ಕೋವಿಡ್-19 ಪ್ರಸರಣದ ನಡುವೆಯೂ ಐಸಿಎಂಆರ್ ನಿಂದ ಬಂತು ಸಮಾಧಾನಕರ ಸುದ್ದಿ! 

ದೇಶಾದ್ಯಂತ ಕೋವಿಡ್-19 ಪ್ರಸರಣ ಇನ್ನೂ ನಿಯಂತ್ರಣಕ್ಕೆ ಸಿಕ್ಕಿಲ್ಲ. ಪರಿಸ್ಥಿತಿ ಹೀಗಿರುವಾಗಲೂ ಸಮಾಧಾನಕರ ಅಂಶವೊಂದು ಐಸಿಎಂಆರ್ ನಿಂದ ಬಹಿರಂಗಗೊಂಡಿದೆ. 
ಮುಂಬೈ ಮೆಟ್ರೋದಲ್ಲಿ ಸ್ಯಾನಿಟೈಸೇಷನ್ (ಸಂಗ್ರಹ ಚಿತ್ರ)
ಮುಂಬೈ ಮೆಟ್ರೋದಲ್ಲಿ ಸ್ಯಾನಿಟೈಸೇಷನ್ (ಸಂಗ್ರಹ ಚಿತ್ರ)

ನವದೆಹಲಿ: ದೇಶಾದ್ಯಂತ ಕೋವಿಡ್-19 ಪ್ರಸರಣ ಇನ್ನೂ ನಿಯಂತ್ರಣಕ್ಕೆ ಸಿಕ್ಕಿಲ್ಲ. ಪರಿಸ್ಥಿತಿ ಹೀಗಿರುವಾಗಲೂ ಸಮಾಧಾನಕರ ಅಂಶವೊಂದು ಐಸಿಎಂಆರ್ ನಿಂದ ಬಹಿರಂಗಗೊಂಡಿದೆ. 

ಕೊರೋನಾದ ವೈರಾಣುವಿನ ಜಿನೋಮ್ ಅಂದರೆ ವಂಶವಾಹಿಗಳ ಗುಚ್ಛದ ಅಧ್ಯಯನದಲ್ಲಿ ಸಮಾಧಾನಕರ ಅಂಶ ಬಹಿರಂಗವಾಗಿದ್ದು, ಮಹತ್ವದ ರೂಪಾಂತರ ಹೊಂದಿಲ್ಲ ಎಂದು ತಿಳಿದುಬಂದಿದೆ. 

ಜಾಗತಿಕ ಮಟ್ಟದಲ್ಲಿ ಕೊರೋನಾ ಹೊಸದಾಗಿ ಪತ್ತೆಯಾಗಿದ್ದಾಗ ಈ ವೈರಾಣು ನಿರಂತರ ರೂಪಾಂತರ ಹೊಂದುತ್ತಿದ್ದದ್ದು ವೈದ್ಯಕೀಯ ಹಾಗೂ ತಜ್ಞರ ವಲಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು. 

ಆದರೆ ಇತ್ತೀಚೆಗೆ ಭಾರತದಾದ್ಯಂತ ನಡೆದಿರುವ ಅಧ್ಯಯನದ ಮೂಲಕ ಇಲ್ಲಿ ಪತ್ತೆಯಾಗಿರುವ ವೈರಾಣುವಿನ ಪ್ರಬೇಧಗಳು ರೂಪಾಂತರಗೊಂಡಿಲ್ಲ ಎಂದು ತಿಳಿದುಬಂದಿದೆ. ಪ್ರಬೇಧಗಳು ರೂಪಾಂತರಗೊಂಡಷ್ಟೂ ಲಸಿಕೆ ತಯಾರಿಕೆ ಪ್ರಕ್ರಿಯೆಯಲ್ಲಿ ಹಿನ್ನಡೆಯುಂಟಾಗುತ್ತದೆ ಎಂಬುದು ಆತಂಕಕ್ಕೆ ಕಾರಣವಾಗಿದ್ದ ಅಂಶವಾಗಿತ್ತು. 

ಆದರೆ ಇತ್ತೀಚಿವ ಜಾಗತಿಕ ಅಧ್ಯಯನಗಳ ಪ್ರಕಾರ ಈಗ ಸಿದ್ಧವಾಗುತ್ತಿರುವ ಲಸಿಕೆಗಳ ಮೇಲೆ ಕೊರೋನಾ ವೈರಾಣು ರೂಪಾಂತರ ಯಾವುದೇ ಪರಿಣಾಮವನ್ನೂ ಬೀರುವುದಿಲ್ಲ ಎಂದು ಹೇಳಲಾಗಿದೆ. ಹೊಸ ಪ್ರಬೇಧಗಳು ಕಡಿಮೆ ಪರಿಣಾಮಕಾರಿಯಾಗಿದ್ದು, ಬೇಗ ಸಾಯುತ್ತವೆ, ಅತ್ಯಂತ ಶಕ್ತಿಯುತವಾದ ಕೊರೋನಾ ವೈರಸ್ ಬೇಗ ಹರಡುತ್ತವೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com