ನೀಟ್‌ ಫಲಿತಾಂಶ ಪ್ರಕಟ: ಒಡಿಶಾದ ಶೋಯಬ್‌ ಅಫ್ತಾಬ್‌ ಪ್ರಥಮ

ವೈದ್ಯಕೀಯ ಪ್ರವೇಶಕ್ಕಾಗಿ ನಡೆಸಲಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್‌) ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ.
ನೀಟ್ ಫಲಿತಾಂಶ
ನೀಟ್ ಫಲಿತಾಂಶ

ನವದೆಹಲಿ: ವೈದ್ಯಕೀಯ ಪ್ರವೇಶಕ್ಕಾಗಿ ನಡೆಸಲಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್‌) ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ.

7.7 ಲಕ್ಷ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಶೇ.99.99 ಅಂಕ ಗಳಿಸಿರುವ ಒಡಿಶಾದ ಶೋಯಬ್‌ ಅಫ್ತಾಬ್‌ ಅವರು ಈ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ. ತ್ರಿಪುರದಿಂದ ಅತ್ಯಧಿಕ ಅಭ್ಯರ್ಥಿಗಳು ಪಾಸಾಗಿದ್ದು, ನಂತರದ ಸ್ಥಾನದಲ್ಲಿ  ಮಹಾರಾಷ್ಟ್ರದ ಅಭ್ಯರ್ಥಿಗಳು ಇದ್ದಾರೆ.

ರಾಜ್ಯದಲ್ಲಿ ಶೇ.61.56ರಷ್ಟು ಫಲಿತಾಂಶ
ಇನ್ನು ಕರ್ನಾಟಕ ರಾಜ್ಯದ 55 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದು, ರಾಜ್ಯದಲ್ಲಿ 1,18,978 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ರಾಜ್ಯದಲ್ಲಿ ಒಟ್ಟು ಶೇ.61.56ರಷ್ಟು ಫಲಿತಾಂಶ ದಾಖಲಾಗಿದೆ. ಒಟ್ಟು 55,009 ಮಂದಿ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದಾರೆ. ದೇಶಾದ್ಯಂತ ಒಟ್ಟು 15.97 ಲಕ್ಷ  ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 7.71 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪ್ರಮಾಣ ಶೇ.56.55ರಷ್ಟಿದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಫಲಿತಾಂಶಕ್ಕಾಗಿ ಹೀಗೆ ಮಾಡಿ
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET) ನೀಟ್-2020 ಫಲಿತಾಂಶವನ್ನು nta.ac.in ಮತ್ತು ntaneet.nic.in ತನ್ನ ಅಧಿಕೃತ ವೆಬ್’ಸೈಟ್ ಗಳಲ್ಲಿ ಶುಕ್ರವಾರ ಪ್ರಕಟಿಸಿದೆ. ಅಭ್ಯರ್ಥಿಗಳು ಅಧಿಕೃತ ವೆಬ್’ಸೈಟ್‌ ntaneet.nic.in ಮೂಲಕ ಪರೀಕ್ಷೆ ಫಲಿತಾಂಶವನ್ನ  ಪರಿಶೀಲಿಸಬಹುದಾಗಿದ್ದು, ಫಲಿತಾಂಶ ನೋಡಲು ಈ ಕೆಳಗಿನ ಕ್ರಮಗಳನ್ನ ಅನುಸರಿಸಿ..!

ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ – ntaneet.nic.in
ಮುಖಪುಟದಲ್ಲಿ, ‘ನೀಟ್ (ಯುಜಿ) – 2020 ಫಲಿತಾಂಶ’ ಎಂದು ಹೇಳುವ ಲಿಂಕ್ ಮೇಲೆ
ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ಅಗತ್ಯ ವಿವರಗಳನ್ನು ನಮೂದಿಸಿ ಮತ್ತು ಸಬ್ ಮಿಟ್ ಮೇಲೆ
ನಿಮ್ಮ NEET 2020 ಫಲಿತಾಂಶಗಳು ಈಗ ನಿಮ್ಮ ಸ್ಕ್ರೀನ್ ನಲ್ಲಿ ಪ್ರದರ್ಶಿಸಲ್ಪಡುತ್ತದೆ.
ನಿಮ್ಮ NEET 2020 ಫಲಿತಾಂಶವನ್ನು ಡೌನ್ ಲೋಡ್ ಮಾಡಿ. ಭವಿಷ್ಯದ ಅಗತ್ಯಕ್ಕಾಗಿ ತಪ್ಪದೇ ಪ್ರಿಂಟ್ ಔಟ್ ತೆಗೆದುಕೊಳ್ಳಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com