ಕಾಶ್ಮೀರ: ವಿದೇಶಿ ಎಲ್ಇಡಿ ತಜ್ಞ ಭಯೋತ್ಪಾದಕ ಎನ್ ಕೌಂಟರ್ ನಲ್ಲಿ ಸಾವು 

ಲಷ್ಕರ್ ಏ ತಯ್ಬಾ ಭಯೋತ್ಪಾದಕ ಸಂಘಟನೆಯ ಎಲ್ಇಡಿ ತಜ್ಞ ಭಯೋತ್ಪಾದಕ ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹತನಾಗಿದ್ದಾನೆ. 

Published: 17th October 2020 07:14 PM  |   Last Updated: 17th October 2020 07:29 PM   |  A+A-


Foreign LeT IED expert killed in Anantnag

ವಿದೇಶಿ ಎಲ್ಇಡಿ ತಜ್ಞ ಭಯೋತ್ಪಾದಕ ಎನ್ ಕೌಂಟರ್ ನಲ್ಲಿ ಸಾವು

Posted By : Srinivas Rao BV
Source : Online Desk

ಅನಂತ್ ನಾಗ್: ಲಷ್ಕರ್ ಏ ತಯ್ಬಾ ಭಯೋತ್ಪಾದಕ ಸಂಘಟನೆಯ ಎಲ್ಇಡಿ ತಜ್ಞ ಭಯೋತ್ಪಾದಕ ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹತನಾಗಿದ್ದಾನೆ. 

ಭದ್ರತಾ ಪಡೆಗಳು ಉಗ್ರರ ಇರುವಿಕೆ ಬಗ್ಗೆ ಸ್ಪಷ್ಟ ಮಾಹಿತಿ ಪಡೆದು ಲಾರ್ನೂ ಪ್ರದೇಶದಲ್ಲಿ ನಡೆಸಿದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಉಗ್ರನನ್ನು ಹತ್ಯೆ ಮಾಡಲಾಗಿದೆ. 

ಉಗ್ರನಿಗೆ ಸಾಕಷ್ಟು ಬಾರಿ ಶರಣಾಗುವಂತೆ ಸೂಚಿಸಲಾಯಿತು ಆದರೆ ಆತ ಭದ್ರತಾಪಡೆಗಳ ಮೇಲೆ ಏಕಾ ಏಕಿ ಗುಂಡಿನ ದಾಳಿಗೆ ಮುಂದಾದ, ಅನಿವಾರ್ಯವಾಗಿ ಆತನನ್ನು ಎನ್ ಕೌಂಟರ್ ಮಾಡಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದವನನ್ನು ನಾಸಿರ್ ಅಲಿಯಾಸ್ ಶಕೀಲ್ ಸಾಬ್ ಅಲಿಯಾಸ್ ಶಾಕ್ ಭಾಯ್ ಎಂದು ಗುರುತಿಸಲಾಗಿದ್ದು, ಎ-ಕೆಟಗರಿಯ ಭಯೋತ್ಪಾದಕ ಹಾಗೂ ಎಲ್ಇಡಿ ತಜ್ಞ ಎಂದು ತಿಳಿದುಬಂದಿದೆ. ಈ ಉಗ್ರನ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 
 

Stay up to date on all the latest ರಾಷ್ಟ್ರೀಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp