ನರೇಂದ್ರ ಮೋದಿಗೋಸ್ಕರ ಮುಖ್ಯಮಂತ್ರಿಗಳು ನಿಮ್ಮ ಭವಿಷ್ಯವನ್ನೇಕೆ ಅಡವಿಡುತ್ತಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ

ರಾಜ್ಯಗಳಿಗೆ ಜಿಎಸ್ಟಿ ಪರಿಹಾರದ ವಿಷಯದಲ್ಲಿ ಕೇಂದ್ರದ ಸಾಲ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿರುವುದನ್ನು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ನಿಮ್ಮ ಮುಖ್ಯಮಂತ್ರಿಗಳು ನಿಮ್ಮ ಭವಿಷ್ಯವನ್ನೇಕೆ ಅಡವು ಇಟ್ಟಿದ್ದಾರೆ ಎಂದು ಕೇಳಿದ್ದಾರೆ.
ರಾಹುಲ್ ಗಾಂಧಿ, ಪಿಎಂ ನರೇಂದ್ರ ಮೋದಿ
ರಾಹುಲ್ ಗಾಂಧಿ, ಪಿಎಂ ನರೇಂದ್ರ ಮೋದಿ

ನವದೆಹಲಿ: ರಾಜ್ಯಗಳಿಗೆ ಜಿಎಸ್ಟಿ ಪರಿಹಾರದ ವಿಷಯದಲ್ಲಿ ಕೇಂದ್ರದ ಸಾಲ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿರುವುದನ್ನು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ನಿಮ್ಮ ಮುಖ್ಯಮಂತ್ರಿಗಳು ನಿಮ್ಮ ಭವಿಷ್ಯವನ್ನೇಕೆ ಅಡವು ಇಟ್ಟಿದ್ದಾರೆ ಎಂದು ಕೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 1. ಕೇಂದ್ರ ಸರ್ಕಾರ ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ನೀಡುವುದಾಗಿ ಹೇಳಿದೆ. 2. ದೇಶದ ಆರ್ಥಿಕತೆ ಕೋವಿಡ್ ಮತ್ತು ಪ್ರಧಾನಿ ಮೋದಿಯವರ ನೀತಿಗಳಿಂದಾಗಿ ಹದಗೆಟ್ಟಿದೆ, 3. ಕಾರ್ಪೊರೇಟ್ ಉದ್ಯಮಿಗಳಿಗೆ ಪ್ರಧಾನಿ ಮೋದಿ 1.4 ಲಕ್ಷ ಕೋಟಿ ರೂಪಾಯಿ ತೆರಿಗೆ ಕಡಿತ ಮಾಡಿದ್ದಾರೆ, ತಮಗೆ ಶೋಕಿ ಮಾಡಲು 8 ಸಾವಿರದ 400 ಕೋಟಿ ರೂಪಾಯಿಗೆ 2 ವಿಮಾನಗಳನ್ನು ಖರೀದಿ ಮಾಡಿದ್ದಾರೆ. 4. ರಾಜ್ಯ ಸರ್ಕಾರಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದ ಬಳಿ ಹಣವಿಲ್ಲ, ರಾಜ್ಯಗಳು ಸಾಲ ಪಡೆಯಿರಿ ಎಂದು ಹಣಕಾಸು ಸಚಿವೆ ಹೇಳುತ್ತಿದ್ದಾರೆ, ಏನಿದರ ಅರ್ಥ ಎಂದು ಪ್ರಶ್ನಿಸಿದ್ದಾರೆ. ಮೋದಿಯವರಿಗಾಗಿ ನಿಮ್ಮ ಸಿಎಂ ರಾಜ್ಯವನ್ನು ಏಕೆ ಅಡವಿಟ್ಟಿದ್ದಾರೆ ಎಂದು ಕೇಳಿದ್ದಾರೆ.

ಕಳೆದ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಎರಡು ಆಯ್ಕೆಗಳನ್ನು ಮುಂದಿಟ್ಟಿತ್ತು, ಒಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿಶೇಷ ಸೌಲಭ್ಯ ಮೂಲಕ 97 ಸಾವಿರ ಕೋಟಿ ರೂಪಾಯಿ ಸಾಲ ಪಡೆಯುವುದು ಅಥವಾ ಮಾರುಕಟ್ಟೆಯಿಂದ 2.35 ಲಕ್ಷ ಕೋಟಿ ರೂಪಾಯಿಗಳನ್ನು ಪಡೆಯುವುದು ಇನ್ನೊಂದು, ಸಾಲವನ್ನು ಮರು ಪಾವತಿಸಲು ಐಷಾರಾಮಿ, ಡಿಮೆರಿಟ್ ಮತ್ತು ಜನರಿಗೆ ಹಾನಿಯನ್ನುಂಟುಮಾಡುವ ಸರಕುಗಳ(sin goods) ಮೇಲೆ ವಿಧಿಸುವ ಪರಿಹಾರ ಸೆಸ್ ಅನ್ನು 2022 ಮೀರಿ ವಿಸ್ತರಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು.

ಇದಾದ ಬಳಿಕೆ ಕೆಲವು ರಾಜ್ಯ ಸರ್ಕಾರಗಳ ಬೇಡಿಕೆಯಂತೆ 97 ಸಾವಿರ ಕೋಟಿ ರೂಪಾಯಿಗಳನ್ನು 1.10 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಯಿತು.

ಸುಮಾರು 21 ರಾಜ್ಯಗಳು ಅವುಗಳಲ್ಲಿ ಬಹುತೇಕ ಬಿಜೆಪಿ ಸರ್ಕಾರವಿರುವ ರಾಜ್ಯಗಳು ಕೇಂದ್ರ ಸರ್ಕಾರವನ್ನು ಬೆಂಬಲಿಸಿದ್ದವು. ಕಡಿಮೆ ಮೊತ್ತದ ಪರಿಹಾರವನ್ನು ಭರಿಸಲು 1.10 ಲಕ್ಷ ಕೋಟಿ ರೂಪಾಯಿ ಪಡೆಯುವುದಾಗಿ ಹೇಳಿದ್ದವು. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್ಟಿ ಪರಿಹಾರ ಮೊತ್ತದ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ರಾಜ್ಯಗಳಿಗೆ 20 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com