ಕೋವಿಡ್-19 ಮಧ್ಯೆ ದೇಶಾದ್ಯಂತ ನವರಾತ್ರಿ ಸಂಭ್ರಮ-ಸಡಗರ ಆರಂಭ: ತಿರುಪತಿಯಲ್ಲಿ ನವರಾತ್ರಿ ಬ್ರಹ್ಮರಥೋತ್ಸವ

ಕೋವಿಡ್-19 ನಿರ್ಬಂಧಗಳ ನಡುವೆ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ನವರಾತ್ರಿ ಬ್ರಹ್ಮೋತ್ಸವ ಏಕಾಂತದಲ್ಲಿ ಆರಂಭವಾಗಿದ್ದು, ಈ ಬಾರಿ ಹೆಚ್ಚಿನ ಜನಜಂಗುಳಿಯಿಲ್ಲದೆ, ಭಕ್ತರಿಲ್ಲದೆ ನೆರವೇರಿತು.
ತಿರುಮಲದ ಶ್ರೀದೇವಿ ದೇವಸ್ಥಾನದ ಎದುರು ಅಲಂಕೃತ ಆನೆ ನಿಂತಿರುವುದು
ತಿರುಮಲದ ಶ್ರೀದೇವಿ ದೇವಸ್ಥಾನದ ಎದುರು ಅಲಂಕೃತ ಆನೆ ನಿಂತಿರುವುದು

ತಿರುಮಲ: ಕೋವಿಡ್-19 ನಿರ್ಬಂಧಗಳ ನಡುವೆ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ನವರಾತ್ರಿ ಬ್ರಹ್ಮೋತ್ಸವ ಏಕಾಂತದಲ್ಲಿ ಆರಂಭವಾಗಿದ್ದು, ಈ ಬಾರಿ ಹೆಚ್ಚಿನ ಜನಜಂಗುಳಿಯಿಲ್ಲದೆ, ಭಕ್ತರಿಲ್ಲದೆ ನೆರವೇರಿತು.

ಕೋವಿಡ್-19 ಶಿಷ್ಟಾಚಾರದ ನಡುವೆ ವೆಂಕಟೇಶ್ವರ ದೇವಾಲಯದ ಮುಖ್ಯ ಸಭಾಂಗಣದ ಒಳಾಂಗಣದಲ್ಲಿ ಈ ಬಾರಿ ಆಚರಣೆಗಳನ್ನು ನಡೆಸಲು ಟಿಟಿಡಿ ನಿರ್ಧರಿಸಿದೆ. ಮಲಯಪ್ಪ ಸ್ವಾಮಿ ಮತ್ತು ಶ್ರೀದೇವಿ, ಭೂದೇವಿಯರ ಮೆರವಣಿಗೆಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ವಿಮಾನ ಪ್ರಕರಮ್ ಸುತ್ತ ಗರ್ಭಗುಡಿಗೆ ಸುತ್ತಾಗಿ ಪರಿವಾರ ದೇವತೆಯ ಜೊತೆಗೆ ಹೊತ್ತೊಯ್ಯಲಾಯಿತು.

ನಂತರ ರಾತ್ರಿ, ಗೋವಿಂದರಾಜ ಸ್ವಾಮಿಯಾಗಿ ಮಲಯಪ್ಪ ಸ್ವಾಮಿಗೆ ವೇಷಭೂಷಣ ತೊಡಿಸಿ ಶ್ರೀದೇವಿ, ಭೂದೇವಿಯರನ್ನು ಸಂಜೆ 7 ಗಂಟೆಗೆ ದೇವಾಲಯದ ಒಳಗೆ ರಂಗನಾಯಕುಲ ಮಂಟಪದಿಂದ ಕಲ್ಯಾಣ ಮಂಟಪಕ್ಕೆ ‘ಪೆಡ್ಡಾ ಶೇಷ ವಾಹನ ಮೂಲಕ ಕರೆದೊಯ್ಯಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com