ಕೋವಿಡ್-19: ಆಂಧ್ರ ಪ್ರದೇಶದಲ್ಲಿ ಇಂದು 4,622 ಹೊಸ ಸೋಂಕು ಪ್ರಕರಣಗಳು ಪತ್ತೆ!

ಕೊರೋನಾ ಸೋಂಕಿನ ಆರ್ಭಟದಿಂದಾಗಿ ನಲುಗಿ ಹೋಗಿದ್ದ ಆಂಧ್ರ ಪ್ರದೇಶದಲ್ಲಿಯೂ ಕ್ರಮೇಣ ಸೋಂಕು ತಹಬದಿಗೆ ಬರುತ್ತಿದ್ದು, ಇಂದು 4,622 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.
ಆಂಧ್ರ ಪ್ರದೇಶ-ಕೊರೋನಾ ವೈರಸ್
ಆಂಧ್ರ ಪ್ರದೇಶ-ಕೊರೋನಾ ವೈರಸ್

ಅಮರಾವತಿ: ಕೊರೋನಾ ಸೋಂಕಿನ ಆರ್ಭಟದಿಂದಾಗಿ ನಲುಗಿ ಹೋಗಿದ್ದ ಆಂಧ್ರ ಪ್ರದೇಶದಲ್ಲಿಯೂ ಕ್ರಮೇಣ ಸೋಂಕು ತಹಬದಿಗೆ ಬರುತ್ತಿದ್ದು, ಇಂದು 4,622 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.

ಈ ಬಗ್ಗೆ ಆಂಧ್ರ ಪ್ರದೇಶ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಆಂಧ್ರ ಪ್ರದೇಶದಲ್ಲಿ 4,622 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಆ ರಾಜ್ಯದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 7,63,573ಕ್ಕೆ ಏರಿಕೆಯಾಗಿದೆ. ಅಂತೆಯೇ ಇಂದು ಆಂಧ್ರ ಪ್ರದೇಶದಲ್ಲಿ  5,715 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಆ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾದ ಒಟ್ಟಾರೆ ಸೋಂಕಿತರ ಸಂಖ್ಯೆ 7,14,427ಕ್ಕೆ ಏರಿಕೆಯಾಗಿದೆ.

ಇನ್ನು ಕೊರೋನಾ ಸೋಂಕಿನಿಂದಾಗಿ ಆಂಧ್ರ ಪ್ರದೇಶದಲ್ಲಿ ಈ ವರೆಗೂ 6,291 ಮಂದಿ ಸಾವನ್ನಪ್ಪಿದ್ದು, ಆಂಧ್ರ ಪ್ರದೇಶದಲ್ಲಿ ಪ್ರಸ್ತುತ 42,855 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದುಬಂದಿದೆ.

ಅಂಧ್ರ ಪ್ರದೇಶದಲ್ಲಿ ಇಂದು ಒಟ್ಟು 72,082 ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 32, 926 ಆರ್ ಟಿಪಿಸಿಆರ್ ಪರೀಕ್ಷೆಗಳು ಮತ್ತು 39, 156 ಆ್ಯಂಟಿ ಜೆನ್ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com