ಹೊಸ ಕೃಷಿ ಕಾನೂನು: ಪ್ರತಿಭಟನಾನಿರತ ಪಂಜಾಬ್ ರೈತ ಸಂಘಗಳಿಂದ ನಾಳೆ ಕೇಂದ್ರದ ಜೊತೆ ಮಾತುಕತೆ!

ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ರೈತ ಸಂಘಟನೆಗಳು ಬುಧವಾರ ಕೇಂದ್ರದೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿವೆ.
ಪ್ರತಿಭಟನಾ ಚಿತ್ರ
ಪ್ರತಿಭಟನಾ ಚಿತ್ರ

ನವದೆಹಲಿ: ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ರೈತ ಸಂಘಟನೆಗಳು ಬುಧವಾರ ಕೇಂದ್ರದೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿವೆ.

ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಹಲವಾರು ರೈತ ಸಂಘಟನೆಗಳ ಪ್ರತಿನಿಧಿಗಳು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಕೇಂದ್ರದೊಂದಿಗೆ ಮಾತುಕತೆ ನಡೆಸಲು ಏಳು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ರಾಜೇವಾಲ್) ಮುಖ್ಯಸ್ಥ ಬಲ್ಬೀರ್ ಸಿಂಗ್ ರಾಜೇವಾಲ್  ಹೇಳಿದ್ದಾರೆ.

ಎಲ್ಲಾ ರೈತರ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ನಾವು ನಿರ್ಧರಿಸಿದ್ದೇವೆ ಎಂದು ರಾಜೇವಾಲ್ ಹೇಳಿದರು.

ಬಲ್ಬೀರ್ ಸಿಂಗ್ ರಾಜೇವಾಲ್, ದರ್ಶನ್ ಪಾಲ್, ಜಗ್ಜಿತ್ ಸಿಂಗ್ ದಲೆವಾಲ್, ಜಗ್ಮೋಹನ್ ಸಿಂಗ್, ಕುಲ್ವಂತ್ ಸಿಂಗ್, ಸುರ್ಜಿತ್ ಸಿಂಗ್ ಮತ್ತು ಸತ್ನಮ್ ಸಿಂಗ್ ಸಾಹ್ನಿ ಈ ಸಮಿತಿಯ ಸದಸ್ಯರಾಗಿದ್ದಾರೆ.

ಕಾನೂನುಗಳ ವಿರುದ್ಧದ ಆಂದೋಲನವು ರೈಲು ಸಂಚಾರವನ್ನು ಅಡ್ಡಿಪಡಿಸಿದೆ ಮತ್ತು ಪಂಜಾಬ್‌ನ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಕೂಡಲೇ ಮಾತುಕತೆಗೆ ಬನ್ನಿ ಎಂದು ಕೇಂದ್ರ ಸರ್ಕಾರ ನೀಡಿದ್ದ ಆಹ್ವಾನವನ್ನು ರೈತ ಸಂಘಗಳು ತಿರಸ್ಕರಿಸಿದ್ದವು. ಇದೀಗ ಕೇಂದ್ರ ಕೃಷಿ ಇಲಾಖೆಯ ಕಾರ್ಯದರ್ಶಿ ಕಳುಹಿಸಿದ ಆಹ್ವಾನದಂತೆ ಕೇಂದ್ರದ ಜೊತೆ ಮಾತುಕತೆ ನಡೆಸಲು ಬಯಸಿದೆ ಎಂದು ರಾಜೇವಾಲ್ ಹೇಳಿದರು.

"ನಾವು ಮಾತುಕತೆಗೆ ಹೋಗುತ್ತಿದ್ದೇವೆ ಏಕೆಂದರೆ ನಾವು ಆಹ್ವಾನವನ್ನು ತಿರಸ್ಕರಿಸುತ್ತಿದ್ದರೆ ನಾವು ಯಾವುದೇ ಮಾತುಕತೆಗೆ ಸಿದ್ಧರಿಲ್ಲ ಎಂದು ಅವರು ಹೇಳುತ್ತಾರೆ. ನಾವು ಅವರಿಗೆ ಯಾವುದೇ ಕ್ಷಮೆಯನ್ನು ನೀಡಲು ಬಯಸುವುದಿಲ್ಲ. ನಾವು ಅಲ್ಲಿಗೆ ಹೋಗುತ್ತೇವೆ ಎಂದು ರಾಜೇವಾಲ್ ಹೇಳಿದರು.

ಇತ್ತೀಚೆಗೆ ಸಂಸತ್ತು ಅಂಗೀಕರಿಸಿದ ಮೂರು ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಪಂಜಾಬ್‌ನ ರೈತರು ಒತ್ತಾಯಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com