ಮಧ್ಯರಾತ್ರಿ ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆಯ ಅಂತ್ಯ ಸಂಸ್ಕಾರ ಮಾನವ ಹಕ್ಕುಗಳಿಗೆ ವಿರುದ್ಧ: ಹೈಕೋರ್ಟ್
ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆಯ ಅಂತ್ಯ ಸಂಸ್ಕಾರವನ್ನು ರಾತ್ರೋರಾತ್ರಿ ನೆರವೇರಿಸಿದ್ದು ಮಾನವ ಹಕ್ಕುಗಳಿಗೆ ವಿರುದ್ಧವಾದದ್ದು ಎಂದು ಅಲ್ಲಹಾಬಾದ್ ಹೈಕೋರ್ಟ್ ಹೇಳಿದೆ.
Published: 14th October 2020 12:37 PM | Last Updated: 14th October 2020 01:15 PM | A+A A-

ಮಧ್ಯರಾತ್ರಿ ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆಯ ಅಂತ್ಯ ಸಂಸ್ಕಾರ ಮಾನವ ಹಕ್ಕುಗಳಿಗೆ ವಿರುದ್ಧ: ಹೈಕೋರ್ಟ್
ಉತ್ತರ ಪ್ರದೇಶ: ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆಯ ಅಂತ್ಯ ಸಂಸ್ಕಾರವನ್ನು ರಾತ್ರೋರಾತ್ರಿ ನೆರವೇರಿಸಿದ್ದು ಮಾನವ ಹಕ್ಕುಗಳಿಗೆ ವಿರುದ್ಧವಾದದ್ದು ಎಂದು ಅಲ್ಲಹಾಬಾದ್ ಹೈಕೋರ್ಟ್ ಹೇಳಿದೆ.
ಉತ್ತರ ಪ್ರದೇಶ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್ ನ ನ್ಯಾ. ಪಂಕಜ್ ಮಿತ್ತಲ್ ಹಾಗೂ ನ್ಯಾ. ರಂಜನ್ ರಾಯ್ ಅವರಿದ್ದ ವಿಭಾಗೀಯ ಪೀಠ, ವಾಸ್ತವಾಸಂಶಗಳು, ಪರಿಸ್ಥಿತಿಗಳು ಹಾಗೂ ಈ ಹಿಂದಿನ ಅಂಶಗಳನ್ನು ಪರಿಗಣಿಸಿದರೆ, ಸಂತ್ರಸ್ತೆಯ ಪಾರ್ಥಿವ ಶರೀರವನ್ನು ಕುಟುಂಬ ಸದಸ್ಯರಿಗೆ ಸ್ವಲ್ಪ ಕಾಲವೂ ಹಸ್ತಾಂತರಿಸದೇ ಅಂತ್ಯಕ್ರಿಯೆ ನಡೆಸಿರುವುದು ಮಾನವ ಹಕ್ಕುಗಳ ಸ್ಪಷ್ಟವಾದ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಈ ರೀತಿ ಮಾಡಿರುವುದು ಸೂಕ್ತವಲ್ಲ ಎಂದು ಹೇಳಿರುವ ಕೋರ್ಟ್, ಪಾರ್ಥಿವ ಶರೀರವನ್ನು ಹಸ್ತಾಂತರಿಸದೇ ಇರಲು ಯಾವುದೇ ಕಾರಣಗಳು ತಮಗೆ ಕಾಣುತ್ತಿಲ್ಲ ಎಂದೂ ಹೇಳಿದೆ.
ದಹನ ಕ್ರಿಯೆ ಸಂಸ್ಕಾರಗಳಲ್ಲಿ ಒಂದು, ಹಾಗೂ ಅತ್ಯಂತ ಮುಖ್ಯವಾದದ್ದು, ಅದರಲ್ಲಿ ಕಾನೂನು ಸುವ್ಯವಸ್ಥೆಗಳ ಕಾರಣ ನೀಡಿ ರಾಜಿಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದೂ ಕೋರ್ಟ್ ಹೇಳಿದೆ.