ವಿಭಜನೆಯ ವಿರುದ್ಧ ಏಕತೆಯ ಆಯ್ಕೆ: ಬಿಡನ್ ಹೇಳಿಕೆ ಉಲ್ಲೇಖಿಸಿ ಬಿಹಾರ ಮತದಾರರಿಗೆ ಪ್ರತಿಜ್ಞೆ ತೆಗೆದುಕೊಳ್ಳುವಂತೆ ಚಿದಂಬರಂ ಕರೆ

ಯುಎಸ್ ಚುನಾವಣೆಯಲ್ಲಿ ಡೆಮೋಕ್ರಾಟಿಕ್ ಅಭ್ಯರ್ಥಿ ಜೋ ಬಿಡೆನ್ ಅವರ ಹೇಳಿಕೆ ಉಲ್ಲೇಖಿಸಿ "ಭೀತಿಯ ವಿರುದ್ಧ ಭರವಸೆ, ವಿಭಜನೆಯ ವಿರುದ್ಧ ಏಕತೆ್ಯ ಆಯ್ಕೆ" ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಭಾರತದಲ್ಲಿಯೂ ಬಿಹಾರ, ಮಧ್ಯಪ್ರದೇಶ ಮತ್ತು ಇತರೆಡೆಗಳಲ್ಲಿ ಮತ ಚಲಾಯಿಸುವ ಜನತೆ ಇದೇ ರೀತಿಯ ಪ್ರತಿಜ್ಞೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

Published: 18th October 2020 11:54 AM  |   Last Updated: 18th October 2020 03:31 PM   |  A+A-


ಪಿ ಚಿದಂಬರಂ

Posted By : Raghavendra Adiga
Source : PTI

ನವದೆಹಲಿ: ಯುಎಸ್ ಚುನಾವಣೆಯಲ್ಲಿ ಡೆಮೋಕ್ರಾಟಿಕ್ ಅಭ್ಯರ್ಥಿ ಜೋ ಬಿಡೆನ್ ಅವರ ಹೇಳಿಕೆ ಉಲ್ಲೇಖಿಸಿ "ಭೀತಿಯ ವಿರುದ್ಧ ಭರವಸೆ, ವಿಭಜನೆಯ ವಿರುದ್ಧ ಏಕತೆ್ಯ ಆಯ್ಕೆ" ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಭಾರತದಲ್ಲಿಯೂ ಬಿಹಾರ, ಮಧ್ಯಪ್ರದೇಶ ಮತ್ತು ಇತರೆಡೆಗಳಲ್ಲಿ ಮತ ಚಲಾಯಿಸುವ ಜನತೆ ಇದೇ ರೀತಿಯ ಪ್ರತಿಜ್ಞೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಅಕ್ಟೋಬರ್ 28 ರಿಂದ ಮೂರು ಹಂತಗಳಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಲ್ಲದೆ ಒಂದು ಲೋಕಸಭೆ ಉಪಚುನಾವಣೆ ಮತ್ತು 12 ರಾಜ್ಯಗಳಲ್ಲಿ56 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ.

"ಯುಎಸ್ ಚುನಾವಣೆಗಳಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಜೋ ಬಿಡೆನ್ ನಿನ್ನೆ" ನಾವು ಭೀತಿಯ ವಿರುದ್ಧ ಭರವಸೆ, ವಿಭಜನೆಯ ವಿರುದ್ಧ ಏಕತೆಯ, ಕಲ್ಪನೆಯ ವಿರುದ್ಧ ವಿಜ್ಞಾನ, ಸುಳ್ಳಿನ ವಿರುದ್ಧ ಸತ್ಯದ ಆಯ್ಕೆ ಮಾಡಬೇಕು" ಎಂದಿದ್ದಾರೆ.ಅದರಂತೆ ನಮ್ಮಲ್ಲಿಯೂ ಬಿಹಾರ, ಮಧ್ಯಪ್ರದೇಶ ಹಾಗೂ ಇತರೆಡೆಗಳಲ್ಲಿ ಈ ತಿಂಗಳು ನಡೆಯುವ ಚುನಾವಣೆ ವೇಳೆ ಮತದಾರರು  ತೆಗೆದುಕೊಳ್ಳಬೇಕಾದ ಒಳ್ಳೆಯ ಪ್ರತಿಜ್ಞೆ ಇದಾಗಿದೆ" ಚಿದಂಬರಂ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿಯಾಗಿ ಜಸಿಂದಾ ಅರ್ಡೆರ್ನ್ ಅವರ ಗೆಲುವು ಸಭ್ಯತೆ ಮತ್ತು ಪ್ರಗತಿಪರ ಮೌಲ್ಯಗಳು ಪ್ರಜಾಪ್ರಭುತ್ವದಲ್ಲಿ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಭರವಸೆಯನ್ನು ನಮಗೆ ನೀಡುತ್ತದೆ. ಎಂದು ಕೇಂದ್ರದ ಮಾಜಿ ಸಚಿವರು ಹೇಳಿದರು. ನ್ಯೂಜಿಲ್ಯಾಂಡ್ ಮಹಾ ಚುನಾವಣೆಯಲ್ಲಿ  ಭರ್ಜರಿ ಜಯ ಸಾಧಿಸಿ ಅರ್ಡೆರ್ನ್ ಎರಡನೇ ಬಾರಿಗೆ ಪ್ರಧಾನಿ ಪಟ್ಟವೇರುತ್ತಿದ್ದಾರೆ.
 

Stay up to date on all the latest ರಾಷ್ಟ್ರೀಯ news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp