ಲಡಾಕ್ ನ ಪ್ರತಿ ಇಂಚು ಭೂಮಿ ಬಗ್ಗೆಯೂ ಎಚ್ಚರವಾಗಿದ್ದೇವೆ, ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ: ಅಮಿತ್ ಶಾ

ಲಡಾಕ್ ನಲ್ಲಿ ಚೀನಾದೊಂದಿಗೆ ಕಳೆದ ಐದೂವರೆ ತಿಂಗಳಿನಿಂದ ಸತತ ಸೇನೆಯ ಸಂಘರ್ಷದ ಬಗ್ಗೆ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರತಿ ಇಂಚು ಭೂಮಿ ಬಗ್ಗೆ ಕಾಳಜಿ ಹೊಂದಿದ್ದು ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ಲಡಾಕ್ ನಲ್ಲಿ ಚೀನಾದೊಂದಿಗೆ ಕಳೆದ ಐದೂವರೆ ತಿಂಗಳಿನಿಂದ ಸತತ ಸೇನೆಯ ಸಂಘರ್ಷದ ಬಗ್ಗೆ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರತಿ ಇಂಚು ಭೂಮಿ ಬಗ್ಗೆ ಕಾಳಜಿ ಹೊಂದಿದ್ದು ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಲಡಾಕ್ ನಲ್ಲಿ ಚೀನಾದೊಂದಿಗಿನ ಸೇನೆ ನಿಲುಗಡೆ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಮಿಲಿಟರಿ ಮತ್ತು ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಮ್ಮ ಇಂಚಿಂಚು ಭೂಮಿ ಬಗ್ಗೆ ಕೂಡ ನಾವು ಜಾಗ್ರತರಾಗಿದ್ದೇವೆ. ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ದೇಶದ ಸ್ವಾಯತ್ತತೆ ಮತ್ತು ಗಡಿಯನ್ನು ರಕ್ಷಿಸಲು ನಮ್ಮ ಸೇನಾಪಡೆ ಮತ್ತು ನಾಯಕತ್ವ ಸಮರ್ಥವಾಗಿದೆ ಎಂದು ಇಂಗ್ಲಿಷ್ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ದೇಶದ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com