ಹತ್ರಾಸ್ ಗ್ಯಾಂಗ್ ರೇಪ್: ಜನಾಂಗೀಯ, ಕೋಮು ಗಲಭೆ ಸೃಷ್ಟಿಸುವ ಸಂಚು ಆಗಿದೆಯೇ? ಎಸ್ ಟಿಎಫ್ ತನಿಖೆ

ಜನಾಂಗೀಯ ಮತ್ತು ಕೋಮು ಗಲಭೆಗಳನ್ನು ಪ್ರಚೋದಿಸುವ ಸಂಚಿನಿಂದಾಗಿ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆಯೇ ಎಂಬುದರ  ಕುರಿತು ವಿಶೇಷ ಕಾರ್ಯಪಡೆಯ ತಂಡ ತನಿಖೆ ನಡೆಸಲಿದೆ ಎಂದು ರಾಜ್ಯ ಸರ್ಕಾರ ಶುಕ್ರವಾರ ತಿಳಿಸಿದೆ.

Published: 16th October 2020 06:34 PM  |   Last Updated: 16th October 2020 08:12 PM   |  A+A-


Protest_against_Hathras_gang_rape1

ಹತ್ರಾಸ್ ಪ್ರಕರಣ ಖಂಡಿಸಿ ಪ್ರತಿಭಟನೆಯ ಚಿತ್ರ

Posted By : Nagaraja AB
Source : The New Indian Express

ಲಖನೌ:  ಜನಾಂಗೀಯ ಮತ್ತು ಕೋಮು ಗಲಭೆಗಳನ್ನು ಪ್ರಚೋದಿಸುವ ಸಂಚಿನಿಂದಾಗಿ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆಯೇ? ಎಂಬುದರ  ಕುರಿತು ವಿಶೇಷ ಕಾರ್ಯಪಡೆಯ ತಂಡ ತನಿಖೆ ನಡೆಸಲಿದೆ ಎಂದು  ರಾಜ್ಯ ಸರ್ಕಾರ ಶುಕ್ರವಾರ ತಿಳಿಸಿದೆ.

ಹತ್ರಾಸ್ ನಲ್ಲಿನ ಚಂದ್ಪಾ ಠಾಣೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಯೋಗಿ ಆದಿತ್ಯನಾಥ್ ಸರ್ಕಾರವನ್ನು ಅಪಖ್ಯಾತಿಗೊಳಿಸುವ ಅಂತಾರಾಷ್ಟ್ರೀಯ ಪ್ರಯತ್ನಗಳು ಬೆಳಕಿಗೆ ಬಂದ ನಂತರ ಪಿತೂರಿಗಳನ್ನು ಬಹಿರಂಗಪಡಿಸಲು ಎಸ್‌ಟಿಎಫ್‌ನ ವಿಶೇಷ ಘಟಕವನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯವು ತಿಳಿಸಿದೆ.

ಯೋಗಿ ಸರ್ಕಾರದ ಹೆಸರು ಕೆಡಿಸಲು ಪಾಕಿಸ್ತಾನ, ಯುಇಎ ಮತ್ತು ಬಾಂಗ್ಲಾದೇಶ ಸೇರಿದಂತೆ ಎಲ್ಲಾ ಇಸ್ಲಾಮಿಕ್ ರಾಷ್ಟ್ರಗಳಿಂದ ದೊಡ್ಡ ಮಟ್ಟದ ನಿಧಿ ಮತ್ತು ಸಂಚುಗಳನ್ನು ರೂಪಿಸಲಾಗುತ್ತಿದೆ.  ಎಡಿಟ್ ಮಾಡಿರುವ ಛಾಯಾಚಿತ್ರಗಳು, ನಕಲಿ ಮಾಹಿತಿ ಹರಡುವುದರೊಂದಿಗೆ ಜನಾಂಗೀಯ ಮತ್ತು ಕೋಮು ಗಲಭೆ ಸೃಷ್ಟಿಸಲು ಸಂಚು ರೂಪಿಸುವ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂದು ಅದರಲ್ಲಿ ಹೇಳಲಾಗಿದೆ.

ಮುಖ್ಯಮಂತ್ರಿ ಕಾರ್ಯಾಲಯದ ಪ್ರಕಾರ, ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ  ಪಿಎಫ್ಐ ನ ಸದಸ್ಯರನ್ನು ವಿಚಾರಣೆಗೊಳಪಡಿಸಿ ಬಂಧಿಸಲಾಗಿದೆ.ಮಥುರಾದಲ್ಲಿ ಪಿಎಫ್ ಐ ಸಂಘಟನೆಯೊಂದಿಗೆ ನಂಟು ಹೊಂದಿದ್ದ ನಾಲ್ವರು ಜನರ ವಿರುದ್ಧ ಆಕ್ಟೋಬರ್ 7 ರಂದು ಎಫ್ ಐಆರ್ ಒಂದನ್ನು ದಾಖಲಿಸಲಾಗಿದೆ.

ಈ ಮಧ್ಯೆ, ಪ್ರಕರಣವನ್ನು ದೆಹಲಿಗೆ ವರ್ಗಾಯಿಸಬೇಕೆಂದು ಸಂತ್ರಸ್ತೆಯ ಕುಟುಂಬ ಒತ್ತಾಯಿಸಿದೆ. ನಾವು ಎಲ್ಲಿದ್ದರೂ ಸುರಕ್ಷಿತವಾಗಿರಲು ಬಯಸುತ್ತೇವೆ ಎಂದಿರುವ ಸಂತ್ರಸ್ಥೆಯ ಸಹೋದರ, ನಾವು ಕೂಡಾ ದೆಹಲಿಗೆ ಹೋಗಲು ಬಯಸಿದ್ದು, ಸರ್ಕಾರ ನೆರವು ನೀಡಬೇಕೆಂದು ಮನವಿ ಮಾಡಿದ್ದಾರೆ.

ಹತ್ರಾಸ್ ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ, ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದಂತೆ ಈ ಬೆಳವಣಿಗೆ ನಡೆದಿದೆ. ಸಂತ್ರಸ್ತೆಯ ಅಂತ್ಯಸಂಸ್ಕಾರ ನಡೆದ ಸ್ಥಳದ ಮಾದರಿಯನ್ನು ತನಿಖಾ ತಂಡ ಮಂಗಳವಾರ ಸಂಗ್ರಹಿಸಿದ್ದು, ಪ್ರಕರಣದ ಬಗ್ಗೆ ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದೆ.

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp