ಸ್ನಾತಕೋತ್ತರ ಸೂಪರ್ ಸ್ಪೆಷಾಲಿಟಿ ಕೋರ್ಸ್: ತಮಿಳುನಾಡಿನ ಸರ್ಕಾರಿ ವೈದ್ಯರಿಗೆ ಶೇ.50 ರಷ್ಟು ಮೀಸಲಾತಿಗೆ ಕೇಂದ್ರ ವಿರೋಧ
ಸ್ನಾತಕೋತ್ತರ ಸೂಪರ್ ಸ್ಪೆಷಾಲಿಟಿ ಕೋರ್ಸ್ ಗಳಿಗೆ ದಾಖಲಾಗುವುದಕ್ಕೆ ತಮಿಳುನಾಡಿನ ಸರ್ಕಾರಿ ವೈದ್ಯರಿಗೆ ಶೇ.50 ರಷ್ಟು ಮೀಸಲಾತಿ ನೀಡುವುದನ್ನು ಕೇಂದ್ರ ಸರ್ಕಾರ ವಿರೋಧಿಸಿದೆ.
Published: 18th October 2020 03:13 AM | Last Updated: 18th October 2020 03:13 AM | A+A A-

ಸ್ನಾತಕೋತ್ತರ ಸೂಪರ್ ಸ್ಪೆಷಾಲಿಟಿ ಕೋರ್ಸ್: ತಮಿಳುನಾಡಿನ ಸರ್ಕಾರಿ ವೈದ್ಯರಿಗೆ ಶೇ.50 ರಷ್ಟು ಮೀಸಲಾತಿಗೆ ಕೇಂದ್ರ ವಿರೋಧ
ಚೆನ್ನೈ: ಸ್ನಾತಕೋತ್ತರ ಸೂಪರ್ ಸ್ಪೆಷಾಲಿಟಿ ಕೋರ್ಸ್ ಗಳಿಗೆ ದಾಖಲಾಗುವುದಕ್ಕೆ ತಮಿಳುನಾಡಿನ ಸರ್ಕಾರಿ ವೈದ್ಯರಿಗೆ ಶೇ.50 ರಷ್ಟು ಮೀಸಲಾತಿ ನೀಡುವುದನ್ನು ಕೇಂದ್ರ ಸರ್ಕಾರ ವಿರೋಧಿಸಿದೆ.
ಈ ಸಂಬಂಧ ಮದ್ರಾಸ್ ಹೈಕೋರ್ಟ್ ಗೆ ತಿಳಿಸಿರುವ ಕೇಂದ್ರ ಸರ್ಕಾರ ತಾನು ಶೇ.50 ರಷ್ಟು ಮೀಸಲಾತಿ ಪರವಾಗಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರದ ಪರವಾಗಿ ಕೋರ್ಟ್ ಗೆ ಹಾಜರಾದ ಸುಬ್ಬು ರಂಗ ಭಾರತಿ ನ್ಯಾ. ಆನಂದ್ ವೆಂಕಟೇಶ್ ನೇತೃತ್ವದ ಪೀಠಕ್ಕೆ ಕೇಂದ್ರ ಸರ್ಕಾರದ ನಿಲುವನ್ನು ತಿಳಿಸಿದ್ದು, ತಮಗೆ ಕೇಂದ್ರದಿಂದ ನಿರ್ದೇಶನ ಬಂದಿದ್ದು, ವಿವರ ವರದಿಯನ್ನು ಸಲ್ಲಿಸುವುದಕ್ಕೆ ಸಮಯಾವಕಾಶ ನೀಡಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ.
2020-21 ರ ಶೈಕ್ಷಣಿಕ ವರ್ಷದಲ್ಲಿ ಸ್ಪೆಷಾಲಿಟಿ ವೈದ್ಯಕೀಯ ಕೋರ್ಸ್ ಗಳಲ್ಲಿ ಶೇ.50 ರಷ್ಟು ಮೀಸಲಾತಿ ನೀಡಲು ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿ ಸಲ್ಲಿಸಿತ್ತು.
"ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಕ್ಕೆ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಸೀಟುಗಳನ್ನು ಮೀಸಲಿಡುವುದಕ್ಕೆ ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ" ಎಂದು ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ಆದೇಶದಲ್ಲಿ ಹೇಳಿತ್ತು.