ಜಮ್ಮು ಕಾಶ್ಮೀರ: ಇಬ್ಬರು ಭದ್ರತಾ ಸಿಬ್ಬಂದಿ ನಾಪತ್ತೆ, 2 ಎಕೆ ರೈಫಲ್, 3 ಮ್ಯಾಗಜಿನ್ ಕಾಣೆ!

ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ನಾಪತ್ತೆಯಾಗಿದ್ದು, ಕ್ಯಾಂಪ್ ನಲ್ಲಿದ್ದ ಶಸ್ತ್ರಾಸ್ತ್ರಗಳು ಕಾಣೆಯಾಗಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ನಾಪತ್ತೆಯಾಗಿದ್ದು, ಕ್ಯಾಂಪ್ ನಲ್ಲಿದ್ದ ಶಸ್ತ್ರಾಸ್ತ್ರಗಳು ಕಾಣೆಯಾಗಿವೆ. 

ಕೇಂದ್ರ ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಚಾದೂರ ಪ್ರದೇಶದಲ್ಲಿ ವಿಶೇಷ ಪೊಲೀಸ್ ಅಧಿಕಾರಿಯಾಗಿದ್ದ ಅಲ್ತಾಫ್ ಹುಸೈನ್ ನಾಪತ್ತೆಯಾಗಿದ್ದಾರೆ. ಇದೇ ವೇಳೆ ಕ್ಯಾಂಪ್ ನಲ್ಲಿದ್ದ ಎರಡು ಎಕೆ ರೈಫಲ್ ಮತ್ತು ಮೂರು ಮ್ಯಾಗಜಿನ್ ಸಹ ಕಾಣೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇನ್ನು ಮತ್ತೊಂದು ಘಟನೆಯಲ್ಲಿ ಎಸ್ಎಸ್ ಬಿಗೆ ಸೇರಿದ ಪೇದೆ ಸಹ ನಾಪತ್ತೆಯಾಗಿದ್ದು ಇವರ ಹೆಸರು ಸಹ ಅಲ್ತಾಫ್ ಹುಸೈನ್ ಎಂದು ಗುರುತಿಸಲಾಗಿದೆ. ನಾಗಂ ಪ್ರದೇಶದಲ್ಲಿನ ಕ್ಯಾಂಪ್ ನಿಂದ ಅಲ್ತಾಫ್ ಹುಸೈನ್ ನಾಪತ್ತೆಯಾಗಿದ್ದು ಕ್ಯಾಂಪ್ ನಲ್ಲಿದ್ದ ಒಂದು ರೈಫಲ್ ಹಾಗೂ ಮ್ಯಾಗಜಿನ್ ಸಹ ಕಾಣೆಯಾಗಿದೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com