ದೆಹಲಿಯಲ್ಲಿ ದಿಢೀರ್ ವಾಯು ಮಾಲಿನ್ಯ ಹೆಚ್ಚಳಕ್ಕೆ ಕಾರಣವೇನು?: ಜಾವಡೇಕರ್ ಗೆ ಕೇಜ್ರಿವಾಲ್ ಪ್ರಶ್ನೆ

ನಿರಾಕರಣೆಯಲ್ಲಿ ತೊಡಗುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಕೃಷಿ ತ್ಯಾಜ್ಯ ಸುಡುವುದರಿಂದ ಕೇವಲ 4 ರಷ್ಟು ಮಾತ್ರ ವಾಯು ಮಾಲಿನ್ಯವಾಗುತ್ತಿದೆ ಎಂದ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಗುರುವಾರ ತಿರುಗೇಟು ನೀಡಿದ್ದಾರೆ.
ಕೃಷಿ ತ್ಯಾಜ್ಯ ಸುಡುತ್ತಿರುವುದು
ಕೃಷಿ ತ್ಯಾಜ್ಯ ಸುಡುತ್ತಿರುವುದು

ನವದೆಹಲಿ: ನಿರಾಕರಣೆಯಲ್ಲಿ ತೊಡಗುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಕೃಷಿ ತ್ಯಾಜ್ಯ ಸುಡುವುದರಿಂದ ಕೇವಲ 4 ರಷ್ಟು ಮಾತ್ರ ವಾಯು ಮಾಲಿನ್ಯವಾಗುತ್ತಿದೆ ಎಂದ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಗುರುವಾರ ತಿರುಗೇಟು ನೀಡಿದ್ದಾರೆ.

ಕಳೆದ ಹದಿನೈದು ದಿನಗಳಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯವು ಇದ್ದಕ್ಕಿದ್ದಂತೆ ಏಕೆ ಹೆಚ್ಚಾಗಿದೆ? ಎಂದು ಅರವಿಂದ್ ಕೇಜ್ರಿವಾಲ್ ಅವರು ಟ್ವಿಟರ್‌ ನಲ್ಲಿ ಕೇಂದ್ರ ಸಚಿವರನ್ನು ಪ್ರಶ್ನಿಸಿದ್ದಾರೆ.

"ನಿರಾಕರಣೆಯಲ್ಲಿ ತೊಡಗುವುದರಿಂದ ಯಾವುದೇ ಪ್ರಯೋಜನ ಇಲ್ಲ. ತ್ಯಾಜ್ಯ ಸುಡುವಿಕೆಯು ದೆಹಲಿ ಮಾಲಿನ್ಯಕ್ಕೆ ಕೇವಲ ಶೇ. 4 ರಷ್ಟು ಕಾರಣವಾಗಿದ್ದರೆ, ಮಾಲಿನ್ಯವು ದಿಢೀರ್ ಏಕೆ ಹೆಚ್ಚಾಗಿದೆ?, ತ್ಯಾಜ್ಯ ಸುಡುವುದಕ್ಕಿಂದ ಗಾಳಿಯು ಶುದ್ಧವಾಗಿತ್ತು. ಪ್ರತಿ ವರ್ಷವೂ ಇದೇ ಕಥೆ. ಕಳೆದ ಕೆಲವು ವರ್ಷಗಳಲ್ಲಿ ಯಾವುದೇ ಸ್ಥಳೀಯ ಮಾಲಿನ್ಯ ಮೂಲಗಳಿಂದ ದೆಹಲಿ ವಾಯು ಮಾಲಿನ್ಯದಲ್ಲಿ ದಿಢೀರ್ ಏರಿಕೆಯಾಗಿಲ್ಲ. ಕಳೆದ ಕೆಲವು ದಿನಗಳಿಂದ ಮಾಲಿನ್ಯ ಹೆಚ್ಚಾಗಲು ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.

ಇಂದು ಬೆಳಗ್ಗೆಯಷ್ಟೇ ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ಹೆಚ್ಚಾಗಲು ತ್ಯಾಜ್ಯ ಸುಡುವುದು ಪ್ರಮುಖ ಕಾರಣವಲ್ಲ. ಅದರಿಂದ ಕೇವಲ 4 ರಷ್ಟು ಮಾತ್ರ ಮಾಲಿನ್ಯವಾಗುತ್ತಿದೆ ಎಂದು ಜಾವಡೇಕರ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com