ನಕಲಿ ಟಿಆರ್‌ಪಿ: ರಿಪಬ್ಲಿಕ್ ಟಿವಿಯ ಇಬ್ಬರು ಹಿರಿಯ ಸಂಪಾದಕರು ತನಿಖಾಧಿಕಾರಿಗಳ ಮುಂದೆ ಹಾಜರು

ನಕಲಿ ಟಿಆರ್‌ಪಿ ದಂಧೆ ಪ್ರಕರಣದಲ್ಲಿ ಹೇಳಿಕೆಗಳನ್ನು ದಾಖಲಿಸಲು ರಿಪಬ್ಲಿಕ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ನಿರಂಜನ್ ನಾರಾಯಣಸ್ವಾಮಿ ಮತ್ತು ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಅಭಿಷೇಕ್ ಕಪೂರ್ ಬುಧವಾರ ಮುಂಬೈ ಅಪರಾಧ ಶಾಖೆಯ ಅಧಿಕಾರಿಗಳ ಮುಂದೆ ಹಾಜರಾದರು.  

Published: 14th October 2020 05:28 PM  |   Last Updated: 14th October 2020 05:28 PM   |  A+A-


Posted By : Raghavendra Adiga
Source : PTI

ಮುಂಬೈ: ನಕಲಿ ಟಿಆರ್‌ಪಿ ದಂಧೆ ಪ್ರಕರಣದಲ್ಲಿ ಹೇಳಿಕೆಗಳನ್ನು ದಾಖಲಿಸಲು ರಿಪಬ್ಲಿಕ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ನಿರಂಜನ್ ನಾರಾಯಣಸ್ವಾಮಿ ಮತ್ತು ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಅಭಿಷೇಕ್ ಕಪೂರ್ ಬುಧವಾರ ಮುಂಬೈ ಅಪರಾಧ ಶಾಖೆಯ ಅಧಿಕಾರಿಗಳ ಮುಂದೆ ಹಾಜರಾದರು.  

ನಾರಾಯಣಸ್ವಾಮಿ ಮಧ್ಯಾಹ್ನ 12 ಗಂಟೆಗೆ ಅಪರಾಧ ಗುಪ್ತಚರ ಘಟಕ (ಸಿಐಯು) ಕಚೇರಿಯನ್ನು ತಲುಪಿದ್ದರೆ, ದೆಹಲಿ ಮೂಲದ ಕಪೂರ್ ಸಂಜೆ 4 ಗಂಟೆ ಸುಮಾರಿಗೆ ತಲುಪಿದ್ದಾರೆ ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್ 10 ರಂದು ರಿಪಬ್ಲಿಕ್ ಟಿವಿ ಹನ್ಸಾ ರಿಸರ್ಚ್ ಗ್ರೂಪ್ ಗೆ  ಸೇರಿದ ಡಾಕ್ಯುಮೆಂಟರಿಯನ್ನು ಪ್ರಸಾರ ಮಾಡಿತು. ಮಂಗಳವಾರ ನಾರಾಯಣಸ್ವಾಮಿ ಮತ್ತು ಕಪೂರ್ ಅವರಿಗೆ ನೀಡಿದ ಸಮನ್ಸ್, ನಲ್ಲಿ ದಂಧೆಗೆ ಸಂಬಂಧಿಸಿದಂತೆ  "ನಂಬಲು ಸಮಂಜಸವಾದ ಆಧಾರಗಳಿವೆ" ಅವರು "ದಾಖಲೆಯ ಕೆಲವು ಸಂಗತಿಗಳು ಮತ್ತು ಸಂದರ್ಭಗಳನ್ನು ಬಹಿರಂಗಪಡಿಸಿದ್ದಾರೆ", ಆದ್ದರಿಂದ ಅವರ ಹೇಳಿಕೆಗಳನ್ನು ದಾಖಲಿಸುವುದು ಅವಶ್ಯಕವಾಗಿದೆ ಎಂದು ಹೇಳಿತ್ತು.

ರಿಪಬ್ಲಿಕ್ ಟಿವಿ ಟ್ವೀಟ್ ನಲ್ಲಿ,  "ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್ ನಮ್ಮ ಕಾರ್ಯನಿರ್ವಾಹಕ ಸಂಪಾದಕ ನಿರಂಜನ್ ನಾರಾಯಣಸ್ವಾಮಿ ಮತ್ತು ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಅಭಿಷೇಕ್ ಕಪೂರ್ ಅವರ ಬೆನ್ನಿಗೆ ಬೆಂಬಲವಾಗಿ ನಿಂತಿದೆ. ರಿಪಬ್ಲಿಕ್ ತನ್ನ ವರದಿಯನ್ನು ಮಾಡಲು ಮತ್ತು ಮೂಲಗಳ ರಕ್ಷಿಸಲು  ಮಾಧ್ಯಮಗಳ ಹಕ್ಕಿಗೆ ಸಂಪೂರ್ಣವಾಗಿ ಬದ್ದವಿದೆ" ಎಂದಿದೆ. 

ಪ್ರಕರಣಕ್ಕೆ ಸಂಬಂಧಿಸಿ ಅಪರಾಧ ವಿಭಾಗವು ಈವರೆಗೆ ಐದು ಜನರನ್ನು ಬಂಧಿಸಿದೆ. 


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp