ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಜ್ಯಪಾಲ ಕೋಶ್ಯಾರಿ ನಡುವೆ "ಜಾತ್ಯಾತೀತತೆ" ಕುರಿತು ಪತ್ರದ ಮೂಲಕ ವಾಗ್ವಾದ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ- ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡುವೆ ಜಾತ್ಯಾತೀತತೆಗೆ ಸಂಬಂಧಿಸಿದಂತೆ ಪತ್ರದ ಮೂಲಕ ವಾಗ್ವಾದ ನಡೆದಿದೆ. 
ಠಾಕ್ರೆ-ಕೋಶ್ಯಾರಿ ನಡುವೆ 'ಜಾತ್ಯಾತೀತತೆ' ಕುರಿತು ಪತ್ರದ ಮೂಲಕ ವಾಗ್ವಾದ
ಠಾಕ್ರೆ-ಕೋಶ್ಯಾರಿ ನಡುವೆ 'ಜಾತ್ಯಾತೀತತೆ' ಕುರಿತು ಪತ್ರದ ಮೂಲಕ ವಾಗ್ವಾದ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ- ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡುವೆ ಜಾತ್ಯಾತೀತತೆಗೆ ಸಂಬಂಧಿಸಿದಂತೆ ಪತ್ರದ ಮೂಲಕ ವಾಗ್ವಾದ ನಡೆದಿದೆ. 

ಧಾರ್ಮಿಕ ಕೇಂದ್ರಗಳನ್ನು ತೆರೆಯುವುದಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ನಡೆದ ಚರ್ಚೆಯಲ್ಲಿ ಜಾತ್ಯಾತೀತತೆಯ ಅಂಶವೂ ಪ್ರಸ್ತಾಪವಾಗಿದೆ. 

ಧಾರ್ಮಿಕ ಪ್ರಾರ್ಥನಾ ಕೇಂದ್ರಗಳನ್ನು ತೆರೆಯಬೇಕೆಂದು ತಮಗೆ ಮೂರು ಪ್ರಾತಿನಿಧಿತ್ವದ ನಿಯೋಗಗಳಿಂದ ಮನವಿ ಬಂದಿದೆ ಎಂದು ಮುಖ್ಯಮಂತ್ರಿಗಳಿಗೆ ರಾಜ್ಯಪಾಲರು ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಠಾಕ್ರೆ,  ಕೋವಿಡ್-19 ಪರಿಸ್ಥಿತಿಯನ್ನು ಕೂಲಂಕುಷವಾಗಿ ಪರಿಗಣಿಸಿ ಧಾರ್ಮಿಕ ಪ್ರಾರ್ಥನಾ ಕೇಂದ್ರಗಳನ್ನು ತೆರೆಯುವುದಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

ಅಷ್ಟೇ ಅಲ್ಲದೇ ರಾಜ್ಯಪಾಲರು ಉಲ್ಲೇಖಿಸಿದ್ದ ಮೂರೂ ಪತ್ರಗಳೂ ಸಹ ಬಿಜೆಪಿ ಕಚೇರಿಯ ಪದಾಧಿಕಾರಿಗಳು ಬೆಂಬಲಿಗರಿಂದಲೇ ಬಂದಿರುವುದು ಕಾಕತಾಳೀಯ ಎಂದು ವ್ಯಂಗ್ಯ ಧಾಟಿಯಲ್ಲಿ ಠಾಕ್ರೆ ಹೇಳಿದ್ದರು.

ಇತ್ತ ರಾಜ್ಯಪಾಲರೂ ಸಹ ಠಾಕ್ರೆಯವರನ್ನುದ್ದೇಶಿಸಿ "ನೀವು ಏಕಾ ಏಕಿ ಜಾತ್ಯಾತೀತರಾಗಿಬಿಟ್ಟಿದ್ದೀರಿ ಎಂದೂ ತಿವಿದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಠಾಕ್ರೆ, ಕೋಶ್ಯಾರಿ ಅವರಿಗೆ ಹಿಂದುತ್ವವೆಂದರೆ ಕೇವಲ ಧಾರ್ಮಿಕ ಪ್ರಾರ್ಥನಾ ಕೇಂದ್ರಗಳನ್ನು ತೆರೆಯುವುದು ಹಾಗೂ ತೆರೆಯದೇ ಇದ್ದರೆ ಸೆಕ್ಯುಲರ್ ಎಂದೆನಿಸುತ್ತಿದೆಯೇ? ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಜೊತೆಗೆ ನೀವು ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಸಂವಿಧಾನದ ಭಾಗವಲ್ಲವೇ ಜಾತ್ಯಾತೀತತೆ ಎಂಬುದು ಎಂದೂ ಕೇಳಿದ್ದರು. 

ಜನರ ಭಾವನೆ, ನಂಬಿಕೆಗಳನ್ನು ಪರಿಗಣಿಸಿವುದರ ಜೊತೆಗೆ ಅವರ ಜೀವನದ ಬಗ್ಗೆಯೂ ಕಾಳಜಿ ವಹಿಸುವುದು ಮುಖ್ಯ, ಏಕಾ ಏಕಿ ಲಾಕ್ ಡೌನ್ ಘೋಷಿಸುವುದು, ತೆಗೆಯುವುದು ಎರಡೂ ಸರಿಯಲ್ಲ ಎಂದು ಠಾಕ್ರೆ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com