ಕೋವಿಡ್ ಗೆ ಬಲಿಯಾದ 47 ಪ್ರತಿಶತ ಮಂದಿ 60 ವರ್ಷಕ್ಕಿಂತ ಕಡಿಮೆ ವಯೋಮಾನದವರು: ಆರೋಗ್ಯ ಸಚಿವಾಲಯ

ದೇಶದಲ್ಲಿ ಸಂಭವಿಸುತ್ತಿರುವ ಕೋವಿಡ್ ಸಾವಿನ ಪೈಕಿ ಸುಮಾರು 47 ಶೇಕಡಾ ಮಂದಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರೆಂದು  ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
ಕೋವಿಡ್ ಗೆ ಬಲಿಯಾದ 47 ಪ್ರತಿಶತ ಮಂದಿ 60 ವರ್ಷಕ್ಕಿಂತ ಕಡಿಮೆ ವಯೋಮಾನದವರು: ಆರೋಗ್ಯ ಸಚಿವಾಲಯ

ನವದೆಹಲಿ: ದೇಶದಲ್ಲಿ ಸಂಭವಿಸುತ್ತಿರುವ ಕೋವಿಡ್ ಸಾವಿನ ಪೈಕಿ ಸುಮಾರು 47 ಶೇಕಡಾ ಮಂದಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರೆಂದು  ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ಸುಮಾರು 70 ಪ್ರತಿಶತದಷ್ಟು ಕೋವಿಡ್ ಸಾವುಗಳು ಪುರುಷರದ್ದಾಗಿದೆ. ಸೋಂಕಿನಿಂದ 30 ಪ್ರತಿಶತದಷ್ಟು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದರು. "60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸುಮಾರು 53 ಶೇಕಡಾ ಕೋವಿಡ್ ಸಾಸುಗಳು  45-60 ವರ್ಷದವರಲ್ಲಿ ಸಂಭವಿಸಿದರೆ 26-44 ವರ್ಷದವರು ಶೇ.35 ಮಂದಿ 18-25 ವರ್ಷ ವಯೋಮಾನದವರು ಶೇ. 10 ಹಾಗೂ  17 ವರ್ಷದವರು ಶೇ.1ರಷ್ಟು ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ ”ಎಂದು ಭೂಷಣ್ ಹೇಳಿದರು.

ಕೊರೋನಾ ಲಕ್ಷಣವಿರುವ ಹಾಗೂ ಅದರ ಲಕ್ಷಣವಿಲ್ಲದೆ ವಿವಿಧ ವಯೋಮಾನದವರಲ್ಲಿ ಸಾವಿನ  ಪ್ರಮಾಣ-  60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ, 24.6 ಶೇಕಡಾದಷ್ಟು ಸಾವುಗಳು ಕೊರೋನಾ ಲಕ್ಷಣ  ಹೊಂದಿದವರದ್ದಾದರೆ ಕೊರೋನಾ ಲಕ್ಷಣ ಇಲ್ಲದವರಿಗೆ 4.8 ಶೇಕಡಾ ಸಾವು ಸಂಭವಿಸಿದೆ. ಎಂದು ಅವರು ಹೇಳಿದರು.

ಇದೇ ರೀತಿ 45-60 ವರ್ಷ ವಯಸ್ಸಿನವರಲ್ಲಿ ಕೊರೋನಾ ಲಕ್ಷಣ  ಹೊಂದಿರುವ  ಶೇಕಡಾ 13.9, ಕೊರೋನಾ ಲಕ್ಷಣ ಗಳಿಲ್ಲದವರು , 1.5 ಪ್ರತಿಶತ ಮಂದಿ ಸಾವನ್ನಪ್ಪಿದ್ದಾರೆ. 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ರೋಗಿಗಳಲ್ಲಿ, ಕೊರೋನಾ ಲಕ್ಷಣ ಹೊಂದಿರುವವರು ಶೇಕಡಾ 8.8 ರಷ್ಟು ಸಾವನ್ನಪ್ಪಿದ್ದರೆ ಶೇಕಡಾ 0.2 ರಷ್ಟು ಜನರು ಯಾವುದೇ ಕೊರೋನಾ ಲಕ್ಷಣ ಹೊಂದಿಲ್ಲ.

ಕೊರೋನಾ ಲಕ್ಷಣ ಹೊಂದಿರುವ ಜನರ ಒಟ್ಟಾರೆ ಸಾವಿನ ಪ್ರಮಾಣವು ಶೇಕಡಾ 17.9 ಆಗಿದ್ದರೆ ಆ ಲಕ್ಷಣಗಳಿಲ್ಲದವರು 1.2 ರಷ್ಟು ಮಂದಿ ಸಾವನ್ನಪ್ಪಿದ್ದಾರೆ.

"ಸರಾಸರಿ ದೈನಂದಿನ ಕೋವಿಡ್ -19 ಸಕಾರಾತ್ಮಕ ದರವು ಸೆಪ್ಟೆಂಬರ್ 9-ಸೆಪ್ಟೆಂಬರ್ 15 ರ ನಡುವೆ 8.50 ಶೇಕಡಾ ಇದ್ದದ್ದು  ಅಕ್ಟೋಬರ್ 7 ರಿಂದ ಅಕ್ಟೋಬರ್ 13 ರ ನಡುವೆ 6.24 ಕ್ಕೆ ಇಳಿದಿದೆ" ಎಂದು ಅವರು ಹೇಳಿದರು. ದೇಶದಲ್ಲಿ 8,38,729 ಸಕ್ರಿಯ ಪ್ರಕರಣಗಳಿವೆ ಮತ್ತು ಅವು ಸತತ ಐದನೇ ದಿನವೂ ಒಂಬತ್ತು ಲಕ್ಷಕ್ಕಿಂತ ಕೆಳಗಿವೆ ಎಂದು ಅವರು ಹೇಳಿದರು.

ಮುಂಬರುವ ಹಬ್ಬಗಳು ಮತ್ತು ಚಳಿಗಾಲದ ದೃಷ್ಟಿಯಿಂದ, ಮಾಸ್ಕ್  ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಡ್ಡಾಯ. ಇಂತಹಾ ಉಪಕ್ರಮದಿಂದ ಕೋವಿಡ್ ನಿಂದ ದೂರವನ್ನು ಕಾಯ್ದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com