ಕೋವಿಡ್ ನಿಂದಾಗಿ ನೀಟ್ ಪರೀಕ್ಷೆಗೆ ಗೈರಾಗಿದ್ದ ವಿದ್ಯಾರ್ಥಿಗಳಿಗೆ ಅ.14ರಂದು ಪರೀಕ್ಷೆ ನಡೆಸಲು 'ಸುಪ್ರೀಂ' ಅನುಮತಿ!

ಮಹಾಮಾರಿ ಕೋವಿಡ್ ನಿಂದಾಗಿ ಪ್ರಸಕ್ತ ವರ್ಷದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ್ ಪರೀಕ್ಷೆ(ನೀಟ್) ಪರೀಕ್ಷೆಗೆ ಗೈರಾಗಿದ್ದ ವಿದ್ಯಾರ್ಥಿಗಳಿಗೆ ಅಕ್ಟೋಬರ್ 14ರಂದು ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ವಿದ್ಯಾರ್ಥಿಗಳು
ವಿದ್ಯಾರ್ಥಿಗಳು

ನವದೆಹಲಿ: ಮಹಾಮಾರಿ ಕೋವಿಡ್ ನಿಂದಾಗಿ ಪ್ರಸಕ್ತ ವರ್ಷದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ್ ಪರೀಕ್ಷೆ(ನೀಟ್) ಪರೀಕ್ಷೆಗೆ ಗೈರಾಗಿದ್ದ ವಿದ್ಯಾರ್ಥಿಗಳಿಗೆ ಅಕ್ಟೋಬರ್ 14ರಂದು ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. 

ಸೆಪ್ಟೆಂಬರ್ ನಲ್ಲಿ ನಡೆದ ನೀಟ್ ಪರೀಕ್ಷೆಗೆ ಕೊರೋನಾ ಕಂಟೈನ್ಮೆಟ್ ವಲಯದಲ್ಲಿ ವಾಸ ಮಾಡುತ್ತಿದ್ದ ಅನೇಕ ವಿದ್ಯಾರ್ಥಿಗಳು ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನೀಟ್ ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಮತ್ತೊಂದು ಅವಕಾಶ ನೀಡಿದೆ. 

ಅಕ್ಟೋಬರ್ 14ರಂದು ನೀಟ್ ಪರೀಕ್ಷೆ ನಡೆಸಿ ಅಕ್ಟೋಬರ್ 16ರಂದು ಫಲಿತಾಂಶ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. 

ಇನ್ನು ಸೆಪ್ಟೆಂಬರ್ 13ರಂದು ದೇಶಾದ್ಯಂತ 3,843 ಕೇಂದ್ರಗಳಲ್ಲಿ ನಡೆದಿದ್ದ ನೀಟ್ ಪರೀಕ್ಷೆಗೆ 14 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com