ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸ್ವಪ್ನ ಸುರೇಶ್ ಗೆ ಜಾಮೀನು, ಆದರೂ ಸೆರೆವಾಸ ಮುಂದುವರಿಕೆ

ಕೇರಳದ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರಿಗೆ ಕೊಚ್ಚಿಯ ಪ್ರಧಾನ ಸೆಷನ್ಸ್ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. 
ಆರೋಪಿ ಸ್ವಪ್ನ ಸುರೇಶ್
ಆರೋಪಿ ಸ್ವಪ್ನ ಸುರೇಶ್

ಕೊಚ್ಚಿ: ಕೇರಳದ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರಿಗೆ ಕೊಚ್ಚಿಯ ಪ್ರಧಾನ ಸೆಷನ್ಸ್ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. 

ಜಾರಿ ನಿರ್ದೇಶನಾಲಯ ತನಿಖೆ  ನಡೆಸುತ್ತಿರುವ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸ್ವಪ್ಮ ಸುರೇಶ್ ಗೆ ಜಾಮಿನು ದೊರೆತಿದೆ ಎಂದು ತಿಳಿದುಬಂದಿದೆ. ಆದರೆ ಜಾಮೀನು ದೊರೆತರೂ ಸ್ವಪ್ನ ಸುರೇಶ್ ಸೆರೆವಾಸದಲ್ಲೇ ಇರಬೇಕಾಗಿದ್ದು, ಚಿನ್ನದ ಕಳ್ಳಸಾಗಣೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಆಕೆ ಆರೋಪಿಯಾಗಿದ್ದಾರೆ. ಹೀಗಾಗಿ ಅವರ ಸೆರೆವಾಸ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.

ಚಿನ್ನದ ಕಳ್ಳಸಾಗಣೆಗೆ ಸಂಬಂಧಿಸಿದ ಉಗ್ರ ಸಂಪರ್ಕ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿರುವುದರಿಂದ ಸ್ವಪ್ನ ಸುರೇಶ್ ಜೈಲಿನಲ್ಲಿಯೇ ಕಾಲಕಳೆಯಬೇಕಿದೆ. ಕಳೆದ ವಾರ ಸ್ವಪ್ನಾ ಸುರೇಶ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿತ್ತು. ಇದೀಗ ಕೋರ್ಟ್ ತನ್ನ ತೀರ್ಪು ನೀಡಿದ್ದು, ಮನಿಲಾಂಡರಿಂಗ್ ಪ್ರಕರಣದಲ್ಲಿ ಸ್ವಪ್ನಗೆ ಜಾಮೀನು ದೊರೆತಿದೆ.

ಚಿನ್ನದ ಕಳ್ಳಸಾಗಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕಸ್ಟಮ್ಸ್ ಇಲಾಖೆಯಿಂದ ತನಿಖೆ ನಡೆಸಲಾಗುತ್ತಿದೆ.  ಕಸ್ಟಮ್ಸ್ ಅಂತಿಮ ವರದಿಯನ್ನು ನಿಗದಿತ 60 ದಿನಗಳೊಳಗೆ ಸಲ್ಲಿಸದ ಕಾರಣ ಆಕೆಗೆ ಜಾಮೀನು ನೀಡಲಾಯಿತು. ಜುಲೈ 5 ರಂದು ತಿರುವನಂತಪುರಂನಲ್ಲಿ ಕಸ್ಟಮ್ಸ್ನಿಂದ ರಾಜತಾಂತ್ರಿಕ ಸಾಮಾನುಗಳನ್ನು ವಶಪಡಿಸಿಕೊಂಡಿದ್ದರಿಂದ 14.82 ಕೋಟಿ ರೂ. ಮೌಲ್ಯದ 30 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com