ಕೋಲ್ಕತಾದಲ್ಲಿ ದುರ್ಗಾ ಮಾತೆಯಾದ 'ವಲಸೆ ತಾಯಿ'

ದಕ್ಷಿಣ ಕೊಲ್ಕತಾದ ಪೂಜಾ ಪೆಂಡಾಲ್‌ನಲ್ಲಿ ವಲಸೆ ಬಂದ ತಾಯಿಯೊಬ್ಬರ ವಿಗ್ರಹವನ್ನು ದುರ್ಗಾ ಮಾತೆಯಾಗಿ ಪೂಜಿಸಲಾಗುತ್ತಿದೆ. ಆ ತಾಯಿ ಕೈಯಲ್ಲಿ ಒಂದು ಮಗು ಇದ್ದು, ಇಬ್ಬರು ಮಕ್ಕಳು ಹಿಂಬಾಲಿಸುತ್ತಿದ್ದಾರೆ.
ದುರ್ಗಾ ಮಾತೆ ವಿಗ್ರಹ
ದುರ್ಗಾ ಮಾತೆ ವಿಗ್ರಹ

ಕೋಲ್ಕತಾ: ದಕ್ಷಿಣ ಕೊಲ್ಕತಾದ ಪೂಜಾ ಪೆಂಡಾಲ್‌ನಲ್ಲಿ ವಲಸೆ ಬಂದ ತಾಯಿಯೊಬ್ಬರ ವಿಗ್ರಹವನ್ನು ದುರ್ಗಾ ಮಾತೆಯಾಗಿ ಪೂಜಿಸಲಾಗುತ್ತಿದೆ. ಆ ತಾಯಿ ಕೈಯಲ್ಲಿ ಒಂದು ಮಗು ಇದ್ದು, ಇಬ್ಬರು ಮಕ್ಕಳು ಹಿಂಬಾಲಿಸುತ್ತಿದ್ದಾರೆ.

ಮಸುಕಾದ ಸೀರೆಯಲ್ಲಿರುವ ತಾಯಿ, ತನ್ನ ತೋಳುಗಳಲ್ಲಿ ಬಟ್ಟೆ ಧರಿಸಿದ ಮಗು ಎತ್ತಿಕೊಂಡಿದ್ದು, ಅವಳ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನಡೆದು ಹೋಗುತ್ತಿರುವ ದೃಶ್ಯ, ಲಾಕ್ ಡೌನ್ ವೇಳೆ ಆಹಾರ ಮತ್ತು ನೀರಿಲ್ಲದೆ ಸಾವಿರಾರು ವಲಸಿಗರು ತಮ್ಮ ಮಕ್ಕಳೊಂದಿಗೆ ಹೆದ್ದಾರಿಗಳಲ್ಲಿ ನಡೆದುಕೊಂಡು ಹೋಗುವ ದೃಶ್ಯವನ್ನು ನೆನಪಿಸುತ್ತಿದೆ.

ಬರಿಶಾ ಕ್ಲಬ್‌ನ ಈ ಪರಿಕಲ್ಪನೆ ಇದೀಗ ರಾಜಕೀಯ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಏಕೆಂದರೆ ಪ್ರಧಾನಿ ಮೋದಿ ದೇಶಾದ್ಯಂತ ಲಾಕ್‌ಡೌನ್ ಜಾರಿಗೆ ತರುವ ಮುನ್ನ ಅದನ್ನು ತೀವ್ರವಾಗಿ ವಿರೋಧಿಸಿದವರಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಹ ಒಬ್ಬರು.

"ದುರ್ಗಾ ಪೂಜೆ ಒಂದು ಧಾರ್ಮಿಕ ಕಾರ್ಯಕ್ರಮಕ್ಕಿಂತ ಮಹತ್ವದ್ದಾಗಿದೆ. ಇದು ಮಗಳ ವಾರ್ಷಿಕ ಮರಳುವಿಕೆಯನ್ನು ಸೂಚಿಸುತ್ತದೆ ಮತ್ತು ಇದು ಸ್ತ್ರೀ ಮತ್ತು ಮಾತೃತ್ವದ ಆಚರಣೆಯಾಗಿದೆ. ಇಲ್ಲಿ, ದೇವಿಯು ಸುಡುವ ಬಿಸಿಲು, ಹಸಿವು ಮತ್ತು ಬಡತನವನ್ನು ಧೈರ್ಯವಾಗಿ ಎದುರಿಸುವ ತಾಯಿಯಾಗಿದ್ದಾಳೆ. ಅವಳು ತನ್ನ ಮಕ್ಕಳಿಗಾಗಿ ಆಹಾರ, ನೀರು ಹಾಗೂ ಆಶ್ರಯಕ್ಕಾಗಿ ಅಲೆಯುತ್ತಿದ್ದಾಳೆ.

"ಲಾಕ್ ಡೌನ್ ಸಮಯದಲ್ಲಿ, ಟಿವಿ ಮತ್ತು ಪತ್ರಿಕೆಗಳಲ್ಲಿ ಪ್ರಕಟವಾದ ವಲಸೆ ಬಂದವರ ಅವಸ್ಥೆ ನನ್ನ ಮನಸಿಗೆ ತಟ್ಟಿತು. ಅವರು ಕಾಲ್ನಡಿಗೆಯಲ್ಲಿ ಮನೆಗೆ ಹಿಂದಿರುಗುತ್ತಿದ್ದರು, ಅವರಲ್ಲಿ ಕೆಲವರು ರಸ್ತೆ ಮತ್ತು ರೈಲ್ವೆ ಹಳಿಗಳಲ್ಲೇ ಮೃತಪಟ್ಟರು. ಈ ವರ್ಷ ತನ್ನ ಮಕ್ಕಳನ್ನು ಹೊತ್ತುಕೊಂಡು ಹೋಗುತ್ತಿರುವ ಬಡ ತಾಯಿಯನ್ನು ನಮ್ಮ ದೇವತೆಯಾಗಿ ಪೂಜಿಸಬೇಕು ಎಂದು ಈ ವಿಗ್ರಹ ಮಾಡಲಾಗಿದೆ" ಎಂದು ಸತತ ಮೂರನೇ ವರ್ಷ ಕ್ಲಬ್‌ನೊಂದಿಗೆ ಕೆಲಸ ಮಾಡುತ್ತಿರುವ ದಾಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com