ನೀಟ್ ಪರೀಕ್ಷೆಯಲ್ಲಿ ಒಡಿಶಾದ ಸೋಯೆಬ್ ಸಾಧನೆ: ಈ ಹುಡುಗನ ಯಶಸ್ಸಿಗೆ ತಂದೆ ತಾಯಿಯ ಶ್ರಮವೇ ಕಾರಣ!

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) 2020ರಲ್ಲಿ 720ಕ್ಕೆ 720 ಅಂಕಗಳನ್ನು ಗಳಿಸಿ ಒಡಿಶಾದ ರೂರ್ಕೆಲಾ ವಿದ್ಯಾರ್ಥಿ ಸೋಯೆಬ್ ಅಫ್ತಬ್ ಇಡೀ ದೇಶವನ್ನು ನಿಬ್ಬೆರಗಾಗಿಸಿದ್ದಾರೆ.

Published: 18th October 2020 02:38 PM  |   Last Updated: 18th October 2020 02:38 PM   |  A+A-


Sheikh Mohammed Abbas and his wife Rizia with their children.

ಶೇಖ್ ಮೊಹಮ್ಮದ್ ಅಬ್ಬಾಸ್ ಮತ್ತು ರಿಜಿಯಾ ತಮ್ಮ ಮಕ್ಕಳೊಂದಿಗೆ

Posted By : Sumana Upadhyaya
Source : The New Indian Express

ರೂರ್ಕೆಲಾ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) 2020ರಲ್ಲಿ 720ಕ್ಕೆ 720 ಅಂಕಗಳನ್ನು ಗಳಿಸಿ ಒಡಿಶಾದ ರೂರ್ಕೆಲಾ ವಿದ್ಯಾರ್ಥಿ ಸೋಯೆಬ್ ಅಫ್ತಬ್ ಇಡೀ ದೇಶವನ್ನು ನಿಬ್ಬೆರಗಾಗಿಸಿದ್ದಾರೆ.

ಇವರ ಈ ಸಾಧನೆ ಹಿಂದೆ ದೀರ್ಘ ಸಮಯದ ಹೋರಾಟ, ಪೋಷಕರಾದ ಶೇಖ್ ಮೊಹಮ್ಮದ್ ಅಬ್ಬಾಸ್ ಮತ್ತು ಸುಲ್ತಾನ ರಿಜಿಯಾ ಅವರ ಸಾಕಷ್ಟು ಶ್ರಮವಿದೆ. ತಮ್ಮ ಸಂಕಷ್ಟದ ನಡುವೆ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಅಬ್ಬಾಸ್ ಮತ್ತು ರಿಜಿಯಾ ದಂಪತಿ ಎಲ್ಲಾ ತ್ಯಾಗಗಳನ್ನು ಮಾಡಿದ್ದಾರೆ. ಸೊಯೆಬ್ ಮತ್ತು ಆತನ 10 ವರ್ಷದ ಸೋದರಿ ಅಲಿಶಾ 5ನೇ ತರಗತಿಯಲ್ಲಿ ಓದುತ್ತಿದ್ದು ಆಕೆ ಕೂಡ ಕಲಿಕೆಯಲ್ಲಿ ಮುಂದಿದ್ದಾಳೆ.

ಮೊಹಮ್ಮದ್ ಅಬ್ಬಾಸ್ ಪದವೀಧರ, ತಮ್ಮ ಮಕ್ಕಳು ಕೂಡ ಚೆನ್ನಾಗಿ ಓದಬೇಕು, ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕೆಂದು 20 ವರ್ಷಗಳ ಹಿಂದೆ ಮಗ ಸೋಯೆಬ್ ನ ಗರ್ಭವತಿಯಾಗಿದ್ದಾಗ ರಿಜಿಯಾಗೆ ಪದವಿ ಓದಿಸಿದ್ದರು.

ಮದುವೆಯಾದ ನಂತರ ಹೆಣ್ಣುಮಕ್ಕಳು ಏಕೆ ಓದಬೇಕೆಂದು ರಿಜಿಯಾ ಓದುವುದಕ್ಕೆ ನಮ್ಮ ಸಂಪ್ರದಾಯಸ್ಥ ಕುಟುಂಬ ಒಪ್ಪಿರಲಿಲ್ಲ, ಆಗ ನಮ್ಮ ಕುಟುಂಬದಿಂದ ಹೊರಬಂದು ಎಂಟೂವರೆ ವರ್ಷ ಬೇರೆ ವಾಸವಾಗಿದ್ದೆವು. ಈ ಮಧ್ಯೆ ರಿಜಿಯಾ ಸೋಯೆಬ್ ಗೆ ಜನ್ಮ ನೀಡಿದಳು. ಬುರ್ದ್ವಾನ್ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿದಳು. ಇದಕ್ಕಾಗಿ ಆಗಾಗ ರೂರ್ಕೆಲಾದಿಂದ ಪಶ್ಚಿಮ ಬಂಗಾಳಕ್ಕೆ ಪ್ರಯಾಣ ಮಾಡುತ್ತಿದ್ದಳು ಎನ್ನುತ್ತಾರೆ ಅಬ್ಬಾಸ್.

ವೃತ್ತಿಯಲ್ಲಿ ಅಬ್ಬಾಸ್ ಉದ್ಯಮಿ. ಹಲವು ಏಳು ಬೀಳುಗಳನ್ನು ಕಂಡಿದ್ದಾರೆ, ಆದರೆ ಮಕ್ಕಳ ಭವಿಷ್ಯಕ್ಕೆ ಎಂದೂ ಇವರ ಕಷ್ಟ ಅಡ್ಡಿಯಾಗಲಿಲ್ಲ.ಇತ್ತೀಚೆಗೆ ಅವರು ಚಹಾ ಎಲೆ ಮಾರಾಟದಿಂದ ನಿರ್ಮಾಣ ಕೆಲಸಕ್ಕೆ ಕಾಲಿಟ್ಟಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಆದಾಯ ಕುಸಿದುಹೋಗಿತ್ತಂತೆ. ಆಗ ಆರ್ಥಿಕವಾಗಿ ಕೋಲ್ಕತ್ತಾದಲ್ಲಿರುವ ಅತ್ತೆ-ಮಾವ ಸಹಾಯ ಮಾಡಿದರು ಎನ್ನುತ್ತಾರೆ.

ಮಕ್ಕಳಿಗೆ ಅತ್ಯುತ್ತಮ ವಿದ್ಯಾಭ್ಯಾಸ ನೀಡಬೇಕೆಂದು ಕಷ್ಟಪಟ್ಟು ಪದವಿ ಮಾಡಿ ಮುಗಿಸಿದೆ, 2018ರಲ್ಲಿ ಮಕ್ಕಳ ಜೊತೆ ರಾಜಸ್ತಾನದ ಕೋಟಾಗೆ ಹೋಗಿ ಸರ್ವೋದಯ ಶಾಲೆಯಲ್ಲಿ ಪ್ರವೇಶ ಪಡೆದೆವು. ಅಲ್ಲಿ ಅಲ್ಲೆನ್ ಕೆರಿಯರ್ ಇನ್ಸ್ ಟಿಟ್ಯೂಟ್ ನಲ್ಲಿ ಸೊಯೆಬ್ ಮೆಡಿಕಲ್ ಕೋಚಿಂಗ್ ಪಡೆದನು. ಅಲ್ಲಿಯೇ ಎರಡು ವರ್ಷ ಇದ್ದು ಕೋಚಿಂಗ್ ಮುಗಿಸಿಕೊಂಡು ಊರಿಗೆ ಹೋದೆವು ಎನ್ನುತ್ತಾರೆ ತಾಯಿ ರಿಜಿಯಾ.

ಸೋಯೆಬ್ ನ ಪೋಷಕರಲ್ಲಿದ್ದ ದೃಢ ನಿರ್ಧಾರದಿಂದ ಅವರ ಮಗನಿಗೆ ಇಷ್ಟು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಸೋಯೆಬ್ ನ ಬಾಲ್ಯ ಸ್ನೇಹಿತ ಅಪ್ರೊಝ್ ಅಹ್ಮದ್ ಹೇಳುತ್ತಾರೆ.

Stay up to date on all the latest ರಾಷ್ಟ್ರೀಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp