಿ ಚಿನೂಕ್ ಹೆಲಿಕಾಪ್ಟರ್ ಗಳು ರಾತ್ರಿ ಕಾರ್ಯಾಚರಣೆಯ ವೈಮಾನಿಕ ಪ್ರದರ್ಶನವನ್ನು ಪೂರ್ಣಗೊಳಿಸಿದೆ ಎಂದು ಭಾರತೀಯ ವಾಯುಸೇನೆ ಸ್ಪಷ್ಟಪಡಿಸಿದೆ. 

ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿರುವುದರಿಂದ ಭಾರತೀಯ ಸೇನೆ ಚಿನೂಕ್ ಹೆಲಿಕಾಪ್ಟರ್ ಸೇರಿದಂತೆ ಮಿಗ್-29 ಯುದ್ಧ ವಿಮಾನ, ಇಲ್ಯುಶಿನ್-76 ಮತ್ತು ಆಂಟೋನಿಯೊ-32 ಸಾರಿಗೆ ವಿಮಾನಗಳೂ ಕೂಡ ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದವು ಎಂದು ವಾಯುಸೇನೆ ಖಚಿತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com