ಅಸ್ಸಾಂ- ಮಿಜೋರಾಮ್ ಗಡಿ ವಿವಾದದಲ್ಲಿ ಘರ್ಷಣೆ: ಪ್ರಧಾನಿ ಕಚೇರಿ, ಗೃಹ ಸಚಿವಾಲಯಕ್ಕೆ ಸಿಎಂ ಸೋನೋವಾಲ್ ಕರೆ!

ಅಸ್ಸಾಂ-ಮಿಜೋರಾಮ್ ಗಡಿ ವಿವಾದ ಘರ್ಷಣೆಗೆ ತಿರುಗಿದ್ದು ಪ್ರಧಾನಿ ಕಚೇರಿ ಹಾಗೂ ಗೃಹ ಸಚಿವಾಲಯಕ್ಕೆ ಸಿಎಂ ಸರ್ಬಾನಂದ ಸೋನೋವಾಲ್ ಕರೆ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. 
ಅಸ್ಸಾಂ- ಮಿಜೋರಾಮ್ ಗಡಿ ವಿವಾದದಲ್ಲಿ ಘರ್ಷಣೆ: ಪ್ರಧಾನಿ ಕಚೇರಿ, ಗೃಹ ಸಚಿವಾಲಯಕ್ಕೆ ಸಿಎಂ ಸೋನೋವಾಲ್ ಕರೆ!
ಅಸ್ಸಾಂ- ಮಿಜೋರಾಮ್ ಗಡಿ ವಿವಾದದಲ್ಲಿ ಘರ್ಷಣೆ: ಪ್ರಧಾನಿ ಕಚೇರಿ, ಗೃಹ ಸಚಿವಾಲಯಕ್ಕೆ ಸಿಎಂ ಸೋನೋವಾಲ್ ಕರೆ!

ನವದೆಹಲಿ: ಅಸ್ಸಾಂ-ಮಿಜೋರಾಮ್ ಗಡಿ ವಿವಾದ ಘರ್ಷಣೆಗೆ ತಿರುಗಿದ್ದು ಪ್ರಧಾನಿ ಕಚೇರಿ ಹಾಗೂ ಗೃಹ ಸಚಿವಾಲಯಕ್ಕೆ ಸಿಎಂ ಸರ್ಬಾನಂದ ಸೋನೋವಾಲ್ ಕರೆ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. 

ಭಾನುವಾರದಂದು ಉಂಟಾದ ಗಡಿ ಘರ್ಷಣೆಯಲ್ಲಿ ಹಲವಾರು ಮಳಿಗೆ ಹಾಗೂ ಮನೆಗಳು ಬೆಂಕಿಗೆ ಆಹುತಿಯಾಗಿ ಹಿಂಸಾಚಾರಕ್ಕೆ ತಿರುಗಿತ್ತು. ಈ ಬೆನ್ನಲ್ಲೇ ಸಿಎಂ ಸರ್ಬಾನಂದ ಸೋನೋವಾಲ್ ಪ್ರಧಾನಿ ಕಚೇರಿ ಹಾಗೂ ಗೃಹ ಸಚಿವಾಲಯ ಹಾಗೂ ಮಿಜೋರಾಮ್ ಸಿಎಂ ಝೋರಮತಂಗ ಅವರ ಜೊತೆ ಮಾತುಕತೆ ನಡೆಸಿದ್ದಾರೆ. 

ಹಿಂಸಾಚಾರಕ್ಕೆ ತಿರುಗಿದ ಘಟನೆಯಲ್ಲಿ ಕನಿಷ್ಟ 8 ­ಜನರಿಗೆ ತೀವ್ರವಾದ ಗಾಯಗಳಾಗಿವೆ. ಅಸ್ಸಾಂನ ಕ್ಯಾಚರ್ ಮತ್ತು ಮಿಜೋರಾಂನ ಕೋಲಾಸಿಬ್ ನ ಗಡಿ ಭಾಗದಲ್ಲಿ ಈ ಹಿಂಸಾಚಾರಗಳು ವರದಿಯಾಗಿವೆ. ಮಿಜೋರಾಮ್ ಸಿಎಂ ಜೊತೆಗಿನ ಮಾತುಕತೆ ವೇಳೆ ಸಿಎಂ ಸೋನೋವಾಲ್ ಗಡಿ ಭಾಗದ ವಿಷಯಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com