ಬಿಹಾರ ಚುನಾವಣೆಗೂ ಮುನ್ನ ಶರದ್ ಯಾದವ್ ಪುತ್ರಿ ಕಾಂಗ್ರೆಸ್ ಸೇರ್ಪಡೆ
ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮಹತ್ವದ ಬೆಳವಣಿಗೆಯಲ್ಲಿ ಲೋಕತಾಂತ್ರಿಕ ಜನತಾದಳದ ಮುಖ್ಯಸ್ಥ ಶರದ್ ಯಾದವ್ ಪುತ್ರಿ ಶುಭಾಷಿಣಿ ಯಾದವ್ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
Published: 14th October 2020 05:20 PM | Last Updated: 14th October 2020 08:05 PM | A+A A-

ಬಿಹಾರ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಿದ ಶರದ್ ಯಾದವ್ ಪುತ್ರಿ
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮಹತ್ವದ ಬೆಳವಣಿಗೆಯಲ್ಲಿ ಲೋಕತಾಂತ್ರಿಕ ಜನತಾದಳದ ಮುಖ್ಯಸ್ಥ ಶರದ್ ಯಾದವ್ ಪುತ್ರಿ ಶುಭಾಷಿಣಿ ಯಾದವ್ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಶುಭಾಷಿಣಿ ಯಾದವ್ ಅವರ ಜೊತೆಗೆ ಲೋಕ ಜನಶಕ್ತಿ ಪಕ್ಷದ ನಾಯಕ ಹಾಗೂ ಮಾಜಿ ಸಂಸದ ಕಾಳಿ ಪಾಂಡೆ ಸಹ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.
ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಉಭಯ ನಾಯಕರೂ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಮಹಾಘಟಬಂಧನದ ಹೋರಾಟವನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯನ್ನು ತಾವು ತೆಗೆದುಕೊಳ್ಳುತ್ತಿರುವುದಾಗಿ ಸುಭಾಷಿಣಿ ಯಾದವ್ ಹೇಳಿದ್ದು, ತಮಗೆ ಅವಕಾಶ ನೀಡಿದ್ದಕ್ಕೆ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.
ಎಲ್ ಜೆ ಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಕಾಲಿ ಪಾಂಡೆ 1984 ರಲ್ಲಿ ತಾವು ಸಂಸದರಾಗಿದ್ದಾಗ ರಾಜೀವ್ ಗಾಂಧಿ ಅವರಿಗೆ ಬೆಂಬಲ ನೀಡಿದ್ದರು.