ವಲಸೆ ಕಾರ್ಮಿಕರು, ವಿದ್ಯಾರ್ಥಿಗಳ ನಂತರ ಐಎಎಸ್ ಆಕಾಂಕ್ಷಿಗಳ ನೆರವಿಗೆ ಸೋನು ಸೂದ್ ಮುಂದು!

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ತಮ್ಮ ತಮ್ಮ ಊರು ಹಾಗೂ ಮನೆಗಳಿಗೆ ತಲುಪಲು  ಸಹಾಯ ಮಾಡಿದ  ಬಾಲಿವುಡ್ ನಟ ಸೋನು ಸೂದ್ ಈಗ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳ ಶಿಕ್ಷಣವನ್ನು ಪ್ರಾಯೋಜಿಸುವ ಉಪಕ್ರಮ ಕೈಗೊಂಡಿದ್ದಾರೆ.
ವಲಸೆ ಕಾರ್ಮಿಕರು, ವಿದ್ಯಾರ್ಥಿಗಳ ನಂತರ ಐಎಎಸ್ ಆಕಾಂಕ್ಷಿಗಳ ನೆರವಿಗೆ ಸೋನು ಸೂದ್ ಮುಂದು!

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ತಮ್ಮ ತಮ್ಮ ಊರು ಹಾಗೂ ಮನೆಗಳಿಗೆ ತಲುಪಲು  ಸಹಾಯ ಮಾಡಿದ  ಬಾಲಿವುಡ್ ನಟ ಸೋನು ಸೂದ್ ಈಗ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳ ಶಿಕ್ಷಣವನ್ನು ಪ್ರಾಯೋಜಿಸುವ ಉಪಕ್ರಮ ಕೈಗೊಂಡಿದ್ದಾರೆ.

ತಮ್ಮ ದಿವಂಗತ ತಾಯುಯ ಪ್ರೇರಣೆಯಿಂದ  ನಟ, ಪ್ರೊಫೆಸರ್ ಸರೋಜ್ ಸೂದ್ ವಿದ್ಯಾರ್ಥಿವೇತನದ ಮೂಲಕ ತಮ್ಮ ಕನಸುಗಳನ್ನು ಪೂರ್ಣಗೊಳಿಸಿಕೊಳ್ಲುವ ನಿರೀಕ್ಷೆಯಲ್ಲಿರುವ ಐಎಎಸ್ ಆಕಾಂಕ್ಷಿಗಳ ಬೆಂಬಲಕ್ಕೆ ನಿಂತಿದ್ದಾರೆ.

ತಾಯಿಯ 13ನೇ ವರ್ಷದ ಪುಣ್ಯದಿನದಂದು ನಟ್ ಸೋನು ಸೂದ್ ಈ ಬಗ್ಗೆ ಪ್ರಕಟಿಸಿದ್ದಾರೆ.

ಈ ಯೋಜನೆಯಂತೆ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತ ಕಾರ್ಯಕ್ರಮದಡಿಯಲ್ಲಿ, ವಿದ್ಯಾರ್ಥಿಗಳಿಗೆ ಆನ್‌ಲೈನ್ ಮತ್ತು ಕ್ಯಾಂಪಸ್ ಕೋರ್ಸ್‌ಗಳಿಗೆ ವಿದ್ಯಾರ್ಥಿವೇತನ ಲಭ್ಯವಾಗಲಿದೆ.

ಇನ್ಸ್ಟಾಗ್ರಾಮ್ ನಲ್ಲಿ ನಟ"ಅಕ್ಟೋಬರ್ 13ಕ್ಕೆ ನನ್ನ  ತಾಯಿ ತೀರಿಕೊಂಡು 13 ವರ್ಷಗಳಾಗುತ್ತದೆ, ಅವರುಶಿಕ್ಷಣಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು.ಇಂದು ಅವರ ಪುಣ್ಯಸ್ಮರಣೆಯಂದು ಐಎಎಸ್ ಆಕಾಂಕ್ಷಿಗಳು ಪ್ರೊಫೆಸರ್ ಸರೋಜ್ ಸೂದ್ ವಿದ್ಯಾರ್ಥಿವೇತನಗಳ ಮೂಲಕ ತಮ್ಮ ಗುರಿ ತಲುಪಲು ಬೆಂಬಲ ನೀಡುವುದಾಗಿ ನಾನು ಪ್ರತಿಜ್ಞೆ ಮಾಡುತ್ತೇನೆ.  ಈ ಮೂಲಕ ನಾನು ತಾಯಿಯ ಆಶೀರ್ವಾದ ಬೇಡುತ್ತೇನೆ,  ಮಿಸ್ ಯು ಮಾ." ಎಂದು ಬರೆದಿದ್ದಾರೆ.

ಈ ಹಿಂದೆ 47 ವರ್ಷದ ನಟ ಹರಿಯಾಣದ ಹಳ್ಳಿಯ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಫೋನ್‌ಗಳನ್ನು ಕಳುಹಿಸುವ ಮೂಲಕ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಹಾಯ ಮಾಡಿದ್ದರು. ಅಲ್ಲದೆ ಜೆಇಇ ಮತ್ತು ನೀಟ್ ಆಕಾಂಕ್ಷಿಗಳಿಗೆ ತಮ್ಮ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು ಸೂದ್ ಸಹಾಯ ಮಾಡಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com