ಗುಟ್ಕಾ ಅಕ್ರಮ ಪ್ರಕರಣ: ನಟ ಸಚಿನ್ ಜೋಷಿ, ತಂದೆ ಜೆಎಂ ಜೋಷಿ ಬಂಧನ, ಪ್ರಕರಣ ದಾಖಲು

ಬಾಲಿವುಡ್ ಹಾಗೂ ಟಾಲಿವುಡ್ ನ ಖ್ಯಾತ ನಟ ಸಚಿನ್ ಜೋಷಿ ಅವರನ್ನು ಹೈದರಾಬಾದ್ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Published: 15th October 2020 08:48 PM  |   Last Updated: 15th October 2020 08:48 PM   |  A+A-


Sachin Joshi

ನಟ ಸಚಿನ್ ಜೋಷಿ

Posted By : Srinivasamurthy VN
Source : PTI

ಮುಂಬೈ: ಬಾಲಿವುಡ್ ಹಾಗೂ ಟಾಲಿವುಡ್ ನ ಖ್ಯಾತ ನಟ ಸಚಿನ್ ಜೋಷಿ ಅವರನ್ನು ಹೈದರಾಬಾದ್ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಗುಟ್ಕಾ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಚಿನ್ ಜೋಶಿ ಮತ್ತು ಅವರ ತಂದೆ ಜೆಎಂ ಜೋಷಿ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಮಾದಕ ದ್ರವ್ಯ ಪ್ರಕರಣದ ಬೆನ್ನಲ್ಲೇ ಗುಟ್ಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ಜೋಷಿ ಬಂಧನ ವಿಚಾರ ಇದೀಗ  ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿದೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಭಾರಿ ಗುಟ್ಕಾ ಕಳ್ಳಸಾಗಾಣಿಕೆದಾರನನ್ನು ಬಂಧಿಸಿದ್ದರು. ಸುಮಾರು 1.25 ಕೋಟಿ ಮೌಲ್ಯದ ಭಾರಿ ಪ್ರಮಾಣದ ಗುಟ್ಕಾ ಪೆಟ್ಟಿಗೆಗಳು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಆತನನ್ನು ವಶಕ್ಕೆ ಪಡೆದಿದ್ದರು. ಇದೀಗ ಇದೇ ಪ್ರಕರಣಕ್ಕೆ  ಸಂಬಂಧಿಸಿದಂತೆ ನಟ ಸಚಿನ್ ಜೋಷಿಯನ್ನೂ ಕೂಡ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸಚಿನ್ ಜೋಷಿ ವಿರುದ್ಧ ಐಪಿಸಿಯ ಸೆಕ್ಷನ್ 273, 420 ಮತ್ತು 336 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಚಿನ್ ಜೋಶಿ ಅವರನ್ನು ವಿಚಾರಣೆಗೊಳಪಡಿಸಲು  ಅಧಿಕಾರಿಗಳು ಮುಂದಾಗಿದ್ದರು. ಈ ವಿಚಾರ ತಿಳಿದ ನಟ ಸಚಿನ್ ಜೋಷಿ ಮುಂಬೈ ಮೂಲಕ ದುಬೈಗೆ ಪರಾರಿಯಾಗಲು ಯತ್ನಿಸಿದ್ದರು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಅವರನ್ನು ಹೈದರಾಬಾದ್ ನ ಸೈಬರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಬಾಲಿವುಡ್‌ನ ಶ್ರೀಮಂತ ನಟರಲ್ಲಿ ಸಚಿನ್ ಜೋಶಿ ಕೂಡ ಒಬ್ಬರು. ಅವರ ತಂದೆ ಗುಟ್ಕಾ ವ್ಯವಹಾರದಲ್ಲಿ ಪ್ರಸಿದ್ಧರಾಗಿದ್ದರು. ಗೋವಾ ಪಾನ್ ಮಸಾಲ ಎಂಬ ಹೆಸರಿನಲ್ಲಿ ಜೆಎಂ ಜೋಷಿ ಗುಟ್ಕಾ ಮಾರಾಟ ಮಾಡುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಗುಟ್ಕಾ ಕಿಂಗ್ ಎಂದೂ ಕರೆಯಲಾಗುತ್ತಿತ್ತು. ಆದರೆ ಇದೀಗ  ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣಗಳ ಅನ್ವಯ ಜೆಎಂ ಜೋಷಿ ತಮ್ಮ ಗೋವಾ ಪಾನ್ ಮಸಾಲಾಗೆ ಯಾವುದೇ ರೀತಿಯ ಕಾನೂನಾತ್ಮಕ ಪರವಾನಗಿ ಪಡೆದಿರಲಿಲ್ಲ ಎಂದು ಆರೋಪಿಸಲಾಗಿದೆ.

ಇನ್ನು ನಟ ಸಚಿನ್ ಜೋಷಿ ಬಾಲಿವುಡ್ ಮಾತ್ರವಲ್ಲದೇ ಟಾಲಿವುಡ್ ನಲ್ಲೂ ಸಾಕಷ್ಟು ಕೀರ್ತಿ ಗಳಿಸಿದ್ದರು. `ಮೌನಮೆಲನೋಯಿ`,` ನಿನು ಚುಡಕಾ ನೆನುಂಡಲೇನು`, ಒರೆ ಪಾಂಡು`, `ಆಜನ್`,` ಜಾಕ್‌ಪಾಟ್`, `ವೀರಪ್ಪನ್`,` ವಿವಾಡು`, `ನೆಕ್ಸ್ಟ್ ಏಂಟಿ`, 'ಅಮಾವಾಸ್ಯ` ಚಿತ್ರಗಳಲ್ಲಿ ನಟಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp