ಅಜಂ ಖಾನ್
ಅಜಂ ಖಾನ್

ನಕಲಿ ಜನನ ಪ್ರಮಾಣಪತ್ರ ಪ್ರಕರಣ: ಸಂಸದ ಅಜಂ ಖಾನ್, ಪತ್ನಿ, ಪುತ್ರನಿಗೆ ಜಾಮೀನು

ನಕಲಿ ಜನನ ಪ್ರಮಾಣಪತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್, ಅವರ ಪತ್ನಿ ಮತ್ತು ಮಗನಿಗೆ ಅಲಹಾಬಾದ್ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.

ಅಲಹಾಬಾದ್: ನಕಲಿ ಜನನ ಪ್ರಮಾಣಪತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್, ಅವರ ಪತ್ನಿ ಮತ್ತು ಮಗನಿಗೆ ಅಲಹಾಬಾದ್ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.

ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿದ್ಧಾರ್ಥ್ ಅವರು, ಅಜಂ ಖಾನ್ ಅವರ ಪತ್ನಿ ತಜೀನ್ ಫಾತಿಮಾ ಮತ್ತು ಮಗ ಮೊಹಮ್ಮದ್ ಅಬ್ದುಲ್ಲಾ ಅವರಿಂದ ಬಾಂಡ್‌ ಪಡೆದು ಬಿಡುಗಡೆ ಮಾಡಬೇಕೆಂದು ಆದೇಶಿಸಿದ್ದಾರೆ.

ಆದರೆ, ವಿಚಾರಣಾ ಕೋರ್ಟ್ "ಮಾಹಿತಿದಾರ"ನ ಹೇಳಿಕೆಯನ್ನು ಪಡೆದ ನಂತರ ಅಜಂ ಖಾನ್ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಅಬ್ದುಲ್ಲಾ ಅವರ ನಕಲಿ ಜನನ ಪ್ರಮಾಣಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ವಜಾಗೊಂಡ ನಂತರ ಈ ಮೂವರು ಆರೋಪಿಗಳ ಕಳೆದ ಫೆಬ್ರವರಿಯಲ್ಲಿ ರಾಂಪುರ್ ನ್ಯಾಯಾಲಯಕ್ಕೆ ಶರಣಾಗಿದ್ದರು.

ಅಜಂ ಖಾನ್‌ ಅವರ ಪುತ್ರ ಮಹಮ್ಮದ್‌ ಅಬ್ದುಲ್ಲಾ ಖಾನ್‌ 2017ರಲ್ಲಿ ವಿಧಾನಸಭೆಗೆ ಆಯ್ಕೆಯಾದಾಗ, ಚುನಾವಣೆಗೆ ಸ್ಪರ್ಧಿಸುವ ವಯಸ್ಸು ಆಗಿರಲಿಲ್ಲ. ಹೀಗಾಗಿ ನಕಲಿ ಜನನ ಪ್ರಮಾಣಪತ್ರ ಪಡೆದು ಚುನಾವಣೆಗೆ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಬಳಿಕ ಹೈಕೋರ್ಟ್‌ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿತ್ತು.

Related Stories

No stories found.

Advertisement

X
Kannada Prabha
www.kannadaprabha.com