ಕಂಗನಾ ರಣಾವತ್, ಸೋದರಿ ರಂಗೋಲಿ ಚಾಂಡೆಲ್ ವಿರುದ್ಧ ಎಫ್ ಐಆರ್ ದಾಖಲಿಸಲು ಕೋರ್ಟ್ ಆದೇಶ

ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಆಕೆಯ ಸೋದರಿ ರಂಗೋಲಿ ಚಾಂಡೆಲ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಬಾಂದ್ರಾದಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ವೊಂದು ಆದೇಶ ನೀಡಿದೆ.
ರಂಗೋಲಿ ಚಾಂಡೆಲ್ ಮತ್ತು ಕಂಗನಾ
ರಂಗೋಲಿ ಚಾಂಡೆಲ್ ಮತ್ತು ಕಂಗನಾ

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಆಕೆಯ ಸೋದರಿ ರಂಗೋಲಿ ಚಾಂಡೆಲ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಬಾಂದ್ರಾದಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ವೊಂದು ಆದೇಶ ನೀಡಿದೆ.

ಟ್ವೀಟ್ ಗಳ ಮೂಲಕ ಹಿಂದೂ ಮತ್ತು ಮುಸ್ಲಿಂರ ನಡುವೆ ಕೋಮುಗಲಭೆ, ದ್ವೇಷ ಹರಡುವಿಕೆ ಪ್ರಯತ್ನಕ್ಕಾಗಿ ಅವರಿಬ್ಬರ ವಿರುದ್ಧ ಎಫ್ ಐಆರ್ ದಾಖಲಿಸಲು ನ್ಯಾಯಾಲಯ ಹೇಳಿದೆ.

ವಿನ್ಯಾಸಕ ಹಾಗೂ ಫಿಟ್ನೆಸ್ ತರಬೇತುದಾರ ಮುನ್ನಾವರಲಿ ಸಯ್ಯದ್ ನೀಡಿದ ದೂರಿಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಜಯದೇವ್ ಘುಲೆ ಈ ಆದೇಶವನ್ನು ನೀಡಿದ್ದಾರೆ.

ಐಪಿಎಲ್ ಸೆಕ್ಷನ್ 153 ಎ( ವಿವಿಧ ಗುಂಪುಗಳ ನಡುವೆ ಶತ್ರುತ್ವಕ್ಕೆ ಪ್ರಚೋದನೆ) 295 ಎ( ಧರ್ಮವನ್ನು ಅಪಮಾನಿಸುವ ಮೂಲಕ ಕೋಮು ಭಾವನೆ ಕೆರಳಿಸುವ ಚಟುವಟಿಕೆ) ಮತ್ತು 124ಎ ಅನ್ವಯ ದೇಶದ್ರೋಹದ ಆಧಾರದ ಮೇಲೆ ಪ್ರಕರಣ ದಾಖಲಿಸಬೇಕೆಂದು ಸಯ್ಯದ್ ದೂರಿನಲ್ಲಿ ಕೇಳಿಕೊಂಡಿದ್ದರು.

ಸುಶಾಂತ್ ಸಿಂಗ್ ರಜಪೂತ್ ಕೇಸ್ ಹಾಗೂ ಮುಂಬೈಯನ್ನು ಪಾಕ್ ಎಂದು ಕರೆದು ರಣಾವತ್ ಮಾಡಿದ್ದ ಟ್ವೀಟ್ ಗಳನ್ನು ನ್ಯಾಯಾಧೀಶರು ಉಲ್ಲೇಖಿಸಿದರು. ಇದು ರಣಾವತ್ ವಿರುದ್ಧದ ಎರಡನೇ ಎಫ್ ಐಆರ್ ಆಗಿದೆ. ಮೊದಲ ಎಫ್ ಐಆರ್ ಬೆಂಗಳೂರಿನಲ್ಲಿ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com