ಮಹಾರಾಷ್ಟ್ರ ಐತಿಹಾಸಿಕ ಆರ್ಥಿಕ ಬಿಕ್ಕಟ್ಟನ್ನುಎದುರಿಸುತ್ತಿದೆ: ಶರದ್ ಪವಾರ್

ಮಹಾರಾಷ್ಟ್ರ ಚಾರಿತ್ರಿಕ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ಕಾರಣ ಸರ್ಕಾರಕ್ಕೆ ಪರ್ಯಾಯ ಆಯ್ಕೆಗಳಿಲ್ಲ ಆದರೆ, ಸಾಲ ಪಡೆಯುವುದರ ಮೂಲಕ ರಾಜ್ಯದಲ್ಲಿನ ಪ್ರವಾಹ ಪೀಡಿತ ಜನರಿಗೆ ನೆರವು ನೀಡಬೇಕು ಎಂದಿದ್ದಾರೆ.
ಶರದ್ ಪವಾರ್
ಶರದ್ ಪವಾರ್

ಮುಂಬೈ: ಮಹಾರಾಷ್ಟ್ರ ಚಾರಿತ್ರಿಕ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ಕಾರಣ ಸರ್ಕಾರಕ್ಕೆ ಪರ್ಯಾಯ ಆಯ್ಕೆಗಳಿಲ್ಲ ಆದರೆ, ಸಾಲ ಪಡೆಯುವುದರ ಮೂಲಕ ರಾಜ್ಯದಲ್ಲಿನ ಪ್ರವಾಹ ಪೀಡಿತ ಜನರಿಗೆ ನೆರವು ನೀಡಬೇಕು ಎಂದಿದ್ದಾರೆ.

ಮರಾಠವಾಡ ವಲಯದಲ್ಲಿ ಪ್ರವಾಹ ಪರಿಸ್ಥಿತಿ ಪರಾಮರ್ಶೆಗೆ ಪ್ರವಾಸಕ್ಕೆ ತೆರಳಿರುವ ಶರದ್ ಪವಾರ್, ಒಸ್ಮಾನಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪ್ರಮಾಣದ ಆರ್ಥಿಕ ಬಿಕ್ಕಟ್ಟಿನ ಕಾರಣ ರಾಜ್ಯ ಸರ್ಕಾರ ಒಂದೇ ಏನೂ ಮಾಡಲು ಆಗಲ್ಲ ಎಂದು ಹೇಳಿದರು.

ಕಳೆದ ವಾರ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಪುಣೆ, ಔರಾಂಗಾಬಾದ್ ಮತ್ತು ಕೊಂಕಣ ವಿಭಾಗದಲ್ಲಿ ಕನಿಷ್ಠ 48 ಜನರು ಸಾವನ್ನಪ್ಪಿದು, ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ.

ಒಸ್ಮಾನಾಬಾದ್, ಲಾಟೂರ್, ಸೊಲ್ಲಾಪುರ, ನಾಂದೇಡ್ ನಲ್ಲಿ ಪ್ರವಾಹ ಪರಿಸ್ಥಿತಿ ಹೆಚ್ಚಾಗಿದೆ. ಆದರೆ, ರಾಜ್ಯಸರ್ಕಾರಕ್ಕೆ ಬೇರೆ ಆಯ್ಕೆಗಳಿಲ್ಲ. ರಾಜ್ಯಕ್ಕೆ ಕೇಂದ್ರದ ನೆರವು ಬೇಕಾಗಿದೆ. ಉಭಯ ಸರ್ಕಾರಗಳು ಇಂತಹ ಬಿಕ್ಕಟ್ಟನ್ನು ಎದುರಿಸಬೇಕಾಗಿದೆ ಎಂದು ಪವಾರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com