ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಟಿ ಖುಷ್ಬೂ ವಿರುದ್ಧ '30 ಠಾಣೆಗಳಲ್ಲಿ' ದೂರು ದಾಖಲು!

ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ನಟಿ ಖುಷ್ಬೂ ಅವರ ವಿರುದ್ಧ ಬುಧವಾರ ದೂರು ದಾಖಲಾಗಿದೆ.
ಖುಷ್ಬು
ಖುಷ್ಬು

ನವದೆಹಲಿ: ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ನಟಿ ಖುಷ್ಬೂ ಅವರ ವಿರುದ್ಧ ಬುಧವಾರ ದೂರು ದಾಖಲಾಗಿದೆ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ನಟಿ ಖುಷ್ಬೂ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷ ಬೌದ್ಧಿಕವಾಗಿ ದುರ್ಬಲ ಪಕ್ಷ ಎಂದು ಟೀಕಿಸಿದ್ದರು. ಇದೀಗ ಇದೇ ಹೇಳಿಕೆಗೆ ಸಂಬಂಧಿಸಿದಂತೆ ಖುಷ್ಬೂ ಅವರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.  ನಟಿ ಖುಷ್ಬೂ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ ಅಂಗವಿಕಲರನ್ನು ಹೀಗಳೆದು ಮಾತನಾಡಿದ್ದಾರೆ ಎಂದು ಆರೋಪಿಸಿ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ದೂರು ದಾಖಲು ಮಾಡಿದೆ. 

ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆಯ ಕಾರ್ಯದರ್ಶಿ ಮುರಳೀಧರನ್ ಅವರು ಚೆನ್ನೈ, ಕಾಂಜಿಪುರಂ, ಚೆಂಗಲ್‌ಪೇಟೆ, ಮಧುರೈ, ಕೊಯಮತ್ತೂರು, ತಿರುಪುರ್ ಸೇರಿದಂತೆ 30 ಠಾಣೆಗಳಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಪೈಕಿ ಹಲವು ದೂರುಗಳು ಆನ್ ಲೈನ್ ನಲ್ಲಿ ಸಲ್ಲಿಕೆಯಾಗಿದೆ. ಅಂತೆಯೇ ಒಂದು  ದೂರನ್ನು ನೇರವಾಗಿ ಚೆನ್ನೈ ಪೊಲೀಸ್ ಕಮಿಷನರ್ ಕಚೇರಿಯಲ್ಲೇ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ನಟಿ ಖುಷ್ಬೂ ಅವರು ಓರ್ವ ರಾಜಕಾರಣಿಯಾಗಿದ್ದು, ಅವರಿಗೆ ಅವರ ವಿರೋಧಿಗಳನ್ನು ಅಥವಾ ಎದುರಾಳಿಗಳನ್ನು ಟೀಕಿಸುವ ಹಕ್ಕಿದೆ. ಆದರೆ ಅವರು ಯಾರನ್ನೋ ಟೀಕಿಸುವ ಭರದಲ್ಲಿ ಅಂಗವಿಕಲರನ್ನು ಹೀಗಳೆಯುವ ಹಕ್ಕು ಅವರಿಗಿಲ್ಲ. ಅವರು ಮಾಡಿರುವ ಪದ ಬಳಕೆಗಳು ಅಂಗವಿಕಲರ ಮಾನಸಿಕ ಸ್ಥೈರ್ಯ  ಕುಸಿಯುವಂತಿದೆ. ಅಂತೆಯೇ ಅಂಗವಿಕಲರನ್ನು ನಕಾರಾತ್ಮಕವಾಗಿ ನೋಡುವ ಆಂತಕವಿದೆ. ಇದು ನಿಜಕ್ಕೂ ಸಹಿಸಲಸಾಧ್ಯ. ಇಂತಹ ಕೃತ್ಯಗಳನ್ನು ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ಖಂಡಿಸುತ್ತದೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇದು ಮತ್ತೊಬ್ಬರಿಗೆ  ಮಾದರಿಯಾಗಬೇಕು ಎಂದು ಮುರಳೀಧರನ್ ಅವರು ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com