ಕಾಂಗ್ರೆಸ್ 'ಬೌದ್ಧಿಕವಾಗಿ ದುರ್ಬಲ' ಪಕ್ಷ: ಬಿಜೆಪಿ ಸೇರಿದ ಮಾರನೇ ದಿನವೇ ಖುಷ್ಬೂ ವಾಗ್ದಾಳಿ

ಬಿಜೆಪಿಗೆ ಸೇರ್ಪಡೆಯಾದ ಮಾರನೇ ದಿನವೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ 'ಬೌದ್ಧಿಕವಾಗಿ ದುರ್ಬಲ' ಪಕ್ಷ ಎಂದು ಮಂಗಳವಾರ ಟೀಕಿಸಿದ್ದಾರೆ.
ಖುಷ್ಬು
ಖುಷ್ಬು

ಚೆನ್ನೈ: ಬಿಜೆಪಿಗೆ ಸೇರ್ಪಡೆಯಾದ ಮಾರನೇ ದಿನವೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ 'ಬೌದ್ಧಿಕವಾಗಿ ದುರ್ಬಲ' ಪಕ್ಷ ಎಂದು ಮಂಗಳವಾರ ಟೀಕಿಸಿದ್ದಾರೆ.

ಕಾಂಗ್ರೆಸ್ ನಿಂದ ತಮ್ಮ ನಿರ್ಗಮನ, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಆ ಪಕ್ಷದ ಕೆಲ ಮುಖಂಡರ ಹೇಳಿಕೆಗೆ ಖುಷ್ಬೂ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಮಾನಸಿಕ ಪ್ರಬುದ್ಧತೆ ಎಂಬುದೇ ಇಲ್ಲ. ವಿವೇಕವಂತ ಮಹಿಳೆಯರು ಪಕ್ಷದಲ್ಲಿರಬೇಕೆಂದು ಕಾಂಗ್ರೆಸ್ ಎಂದಿಗೂ ಬಯಸುವುದಿಲ್ಲ, ಸತ್ಯ ಮಾತನಾಡುವ ಮುಕ್ತ ವಾತಾವರಣ ಅಲ್ಲಿ ಇಲ್ಲ ಎಂದು ದೂರಿದರು.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾಗಿದ್ದ ಖುಷ್ಬೂ ನಿನ್ನೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಕೆಲಮುಖಂಡರು ಏಕಸ್ವಾಮ್ಯಪಡೆದಂತೆ ವರ್ತಿಸಿ ತಮ್ಮ ಮೇಲೆ ದಬ್ಬಾಳಿಕೆ ನಡೆಸಿದರು ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಖುಷ್ಬೂ ಆರೋಪಿಸಿದ್ದರು.

ತಾವು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದಾಗಿ, ಆದರೆ ಆ ಪಕ್ಷ ತಮಗೆ ಅಗೌರವ ತೋರಿಸಿತು ಎಂದು ಖುಷ್ಬೂ ಇಂದು ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು. ಕೇವಲ ನಟಿಯನ್ನಾಗಿ ತಮ್ಮನ್ನು ಪರಿಗಣಿಸೆದ್ದವು ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಖುಷ್ಬೂ, ಇದು ಆ ಪಕ್ಷದ ನಾಯಕ ಆಲೋಚನೆಯ ಮಟ್ಟವನ್ನು ಸೂಚಿಸುತ್ತದೆ ಎಂದರು.

ತಮ್ಮನ್ನು ಪೆರಿಯಾರ್ ವಾದಿ ಎಂದು ಬಣ್ಣಿಸಿಕೊಂಡ ಖುಷ್ಬೂ, ಸತ್ಯ ಹೇಳಲು ಮುಕ್ತವಾಗಿಲ್ಲದ ಪಕ್ಷ ಹೇಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಶ್ನಿಸಿದರು. ಸಾಮಾಜಿಕ ಹೋರಾಟಗಾರ ಹಾಗೂ ದ್ರಾವಿಡ ಚಳವಳಿಯ ಪಿತಾಮಹ ಪೆರಿಯಾರ್ ಇವಿ ರಾಮಸ್ವಾಮಿ ಕೂಡ ಮಹಿಳೆಯರ ಮೇಲಿನ ದಬ್ಬಾಳಿಕೆಯ ವಿರುದ್ಧ ಮಾತನಾಡಿದ್ದರು ಎಂದು ಖುಷ್ಬೂ ನೆನಪಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com