2021 ರ ಫೆಬ್ರವರಿ ವೇಳೆಗೆ ಕೋವಿಡ್-19 ಸಕ್ರಿಯ ಪ್ರಕರಣಗಳು 40,000 ಕ್ಕಿಂತ ಕಡಿಮೆಯಾಗಲಿವೆ-ತಜ್ಞರ ಸಮಿತಿ

ಸೆಪ್ಟೆಂಬರ್ 17 ರಿಂದ ದೇಶದಲ್ಲಿ ಉತ್ತುಂಗಕ್ಕೇರಿರುವ ಕೋವಿಡ್-19 ಸಾಂಕ್ರಾಮಿಕ ರೋಗ ಒಂದು ವೇಳೆ ಸೂಕ್ತ ರೀತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಮುಂದುವರೆಸಿದರೆ ಮುಂದಿನ ವರ್ಷದ ಫೆಬ್ರವರಿಯೊಳಗೆ ಸಕ್ರಿಯ ಪ್ರಕರಣಗಳು 40 ಸಾವಿರಕ್ಕಿಂತ ಕಡಿಮೆಯಾಗಲಿವೆ ಎಂದು ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಭಾನುವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸೆಪ್ಟೆಂಬರ್ 17 ರಿಂದ ದೇಶದಲ್ಲಿ ಉತ್ತುಂಗಕ್ಕೇರಿರುವ ಕೋವಿಡ್-19 ಸಾಂಕ್ರಾಮಿಕ ರೋಗ ಒಂದು ವೇಳೆ ಸೂಕ್ತ ರೀತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಮುಂದುವರೆಸಿದರೆ ಮುಂದಿನ ವರ್ಷದ ಫೆಬ್ರವರಿಯೊಳಗೆ ಸಕ್ರಿಯ ಪ್ರಕರಣಗಳು 40 ಸಾವಿರಕ್ಕಿಂತ ಕಡಿಮೆಯಾಗಲಿವೆ ಎಂದು ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಭಾನುವಾರ ಹೇಳಿದೆ.

ಕೋವಿಡ್-19 ಪ್ರಗತಿಗೆ ರಾಷ್ಟ್ರೀಯ ಸೂಪರ್ ಮಾಡೆಲ್ ನ್ನು ವಿಕಸಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ಸಮಿತಿಯನ್ನು ಜೂನ್ , 2020 ರಂದು ರಚಿಸಿತು.

ಪ್ರೊಫೆಸರ್ ಎಂ. ವಿದ್ಯಾಸಾಗರ್, ಎಫ್ ಆರ್ ಎಸ್ ( ಐಐಟಿ ಹೈದ್ರಾಬಾದ್ ಮುಖ್ಯಸ್ಥ) ಪ್ರೊಫೆಸರ್ ಎಂ ಅಗರ್ ವಾಲ್ ( ಐಐಟಿ ಕಾನ್ಫುರ ಮುಖ್ಯಸ್ಥ) ಪ್ರೊಫೆಸರ್ ಬಿ ಬಾಗ್ಚಿ (ಐಐಎಸ್ ಸಿ ಬೆಂಗಳೂರು) ಪ್ರೊಫೆಸರ್ ಎ ಬೊಸ್ ( ಎಸ್ ಐಸ್ ಐ ಕೊಲ್ಕತ್ತಾ) ಡಾ. ಜಿ. ಕಂಗ್ , ಎಫ್ ಆರ್ ಎಸ್ ( ಸಿಎಂಸಿ ವೆಲ್ಲರೂ) ಲೆಫ್ಟಿನೆಂಟ್ ಜನರಲ್ ಎಂ ಕಾನಿಟ್ಕರ್ ಮತ್ತು ಪ್ರೊಫೆಸರ್ ಎಸ್ ಕೆ ಪಾಲ್ ( ಐಎಸ್ ಐ ಕೊಲ್ಕತ್ತಾ) ಅವರು ಈ ಸಮಿತಿಯ ಸದಸ್ಯರಾಗಿದ್ದಾರೆ.

ಮುಂಬರುವ ಹಬ್ಬದ ಸಂದರ್ಭದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಬಹುದು ಮತ್ತು ಮುನ್ನೆಚ್ಚರಿಕಾ ಕ್ರಮಗಳಲ್ಲಿ ಉದಾಸೀನತೆಯಿಂದಾಗಿ ತಿಂಗಳೊಳಗೆ 26 ಲಕ್ಷ ಸೋಂಕುಗಳಿಗೆ ಕಾರಣವಾಗಬಹುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.

ಓಣಂ ಹಬ್ಬದ ಸಂದರ್ಭದಲ್ಲಿ ಕೇರಳದಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗಿರುವುದನ್ನು ಉದಾಹರಣೆಯಾಗಿ ನೀಡಿರುವ ಸಮಿತಿ,ಲಾಕ್ ಡೌನ್ ಆರಂಭದ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಜೀವಗಳು ಉಳಿದಿವೆ.ನಿರ್ಲಕ್ಷ್ಯ ಹೆಚ್ಚಿನ ತೊಂದರೆಗೆ ಕಾರಣವಾಗಿದೆ ಎಂದು ತಿಳಿಸಿದೆ.

ಮೇ- ಜೂನ್ ತಿಂಗಳಲ್ಲಿ ಕಾರ್ಮಿಕರ ವಲಸೆ ಕೋವಿಡ್- ಪ್ರಕರಣಗಳ ಹೆಚ್ಚಾಗುವಿಕೆಗೆ ಕಾರಣವಾಗಿಲ್ಲ, ಲಾಕ್ಡೌನ್ ಮೊದಲು ವಲಸೆಗೆ  ಅನುಮತಿಸಿದ್ದರೆ ಗಮನಾರ್ಹ ಪ್ರತಿಕೂಲ ಪರಿಣಾಮ ಉಂಟಾಗುತಿತ್ತು ಎಂದು ಸಮಿತಿ ಹೇಳಿದೆ.

ಸರಿಯಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ, ಮುಂದಿನ ವರ್ಷದ ಫೆಬ್ರವರಿ ಅಂತ್ಯದ ವೇಳೆಗೆ  40,000 ಕ್ಕಿಂತಲೂ ಕಡಿಮೆ  ಸಕ್ರಿಯ ಪ್ರಕರಣಗಳೊಂದಿಗೆ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಬಹುದು ಎಂದು ತಜ್ಞರ ಸಮಿತಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com