ಸಿಎಂ ನಿತೀಶ್ ರನ್ನು ತೃಪ್ತಿಪಡಿಸಲು ಪ್ರಧಾನಿ ನನ್ನ ವಿರುದ್ಧ ಮಾತನಾಡಲು ಮುಕ್ತವಾಗಿದ್ದಾರೆ: ಚಿರಾಗ್ ಪಾಸ್ವಾನ್

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತೃಪ್ತಿಪಡಿಸಲು ಪ್ರಧಾನಿ ನರೇಂದ್ರ ಮೋದಿ ತಮ್ಮ ವಿರುದ್ಧ ಏನು ಬೇಕಾದರೂ ಹೇಳಬಹುದು ಎಂದು ಲೋಕ ಜನಶಕ್ತಿ ಪಾರ್ಟಿ(ಎಲ್ ಜೆಪಿ)ಯ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಎಲ್ ಜೆಪಿ ನಾಯಕ ಚಿರಾಗ್ ಪಾಸ್ವಾನ್ ಮತ್ತು ಸಿಎಂ ನಿತೀಶ್ ಕುಮಾರ್(ಸಂಗ್ರಹ ಚಿತ್ರ)
ಎಲ್ ಜೆಪಿ ನಾಯಕ ಚಿರಾಗ್ ಪಾಸ್ವಾನ್ ಮತ್ತು ಸಿಎಂ ನಿತೀಶ್ ಕುಮಾರ್(ಸಂಗ್ರಹ ಚಿತ್ರ)

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತೃಪ್ತಿಪಡಿಸಲು ಪ್ರಧಾನಿ ನರೇಂದ್ರ ಮೋದಿ ತಮ್ಮ ವಿರುದ್ಧ ಏನು ಬೇಕಾದರೂ ಹೇಳಬಹುದು ಎಂದು ಲೋಕ ಜನಶಕ್ತಿ ಪಾರ್ಟಿ(ಎಲ್ ಜೆಪಿ)ಯ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ನನ್ನ ವಿರುದ್ಧ ಸುಖಾಸುಮ್ಮನೆ ಆರೋಪ ಕೇಳಲು ಜೊತೆಗೆ ಅನುಕಂಪ ಗಿಟ್ಟಿಸಿಕೊಳ್ಳಲು ನಾನು ಸಿದ್ದನಿಲ್ಲ, ಪ್ರಧಾನಿ ನರೇಂದ್ರ ಮೋದಿ ಈಗ ಧರ್ಮಸಂಕಟದಲ್ಲಿ ಸಿಲುಕಿದ್ದಾರೆ. ಮೈತ್ರಿಯಲ್ಲಿ ಅವರು ಮುಂದುವರಿದು ಅವರ ಕರ್ತವ್ಯವನ್ನು ನಿರ್ವಹಿಸಲಿ. ನಿತೀಶ್ ಕುಮಾರ್ ಅವರನ್ನು ತೃಪ್ತಿಪಡಿಸಲು ಪ್ರಧಾನಿ ನನ್ನ ವಿರುದ್ಧ ಏನು ಬೇಕಾದರೂ ಹೇಳಬಹುದು ಎಂದು ಚಿರಾಗ್ ಪಾಸ್ವಾನ್ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಆರೋಪ ಮಾಡಿದ ಪಾಸ್ವಾನ್, "ಸಿಎಂ ನಿತೀಶ್ ಕುಮಾರ್ ಅವರು ರಾಜ್ಯದ ಜನತೆಗೆ ಪೂರಕವಾದ ನೀತಿಗಳನ್ನು ಕಲ್ಪಿಸುವುದನ್ನು ಬಿಟ್ಟಿದ್ದಾರೆ. ಅವರು ಯುವಜನರ ವಿರೋಧಿಯಾಗಿದ್ದು, ಯುವಜನರು ಅನನುಭವಿಗಳು ಎಂದು ಹೇಳುತ್ತಾರೆ, ಆದರೆ ನಿತೀಶ್ ಕುಮಾರ್ ಅವರು ಜೆಪಿ ಚಳವಳಿಯನ್ನು ಆರಂಭಿಸಿದ್ದು ಯುವಕರಾಗಿದ್ದಾಗಲೇ, ನಮಗೆ ಅದು ಗೊತ್ತಿದೆ, ಬಿಹಾರಕ್ಕೆ ಏನು ಮಾಡಬೇಕೆಂದು ನಮಗೆ ಗೊತ್ತಿದೆ, ರಾಜ್ಯ ಈಗಾಗಲೇ ಅವರಿಗೆ 15 ವರ್ಷ ಆಳ್ವಿಕೆ ಮಾಡಲು ಬಿಟ್ಟಿದೆ ಎಂದರು.

ನಾನ್ಯಾಕೆ ಮೋದಿಯವರಿಗೆ ಗೌರವ ನೀಡುವುದಿಲ್ಲ, ನನ್ನ ತಂದೆ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿದ್ದಾಗ ಅವರು ಕರೆದು ನನಗೆ ಧೈರ್ಯ ತುಂಬಿದ್ದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಎಲ್ ಜೆಪಿ ಸ್ಪರ್ಧಿಸುವುದಿಲ್ಲ, ನಮ್ಮದೇನಿದ್ದರೂ ಜೆಡಿಯು ವಿರುದ್ಧದ ಹೋರಾಟವಷ್ಟೇ ಎಂದರು.

243 ಕ್ಷೇತ್ರಗಳನ್ನು ಹೊಂದಿರುವ ಬಿಹಾರ ವಿಧಾನಸಭೆಗೆ ಇದೇ ತಿಂಗಳ 28, ನವೆಂಬರ್ 3 ಮತ್ತು ನವೆಂಬರ್ 7ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com