
ಕೋವಿಡ್-19 ಪ್ರಸರಣ, ಆರ್ಥಿಕತೆ ಹಾಳುಗೆಡವಿದ್ದಕ್ಕೆ ಕೇಂದ್ರದ ವಿರುದ್ಧ ರಾಹುಲ್ ಕಿಡಿ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭಾರತದ ಜಿಡಿಪಿ 2020 ನೇ ಸಾಲಿನಲ್ಲಿ ಬಾಂಗ್ಲಾದೇಶಕ್ಕಿಂತ ಕಡಿಮೆ ಬಂದಿರುವ ಹಾಗೂ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಅಂಕಿ-ಅಂಶಗಳನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಆರ್ಥಿಕತೆಯನ್ನು ಸಂಪೂರ್ಣವಾಗಿ ಹಾಳು ಮಾಡುವುದು ಹೇಗೆ ಹಾಗೂ ಕೋವಿಡ್-19 ನ್ನು ಗರಿಷ್ಠ ಪ್ರಸರಣ ಮಾಡುವುದು ಹೇಗೆ ಎಂದು ಟ್ವಿಟರ್ ನಲ್ಲಿ ಬರೆದು ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದಾರೆ.
How to completely destroy an economy and infect the maximum number of people really quickly. pic.twitter.com/5kbMpmnIpZ
— Rahul Gandhi (@RahulGandhi) October 19, 2020
ಆರ್ಥಿಕತೆಯಷ್ಟೇ ಅಲ್ಲದೇ ಕೋವಿಡ್-19 ನ್ನು ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶ, ವಿಯೆಟ್ನಾಮ್ ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತಿವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Even a few years ago none could have imagined India’s economy being where it is. A part of this is caused by Covid, but only a part—see Table. Lessons: Don’t be in data denial. Mistakes happen—admit & take corrective action. Use the talent & expertise available in the country. pic.twitter.com/5HbWgwufGW
— Kaushik Basu (@kaushikcbasu) October 19, 2020
ಆರ್ಥಿಕತೆ ವಿಷಯವಾಗಿ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿರುವುದು ಇದೇ ಮೊದಲೇನು ಅಲ್ಲ.
ಕೆಲವೇ ವರ್ಷಗಳ ಹಿಂದೆಯೂ ಭಾರತದ ಆರ್ಥಿಕತೆ ಇಂದು ಇರುವ ಸ್ಥಿತಿಗೆ ಬರಲಿದೆ ಎಂದು ಯಾರೂ ಊಹಿಸಿರಲಿಲ್ಲ. ಕೋವಿಡ್-19 ಭಾಗಶಃವಷ್ಟೇ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ತಪ್ಪನ್ನು ಒಪ್ಪಿಕೊಳ್ಳಿ, ತಿದ್ದಿಕೊಳ್ಳಿ, ದೇಶದಲ್ಲಿ ಲಭ್ಯವಿರುವ ಪ್ರತಿಭೆ ಹಾಗೂ ಪರಿಣತಿಯನ್ನು ಬಳಸಿಕೊಳ್ಳಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.